AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಹುಡುಗನ ಕೊರಳಿಗೆ ವರಮಾಲೆ ಎಸೆದ ಹುಡುಗಿ; ಮದುವೆ ಮಂಟಪದಲ್ಲಿ ಹೀಗ್ಯಾಕೆ ಸಿಟ್ಟು?! ವಿಡಿಯೋ ನೋಡಿ

ಈ ವಿಡಿಯೋದಲ್ಲಿ ಮದುಮಗಳು ಹಾಗೂ ಮದುಮಗನ ನಡುವೆ ಹಾಗೊಂದು ಆಶ್ಚರ್ಯಕರ ಘಟನೆ ನಡೆದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಪಾಪ ಅಂದುಕೊಂಡಿದ್ದಾರೆ ಮತ್ತೊಂದೆಡೆ ನಕ್ಕು ನಕ್ಕು ಸುಸ್ತಾಯ್ತು ಎಂದೂ ಕಮೆಂಟ್ ಮಾಡಿದ್ದಾರೆ.

Viral Video: ಹುಡುಗನ ಕೊರಳಿಗೆ ವರಮಾಲೆ ಎಸೆದ ಹುಡುಗಿ; ಮದುವೆ ಮಂಟಪದಲ್ಲಿ ಹೀಗ್ಯಾಕೆ ಸಿಟ್ಟು?! ವಿಡಿಯೋ ನೋಡಿ
ವೈರಲ್ ವಿಡಿಯೋ
TV9 Web
| Updated By: ganapathi bhat|

Updated on: Jul 11, 2021 | 10:37 PM

Share

ವಿವಾಹ ಸಮಾರಂಭದ ತಮಾಷೆಯ ಅಥವಾ ಮದುವೆ ಮನೆಯಲ್ಲಿ ಅವಾಂತರ ಸೃಷ್ಟಿಯಾಗಿರುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಹುಡುಗಿಯ ಆಶ್ಚರ್ಯಕರ ನಡತೆ, ಹುಡುಗನ ಪೇಚಾಟ, ಮದುವೆಯಲ್ಲಿ ವಿಶೇಷ ವ್ಯವಸ್ಥೆ, ಅಸಮಾಧಾನ, ಸಂಬಂಧಿಕರ ಆಶ್ಚರ್ಯಗಳು ವೈರಲ್ ಆಗುತ್ತಿದೆ. ನೆಟ್ಟಿಗರು ಮದುವೆಯ ಗಮ್ಮತ್ತನ್ನು ಹಂಚಿಕೊಂಡು, ಕಮೆಂಟ್, ಲೈಕ್ ಮಾಡುತ್ತಿರುತ್ತಾರೆ. ಅಂತಹುದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮದುಮಗಳು ಹಾಗೂ ಮದುಮಗನ ನಡುವೆ ಹಾಗೊಂದು ಆಶ್ಚರ್ಯಕರ ಘಟನೆ ನಡೆದಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಪಾಪ ಅಂದುಕೊಂಡಿದ್ದಾರೆ ಮತ್ತೊಂದೆಡೆ ನಕ್ಕು ನಕ್ಕು ಸುಸ್ತಾಯ್ತು ಎಂದೂ ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಹುಡುಗಿ ವರಮಾಲೆಯನ್ನು ನಿಂತಲ್ಲಿಂದಲೇ ಮೇಲಕ್ಕೆ ಎಸೆದು ಬಿಟ್ಟಿದ್ದಾಳೆ. ಆ ಮಾಲೆಯು ಹುಡುಗನ ಕೊರಳಿನಿಂದ ಜಾರಿ ಸೊಂಟದವರೆಗೂ ಬಂದುಬಿಟ್ಟಿದೆ. ಹುಡುಗನ ಕೈಯಲ್ಲೂ ಮಾಲೆ ಇದ್ದಕಾರಣ ಆತ ಸುಮ್ಮನೇ ನೋಡುತ್ತಾ ನಿಂತಿದ್ದಾನೆ. ಬಳಿಕ ಹಿಂದೆ ನಿಂತವರು ಅದನ್ನು ಸರಿಪಡಿಸಿದ್ದಾರೆ.

ವಿಡಿಯೋ ನೋಡಿ..

ಬಳಿಕ ಹುಡುಗ ಹುಡುಗಿಯ ಕೊರಳಿಗೆ ಸರಿಯಾಗೇ ಮಾಲೆ ಹಾಕಿದ್ದಾನೆ ಎಂಬುದು ಸಮಾಧಾನಕರ ವಿಷಯ. ಹುಡುಗಿ ಹಾಕಿದ ಮಾಲೆ ಹುಡುಗನ ಕುತ್ತಿಗೆಯಲ್ಲಿ ನಿಂತಿಲ್ಲವೆಂದು ಹುಡುಗನೂ ಸಿಟ್ಟು ತೋರಿಸಲು ಹೋಗಿಲ್ಲ. ಹೀಗಾಗಿ ಜೋಡಿಯ ಬಗ್ಗೆ ಪ್ರೀತಿಯನ್ನೇ ಹೆಚ್ಚು ತೋರಿದ್ದಾರೆ ನೋಡುಗರು.

ಈ ವಿಡಿಯೋವನ್ನು ನಿರಂಜನ್ ಮೊಹಪಾತ್ರ ಎಂಬವರು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋವನ್ನು 40 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋಗೆ ಬರುತ್ತಿರುವ ಕಮೆಂಟ್​ಗಳು ಕೂಡ ತಮಾಷೆಯಾಗಿವೆ. ಕೆಲವರು ಈ ಮದುವೆ ಹುಡುಗಿಗೆ ಇಷ್ಟ ಇಲ್ಲ ಎಂದೂ ಅನಿಸಿಕೆ ಹಂಚಿಕೊಂಡಿದ್ದಾರೆ. ಕೆಲವರು ಅರೇಂಜ್ಡ್ ಮ್ಯಾರೇಜ್​ನಲ್ಲಿ ಹೀಗೇ ಆಗಬಹುದು ಎಂಬ ಊಹೆಯನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಮೈದುನನ ಮದುವೆಯಲ್ಲಿ ಹಮ್ ಆಪ್ ಕೆ ಹೈ ಕೋನ್​ ಚಿತ್ರದ ಹಾಡಿ​ಗೆ ಅತ್ತಿಗೆಯ ಸಕತ್​ ಸ್ಟೆಪ್​! ವಿಡಿಯೋ ವೈರಲ್

Video Viral: ಮ್ಯಾಜಿಕ್​ ಥ್ರಿಲ್ಲಿಂಗ್​​ ರೈಡ್​ನಲ್ಲಿ ಯಡವಟ್ಟಾಯ್ತು! ಜನರ ಸಹಾಯದಿಂದ ಜೀವ ಉಳಿಯಿತು; ಶಾಂಕಿಂಗ್ ವಿಡಿಯೋ