AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Tiger Day 2021: ಮಾನವನ ಜೀವನದಲ್ಲಿ ಹುಲಿಯೂ ಬಹು ಮುಖ್ಯ ಪಾತ್ರವನ್ನು ಹೊಂದಿದೆ; ಈ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ

ಇಂದು ಅಂತರಾಷ್ಟ್ರೀಯ ಹುಲಿ ದಿನ: ಪ್ರಸ್ತುತದಲ್ಲಿ ಜಗತ್ತಿನಾದ್ಯಂತ ಒಟ್ಟೂ ಹುಲಿಗಳ ಸಂಖ್ಯೆ 3,900 ಎಂದು ವರದಿಗಳಿಂದ ತಿಳಿದು ಬಂದಿದೆ. ಕಾಡು ಹುಲಿಗಳ ಸಂಖ್ಯೆಯಲ್ಲಿ 3,000 ಹುಲಿಗಳು ಭಾರತದಲ್ಲಿದೆ.

International Tiger Day 2021: ಮಾನವನ ಜೀವನದಲ್ಲಿ ಹುಲಿಯೂ ಬಹು ಮುಖ್ಯ ಪಾತ್ರವನ್ನು ಹೊಂದಿದೆ; ಈ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ
ಇಂದು ಅಂತರಾಷ್ಟ್ರೀಯ ಹುಲಿ ದಿನ
TV9 Web
| Edited By: |

Updated on:Jul 29, 2021 | 11:41 AM

Share

ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ. ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಜುಲೈ 29ರಂದು ಅಂತರಾಷ್ಟ್ರೀಯ ಹುಲಿ ದಿನವನ್ನು(International Tiger Day) ಆಚರಿಸಲಾಗುತ್ತದೆ. ಅಕ್ರಮವಾಗಿ ನಡೆಸುತ್ತಿರುವ ವನ್ಯಜೀವಿಗಳ ವ್ಯಾಪಾರ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಕಾಡಿನ ನಾಶದಿಂದಾಗಿ ದೇಶದಲ್ಲಿ ಕಂಡು ಬರುತ್ತಿರುವ ಹುಲಿಗಳ ಸಂಖ್ಯೆ ಇಳಿಮುಖ ಕಾಣುತ್ತಿವೆ. ದುರಾದೃಷ್ಟವಶಾತ್​ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪೈಕಿ ಹುಲಿ ಕೂಡಾ ಒಂದು.

ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಪ್ರಕಾರ ವಿಶ್ವದಲ್ಲಿ ಹುಲಿಗಳ ಸಂಖ್ಯೆ 150 ವರ್ಷಗಳಲ್ಲಿ ಶೇ.95ಕ್ಕಿಂತಲೂ ಕಡಿಮೆಯಾಗಿದೆ. ಪ್ರಸ್ತುತದಲ್ಲಿ ಜಗತ್ತಿನಾದ್ಯಂತ ಒಟ್ಟೂ ಹುಲಿಗಳ ಸಂಖ್ಯೆ 3,900 ಎಂದು ವರದಿಗಳಿಂದ ತಿಳಿದು ಬಂದಿದೆ. ಕಾಡು ಹುಲಿಗಳ ಸಂಖ್ಯೆಯಲ್ಲಿ 3,000 ಹುಲಿಗಳು ಭಾರತದಲ್ಲಿದೆ.

ಅಳಿವಿನಂಚಿನಲ್ಲಿಗಿಳಿಯುವ ಮೊದಲು ಹುಲಿಗಳು ಏಷ್ಯಾದ ಬಹುತೇಕ ಭಾಗಗಳಲ್ಲಿ ಸಂಚರಿಸುತ್ತಿದ್ದವು. ದುರಾದೃಷ್ಟವಶಾತ್​ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿರುವ ಪರಿಣಾಮ ವಿಶ್ವದ 13 ದೇಶಗಳಲ್ಲಿ ನಿರ್ದಿಷ್ಟ ಕಾಡುಗಳು ಮತ್ತು ಹುಲ್ಲುಗಾವಲುಗಳಲ್ಲಿ ಮಾತ್ರ ಕಂಡು ಬರುತ್ತಿದೆ.

ಕಾಡು ಪ್ರಾಣಿಗಳ ಮಹತ್ವದ ಕುರಿತಾಗಿ ತಿಳಿಯಬೇಕಾದ ಕುತೂಹಲ ಸಂಗತಿಗಳು

ಆಹಾರ ಸರಪಳಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ಹುಲಿಗಳು ತಮ್ಮ ಪರಿಸರವನ್ನು ಆರೋಗ್ಯವಾಗಿರಿಸಿಕೊಳ್ಳುತ್ತವೆ. ಪರಿಸರ ವ್ಯವಸ್ಥೆಗೆ ಇದು ಕೊಡುಗೆಯಾಗಿದೆ.

