Viral Video: ದೈತ್ಯಾಕಾರದ ಹುಲಿ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ‘ಹಲೋ ಬ್ರದರ್​’ ಎಂದ ವ್ಯಕ್ತಿ! ಹುಲಿಯ ರಿಯಾಕ್ಷನ್​ ಹೇಗಿದೆ ನೋಡಿ

ಸಾಮಾನ್ಯವಾಗಿ ಪ್ರಾಣಿಗಳೆಂದರೆ ಎಲ್ಲರಿಗೂ ಇಷ್ಟ. ಜತೆಜತೆಗೆ ಕಾಡು ಪ್ರಾಣಿಗಳೆಂದರೂ ಭಯವೂ ಇದೆ. ಆದರೆ ಇಲ್ಲೋರ್ವ ವ್ಯಕ್ತಿ ಹುಲಿಯ ಎದುರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಹೆಲೋ ಬ್ರದರ್​... ಅನ್ನುತ್ತಿದ್ದಾನೆ. ವಿಡಿಯೋ ನೋಡಿ.

Viral Video: ದೈತ್ಯಾಕಾರದ ಹುಲಿ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ‘ಹಲೋ ಬ್ರದರ್​’ ಎಂದ ವ್ಯಕ್ತಿ! ಹುಲಿಯ ರಿಯಾಕ್ಷನ್​ ಹೇಗಿದೆ ನೋಡಿ
ದೈತ್ಯಾಕಾರದ ಹುಲಿ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ‘ಹಲೋ ಬ್ರದರ್​’ ಎಂದ ವ್ಯಕ್ತಿ!
TV9kannada Web Team

| Edited By: shruti hegde

Jul 20, 2021 | 12:38 PM

ಸಾಮಾನ್ಯವಾಗಿ ಜನರು ತಮಾಷೆಗಾಗಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಕೆಲವು ಸಾಹಸಗಳು ಅಪಾಯಕಾರಿ ಎಂದು ಗೊತ್ತಿದ್ದರೂ ಸಹ ಮುನ್ನುಗ್ಗುತ್ತಾರೆ. ಜನರಲ್ಲಿ ಛಲ, ಹುಮ್ಮಸ್ಸು ಕೊಂಚ ಜಾಸ್ತಿಯೇ! ಇದು ಕೆಲವು ಬಾರಿ ಅಪಾಯಕ್ಕೆ ಸಿಲುಕಿಸಬಹುದು ಎಂಬುದನ್ನು ಎಂದೂ ಮರೆಯಬಾರದು. ಇಲ್ಲೋರ್ವ ವ್ಯಕ್ಯಿ ಕೂಡಾ ಅಂಥಹದ್ದೇ ಒಂದು ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಹುಲಿ ಅಪಾಯಕಾರಿ ಪ್ರಾಣಿ ಎಂದು ಗೊತ್ತಿದ್ದರೂ ಸಹ ಅದೆಷ್ಟೋ ವರ್ಷದ ಸ್ನೇಹಿತನಂತೆ ಮಾತನಾಡಿಸುತ್ತಿದ್ದಾನೆ. ಹಲೋ ಬ್ರದರ್​ ಅಂದಿದ್ದಕ್ಕೆ ಹುಲಿಯ ರಿಯಾಕ್ಷನ್​ ಹೇಗಿತ್ತು ಎಂದು ವಿಡಿಯೋ ನೋಡಿದ್ರೆ ನೀವೂ ಆಶ್ಚರ್ಯಗೊಳ್ಳುತ್ತೀರಾ.

ಸಾಮಾನ್ಯವಾಗಿ ಪ್ರಾಣಿಗಳೆಂದರೆ ಎಲ್ಲರಿಗೂ ಇಷ್ಟ. ಜತೆಜತೆಗೆ ಕಾಡು ಪ್ರಾಣಿಗಳೆಂದರೂ ಭಯವೂ ಇದೆ. ಆದರೆ ಇಲ್ಲೋರ್ವ ವ್ಯಕ್ತಿ ಹುಲಿಯ ಎದುರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಹೆಲೋ ಬ್ರದರ್​… ಅನ್ನುತ್ತಿದ್ದಾನೆ. ಹುಲಿಯು ಅಪಾಯಕಾರಿ ಪ್ರಾಣಿ ಎಂದು ಗೊತ್ತಿದ್ದರೂ ಸಹ ಮಾತನಅಡಿಸಲು ಮುಂದಾಗಿದ್ದಾನೆ. ವಿಡಿಯೋ ಇದಿಗ ಸಕತ್​ ವೈರಲ್​ ಅಗಿದೆ.

ಘಟನೆ ನೇಪಾಳದ ಅರಣ್ಯದಲ್ಲಿ ನಡೆದಿದೆ. ದಟ್ಟವಾದ ಕಾಡಿನ ಮಧ್ಯೆ ಮರಗಳ ಸಂದಿಯಿಂದ ಹುಲಿಯೊಂದು ನೋಡುತ್ತಿದೆ. ಪಿಳಿಪಿಳಿ ಕಣ್ಣುಬಿಡುತ್ತಾ ಮನುಷ್ಯನನ್ನೇ ದಿಟ್ಟಿಸಿ ನೋಡುತ್ತಿದೆ. ಹುಲಿಯ ಹೆಸರು ಕೇಳಿದಾಕ್ಷಣವೇ ಭಯವಾಗುವುದು ನಿಜ. ಅದರಲ್ಲಿಯೂ ಈ ಹುಲಿ ಆತನ ಎದುರೇ ನಿಂತಿದೆ. ಆದರೂ ಭಯಗೊಳ್ಳದ ವ್ಯಕ್ತಿ ವಿಡಿಯೋ ಮಾಡುತ್ತಾ ಹಲೋ ಸಹೋದರ.. ಎಂದು ಅದೆಷ್ಟೋ ವರ್ಷಗಳ ಸ್ನೇಹಿತನಂತೆ ಮಾತನಾಡಿಸುತ್ತಿದ್ದಾನೆ.

ಹುಲಿಯ ಜೊತೆ ತಮಾಷೆಯಾಗಿ ಸಮಾಚಾರ ವಿಚಾರಿಸಿಕೊಳ್ಳುವ ದೃಶ್ಯ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಹುಲಿ ಎದುರು ನಿಂತು ತಮಾಷೆ ಮಾಡುವುದು ತುಂಬಾ ಅಪಾಯಕಾರಿ ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ಬಳಿಕ ಇತರ ಸಾಮಾಜಿಕ ವೇದಿಕೆಗಳಲ್ಲಿ ವಿಡಿಯೋ ಹರಿಬಿಡಲಾಗುತ್ತಿದೆ.

ಇದನ್ನೂ ಓದಿ:

Viral Video: ತಾಯಿ ಹುಲಿಯೊಂದಿಗೆ ಪುಟಾಣಿ ಮರಿಗಳ ಚೆಲ್ಲಾಟ; ವಿಡಿಯೋ ನೋಡ್ತಾ ಇದ್ರೆ ಸಖತ್ ಟೈಂ ಪಾಸ್

Viral Video: ಆನೆ ಸಾಗುವಾಗ ಗುರಾಯಿಸಿದ ಕೆಂಪುಗಣ್ಣಿನ ಹುಲಿರಾಯ.. ಮುಂದೇನಾಯ್ತು? ವಿಡಿಯೋ ನೋಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada