‘ಛೋಟಾ ಪ್ಯಾಕೆಟ್ ಬಡಾ ಧಮಾಕಾ’ ತಮಟೆ ಬೀಟ್ಗೆ ಸ್ಟೈಲಿಶ್ ಸ್ಟೆಪ್ ಹಾಕಿದ ಪೋರ! ನೆಟ್ಟಿಗರೆಲ್ಲಾ ಫುಲ್ ಫಿದಾ
ಟ್ವಿಟರ್ನಲ್ಲಿ ಹರಿಬಿಡಲಾದ 24 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಬಾಲಕ ತಮಟೆ ಬೀಟ್ಗೆ ಸ್ಟೈಲಿಶ್ ಡಾನ್ಸ್ ಮಾಡಿದ್ದಾನೆ. ಕೆಸರಿರುವ ರಸ್ತೆಯನ್ನೂ ಲೆಕ್ಕಿಸದೇ ತಮಟೆ ಸದ್ದಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾನೆ. ವಿಡಿಯೋ ಇದೀಗ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಚಿಕ್ಕ ಮಕ್ಕಳ(Little Boy) ತಮಾಷೆ ವಿಡಿಯೋಗಳು ಹೆಚ್ಚು ಮನಸ್ಸುಗಳನ್ನು ಗೆಲ್ಲುತ್ತವೆ. ವಯಸ್ಸಿಗೂ ಮೀರಿದ್ದ ಕೆಲವು ಪ್ರತಿಭೆಗಳನ್ನು(Talent) ನೋಡಿದಾಕ್ಷಣ ಖುಷಿಯಾಗುತ್ತೆ ಜತೆಗೆ ಹೆಮ್ಮೆ ಅನಿಸುತ್ತದೆ. ಇದೀಗ ವೈರಲ್ ಆದ ವಿಡಿಯೋದಲ್ಲಿ(Viral Video) ಚಿಕ್ಕ ವಯಸ್ಸಿನ ಪೋರ ಸಕ್ಕತ್ತಾಗಿ ಸ್ಟೆಪ್ ಹಾಕುತ್ತಿದ್ದಾನೆ. ಈತನ ಡಾನ್ಸ್(Dance) ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.
ಟ್ವಿಟರ್ನಲ್ಲಿ ಹರಿಬಿಡಲಾದ 24 ಸೆಕೆಂಡುಗಳ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಬಾಲಕ ತಮಟೆ ಬೀಟ್ಗೆ ಸ್ಟೈಲಿಶ್ ಡಾನ್ಸ್ ಮಾಡಿದ್ದಾನೆ. ಕೆಸರಿರುವ ರಸ್ತೆಯನ್ನೂ ಲೆಕ್ಕಿಸದೇ ತಮಟೆ ಸದ್ದಿನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾನೆ. ವಿಡಿಯೋ ಇದೀಗ ವೈರಲ್ ಆಗಿದೆ.
ರಸ್ತೆ ತುಂಬಾ ಕೆಸರಾಗಿದೆ. ತಮಟೆ ಬೀಟ್ ಸದ್ದು ಕೇಳಿಸುತ್ತಿದೆ. ಸುತ್ತಲೂ ಜನರು ಸೇರಿದ್ದಾರೆ. ಅವರ ಮಧ್ಯದಲ್ಲಿ ನಿಂತ ಪೋರ ಕುಣಿಯುತ್ತಿದ್ದಾನೆ. ತಮಟೆ ಬೀಟ್ ವೇಗಗೊಳ್ಳುತ್ತಿದ್ದಂತೆಯೇ ಆತನೂ ವೇಗವಾಗಿ ಭರ್ಜರಿ ಡಾನ್ಸ್ ಮಾಡಿದ್ದಾನೆ. ವಿಡಿಯೋ ನೋಡಿದ ನೆಟ್ಟಿಗರು ಛೋಟಾ ಪ್ಯಾಕೆಟ್ ಬಡಾ ಧಮಾಕಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕನು ಉದ್ದ ಕೈತೋಳಿನ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾನೆ. ಮುಖಗವಸನ್ನೂ ಸಹ ಧರಿಸಿದ್ದಾನೆ. ತಮಟೆ ಸದ್ದು ಕಿವಿಗೆ ಬೀಳುತ್ತಿದ್ದಂತೆಯೇ ಕುಣಿಯಲು ಪ್ರಾರಂಭಿಸುತ್ತಾನೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದ್ದಂತೆಯೇ 64 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. 8 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಲಭ್ಯವಾಗಿವೆ. ರೀಟ್ವೀಟ್ಗಳನ್ನು ಸಹ ಮಾಡಲಾಗಿದೆ. ಬಾಲಕನ ಪ್ರತಿಭೆಗೆ ಕಾಮೆಂಟ್ಸ್ಗಳ ಸುರಿಮಳೆಯೇ ಹರಿದು ಬಂದಿದ್ದು, ಚಿಕ್ಕ ವಯಸ್ಸಿಗೆ ಒಳ್ಳೆಯ ಟ್ಯಾಲೆಂಟ್ ಇದೆ ಎಂಬ ಶ್ಲಾಘನೆ ವ್ಯಕ್ತವಾಗಿದೆ.
“Dance like no one is watching, love like you’ve never been hurt; sing like no one is listening, and live like it’s heaven on earth.” pic.twitter.com/2V0lW6JP8I
— Awanish Sharan (@AwanishSharan) July 18, 2021
ಇದನ್ನೂ ಓದಿ:
Published On - 2:50 pm, Tue, 20 July 21