ಸಾಕಷ್ಟು ಹುಲಿಗಳಿಲ್ಲದೆ ಸಸ್ಯಹಾರಿಗಳು ಭೂಮಿಯನ್ನು ಅತಿಯಾಗಿ ಮೇಯಿಸಬಹುದು. ಇದು ಸ್ಥಳೀಯ ಪರಿಸರ ಸಮತೋಲನವನ್ನು ಹಾನಿಗೊಳಿಸುತ್ತದೆ.

ಕಾಡಿನಲ್ಲಿ ವಾಸಿಸುವ ಪರಭಕ್ಷಕಗಳಲ್ಲಿ ಹುಲಿಗಳು ಒಂದು. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಪ್ರಕಾರ ಹುಲಿಗಳು ರಾತ್ರಿ ಬೇಟೆಯಾಡುವ ಸಂದರ್ಭದಲ್ಲಿ 9ರಿಂದ 19 ಕಿಲೋಮೀಟರ್​ವರೆಗೆ ಸಂಚರಿಸುತ್ತವೆ.

ಯುನೈಟೆಡ್ ಸ್ಟೇಟ್​ನಲ್ಲಿ ಹುಲಿಗಳು ಕಾಡಿನಲ್ಲಿರುವುದಕ್ಕಿಂತ ಸೆರೆಯಲ್ಲಿಯೇ ಹೆಚ್ಚಾಗಿವೆ.

ಹುಲಿಗಳು ಸಾಮಾನ್ಯವಾಗಿ ಜಿಂಕೆಗಳನ್ನು ಬೇಟೆಯಾಡುತ್ತವೆ. ಸಾಮಾನ್ಯವಾಗಿ ದೊಡ್ಡದಾಗಿ ಬೆಳೆದಿರುವ ಜಿಂಕೆಯ ಮೇಲೆ ಹುಲಿಗಳ ಕಣ್ಣು ಬೀಳುವುದು ಹೆಚ್ಚು. ಒಂದು ದೊಡ್ಡ ಜಿಂಕೆಯನ್ನು ಬೇಟೆಯಾಡುವ ಮೂಲಕ ಹುಲಿ ಆ ಇಡೀ ದಿನದ ಹಸಿವನ್ನು ನೀಗಿಸಿಕೊಳ್ಳುತ್ತದೆ.

ಈ ವರ್ಷದ ಥೀಮ್​

‘ಅವರ ಉಳಿವು ನಮ್ಮ ಕೈಯಲ್ಲಿದೆ’ ಎನ್ನುವ ಥೀಮ್​ನೊಂದಿಗೆ ಈ ವರ್ಷದ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹುಲಿಯ ಸಂಖ್ಯೆಯು ಭಾರತದಲ್ಲಿ ಶೇ.70ರಷ್ಟಿದೆ. ಹಿಂದಿನ ವರ್ಷ ಕೊವಿಡ್19 ಸಾಂಕ್ರಾಮಿಕದಿಂದಾಗಿ ಆನ್​ಲೈನ್​ ಮೂಲಕ ಆಚರಿಸಲಾಯಿತು. ಟೈಗರ್ಸ್ ರಿಸರ್ವ್ಸ್ ಜಾರಿಯಲ್ಲಿರುವುದು ಹಾಗೂ ಪರಿಸರ ಇಲಾಖೆಯ ಪ್ರಯತ್ನಗಳಿಂದ ಭಾರತವು 2022ರ ಗುರಿಗಿಂತ ಮೊದಲೇ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ.

ಇದನ್ನೂ ಓದಿ:

Viral Video: ದೈತ್ಯಾಕಾರದ ಹುಲಿ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ‘ಹಲೋ ಬ್ರದರ್​’ ಎಂದ ವ್ಯಕ್ತಿ! ಹುಲಿಯ ರಿಯಾಕ್ಷನ್​ ಹೇಗಿದೆ ನೋಡಿ

ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ; ರಾಷ್ಟ್ರಪಕ್ಷಿ ಹಾಗೂ ರಾಷ್ಟ್ರಪ್ರಾಣಿ ಮುಖಾಮುಖಿಯಾದ ವಿಡಿಯೋ ವೈರಲ್

Published On - 11:27 am, Thu, 29 July 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