Viral Video: ಮೈದುನನ ಮದುವೆಯಲ್ಲಿ ಹಮ್ ಆಪ್ ಕೆ ಹೈ ಕೋನ್​ ಚಿತ್ರದ ಹಾಡಿ​ಗೆ ಅತ್ತಿಗೆಯ ಸಕತ್​ ಸ್ಟೆಪ್​! ವಿಡಿಯೋ ವೈರಲ್

ವಿವಾಹದಲ್ಲಿ ನಡೆಯುವ ಅದೆಷ್ಟೋ ತಮಾಷೆಯ ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಜತೆಗೆ ಮದುವೆಯಲ್ಲಿ ನಡೆಯುವ ಕಾರ್ಯಕ್ರಮಗಳೂ ಸಹ ಜನರ ಮನಗೆಲ್ಲುತ್ತದೆ.

Viral Video: ಮೈದುನನ ಮದುವೆಯಲ್ಲಿ ಹಮ್ ಆಪ್ ಕೆ ಹೈ ಕೋನ್​ ಚಿತ್ರದ ಹಾಡಿ​ಗೆ ಅತ್ತಿಗೆಯ ಸಕತ್​ ಸ್ಟೆಪ್​! ವಿಡಿಯೋ ವೈರಲ್
ನೃತ್ಯ
Follow us
TV9 Web
| Updated By: shruti hegde

Updated on:Jul 11, 2021 | 2:19 PM

ಮದುವೆ ಅಂದಾಕ್ಷಣ ಮನೆಯಲ್ಲಿ ಸಡಗರ.. ಸಂಭ್ರಮ. ಈಗೆಲ್ಲಾ ವಿವಾಹದ ದಿನ ಸಿನಿಮಾ ಹಾಡಿಗೆ ಸ್ಟೆಪ್​ ಹಾಕುತ್ತ ವಿಜೃಂಭಣೆಯಿಂದ ವಿವಾಹ ಮಹೋತ್ಸವವನ್ನು ಆಚರಿಸುತ್ತಾರೆ. ಇಲ್ಲಿಯೂ ಹಾಗೆ ತನ್ನ ಮೈದುನನ ಮದುವೆಯಲ್ಲಿ ಅತ್ತಿಗೆ ಸುಂದರವಾಗಿ ರೆಡಿ ಆಗಿ ಸಕತ್​ ಸ್ಟೆಪ್​ ಹಾಕಿದ್ದಾರೆ. ಬಾಲಿವುಡ್​ ಸಾಂಗ್​​ಗೆ ಭರ್ಜರಿ ನೃತ್ಯ ಮಾಡಿದ ಅತ್ತಿಗೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವಿವಾಹದಲ್ಲಿ ನಡೆಯುವ ಅದೆಷ್ಟೋ ತಮಾಷೆಯ ಸನ್ನಿವೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಜತೆಗೆ ಮದುವೆಯಲ್ಲಿ ನಡೆಯುವ ಕಾರ್ಯಕ್ರಮಗಳೂ ಸಹ ಜನರ ಮನಗೆಲ್ಲುತ್ತದೆ. ಮನೆಯಲ್ಲಿ ಮೈದುನನಿಗೆ ಅತ್ತಿಗೆ ಅಮ್ಮನ ಸಮಾನ. ತನ್ನ ತಮ್ಮನಂತಿರುವ ಮೈದುನನ ಮದುವೆ ಸಂಭ್ರಮದಲ್ಲಿ ಅತ್ತಿಗೆ ಸ್ಟೆಪ್ ಹಾಕಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸಲ್ಮಾನ್​ಖಾನ್​ ಅಭಿನಯದ ಹಮ್ ಆಪ್ ಕೆ ಹೈ ಕೋನ್ ಚಿತ್ರದ ಹಾಡಿಗೆ ಅತ್ತಿಗೆ ಡಾನ್ಸ್​ ಮಾಡಿದ್ದಾರೆ. ಭರ್ಜರಿ ಡಾನ್ಸ್​ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ನಿಮ್ಮ ಅತ್ತಿಗೆಗೆ ಟ್ಯಾಗ್​ ಮಾಡಿ ಎಂಬ ಶಿರ್ಷಿಕೆಯೊಂದಿಗೆ ವಿಡಿಯೋ ಹರಿದಾಡುತ್ತಿದೆ.

ಮೈದುನನ ಮದುವೆ.. ಮನೆಗೆ ತಂಗಿ ಬರುತ್ತಿದ್ದಾಳೆ, ಒಳ್ಳೆಯ ಸ್ನೇಹಿತೆಯಾಗುತ್ತಾಳೆ ಎಂಬ ಖುಷಿಯಲ್ಲಿ ಅತ್ತಿಗೆ ಕುಣಿಯುತ್ತಿದ್ದಾರೆ. ಕೆಂಪು ಬಣ್ಣದ ಭರ್ಜರಿ ಲೆಹೆಂಗಾ ತೊಟ್ಟು ಬಾಲಿವುಡ್​ ಸಾಂಗ್​ಗೆ ನೃತ್ಯ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ಮೈದುನನ ಮದುವೆಯಲ್ಲಿ ಅತ್ತಿಗೆ ಸ್ಟೆಪ್​ ಹಾಕಿರುವುದು ಎಷ್ಟು ಕ್ಯೂಟ್​ ಆಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ:

Jahnavi Kapoor Hot Dance : ನಟಿ ಜಾನ್ವಿ ಕಪೂರ್ ಹಾಟ್ ನೃತ್ಯ ಕಂಡ ಅವರ ಅಭಿಮಾನಿಗಳು ಫಿದಾ…!

Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!

Published On - 2:16 pm, Sun, 11 July 21