70 ಮಿಲಿಯನ್ ದಾಟಿದ ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ; ಒಂದೇ ವರ್ಷದಲ್ಲಿ 10 ಮಿಲಿಯನ್​ ಹೆಚ್ಚಳ..

TV9 Digital Desk

| Edited By: Lakshmi Hegde

Updated on: Jul 29, 2021 | 11:33 AM

PM Modi Twitter Handle: ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಟ್ವಿಟರ್​ನಲ್ಲಿ 30.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 129.8 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ.

70 ಮಿಲಿಯನ್ ದಾಟಿದ ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ; ಒಂದೇ ವರ್ಷದಲ್ಲಿ 10 ಮಿಲಿಯನ್​ ಹೆಚ್ಚಳ..
ನರೇಂದ್ರ ಮೋದಿ
Follow us

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ಟ್ವಿಟರ್​ ಅಕೌಂಟ್ (Twitter Handle) ​​ನಲ್ಲಿ ಫಾಲೋವರ್ಸ್ ಸಂಖ್ಯೆ 70 ಮಿಲಿಯನ್​ (7 ಕೋಟಿ) ದಾಟಿದ್ದು, ಇದೊಂದು ಹೊಸ ಮೈಲಿಗಲ್ಲಾಗಿದೆ. ಈ ಮೂಲಕ ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಗತಿಕ ಸಕ್ರಿಯ ರಾಜಕಾರಣಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ನರೇಂದ್ರ ಮೋದಿಯವರು 2009ರಲ್ಲಿ ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗಿನ ಸಂದರ್ಭದಲ್ಲಿ ಟ್ವಿಟರ್​ ಬಳಕೆ ಶುರು ಮಾಡಿದ್ದರು. 2010ರ ಹೊತ್ತಿಗೆ ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದರು. 2020ರಲ್ಲಿ ನರೇಂದ್ರ ಮೋದಿ ಟ್ವಿಟರ್​ ಅಕೌಂಟ್ ಫಾಲೋವರ್ಸ್​ ಸಂಖ್ಯೆ​ 60 ಮಿಲಿಯನ್ ಮಾರ್ಕ್​ನ್ನು ದಾಟಿತ್ತು.

ಅಮೆರಿಕ ಅಧ್ಯಕ್ಷರಿಗೆ 30.9 ಮಿಲಿಯನ್ ಫಾಲೋವರ್ಸ್ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರು ಟ್ವಿಟರ್​ನಲ್ಲಿ 30.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 129.8 ಮಿಲಿಯನ್​ ಫಾಲೋವರ್ಸ್ ಹೊಂದಿದ್ದಾರೆ. ಹಾಗೇ ಫ್ರಾನ್ಸ್​ ಅಧ್ಯಕ್ಷ ಎಮ್ಮಾನ್ಯುಯೆಲ್​ ಮಾಕ್ರೋನ್​ 7.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ನಮ್ಮ ಗೃಹ ಸಚಿವ ಅಮಿತ್ ಶಾರಿಗೆ ಟ್ವಿಟರ್​ನಲ್ಲಿ 26.3 ಮಿಲಿಯನ್ ಅನುಯಾಯಿಗಳು ಇದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 19.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಪ್ರಧಾನಿ ಮೋದಿ ಸದಾ ಸಕ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ಸೇರಿ ಎಲ್ಲ ರೀತಿಯ ಸಾಮಾಜಿಕ ಮಾಧ್ಯಮಗಳಲ್ಲೂ ಸದಾ ಸಕ್ರಿಯರಾಗಿರುತ್ತಾರೆ. ಗಣ್ಯರ ಹುಟ್ಟುಹಬ್ಬಗಳಿಗೆ ವಿಶ್ ಮಾಡುವುದು, ಸಾಧಕರನ್ನು ಗೌರವಿಸುವ, ಎಲ್ಲಾದರೂ ದುರಂತವಾದಾಗ, ಯಾರಾದರೂ ಮಡಿದಾಗ ಸಂತಾಪ ಸೂಚಿಸುವ ಪೋಸ್ಟ್​ಗಳನ್ನು ಹಾಕುತ್ತಾರೆ. ಕಳೆದ ಮಹಿಳಾ ದಿನಾಚರಣೆಯಂದು ತಮ್ಮ ಸಾಮಾಜಿಕ ಜಾಲತಾಣಗಳನ್ನು ಸಾಧಕ ಮಹಿಳೆಯರಿಗೆ ಬಿಟ್ಟುಕೊಟ್ಟಿದ್ದನ್ನೂ ಇಲ್ಲಿ ಸ್ಮರಿಸಬಹುದು.

Modi Twitter Followers

ಇದನ್ನೂ ಓದಿ: International Tiger Day 2021: ಮಾನವನ ಜೀವನದಲ್ಲಿ ಹುಲಿಯೂ ಬಹು ಮುಖ್ಯ ಪಾತ್ರವನ್ನು ಹೊಂದಿದೆ; ಈ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

PM Narendra Modi twitter handle crossed the Mark of 70 Million

ತಾಜಾ ಸುದ್ದಿ

Related Stories

Click on your DTH Provider to Add TV9 Kannada