Solar Storm: ಸದ್ಯದಲ್ಲೇ ಭೂಮಿಗೆ ಅಪ್ಪಳಿಸಲಿದೆ ಭೀಕರ ಸೌರ ಚಂಡಮಾರುತ; ಜಿಪಿಎಸ್​ ಸಿಗ್ನಲ್​, ಮೊಬೈಲ್​ ನೆಟ್ವರ್ಕ್​ಗಳೆಲ್ಲ ಅಸ್ತವ್ಯಸ್ತ

ಸೌರ ಚಂಡಮಾರುತದ ವೇಗ ಗಂಟೆಗೆ 1.6 ಮಿಲಿಯನ್​ ಕಿಮೀ ಇದೆ. ಆದರೆ ಇದು ಇನ್ನೂ ಹೆಚ್ಚಾಗಬಹುದು ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಅಂದಾಜಿಸಿದೆ. ಇದು ಭೂಮಿಯ ಹೊರಮೈ ವಾತಾವರಣವನ್ನು ಉಷ್ಣಗೊಳಿಸಲಿದ್ದು, ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದೆ.

Solar Storm: ಸದ್ಯದಲ್ಲೇ ಭೂಮಿಗೆ ಅಪ್ಪಳಿಸಲಿದೆ ಭೀಕರ ಸೌರ ಚಂಡಮಾರುತ; ಜಿಪಿಎಸ್​ ಸಿಗ್ನಲ್​, ಮೊಬೈಲ್​ ನೆಟ್ವರ್ಕ್​ಗಳೆಲ್ಲ ಅಸ್ತವ್ಯಸ್ತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 12, 2021 | 10:55 AM

ಭೀಕರ ಸೌರ ಚಂಡಮಾರುತವೊಂದು ಭೂಮಿಯೆಡೆಗೆ, ಗಂಟೆಗೆ 1.6 ಕಿಮೀ ವೇಗದಲ್ಲಿ ಚಲಿಸುತ್ತಿದ್ದು ಭಾನುವಾರ ಅಥವಾ ಸೋಮವಾರದ ಹೊತ್ತಿಗೆ ಭೂಮಿಗೆ ಅಪ್ಪಳಿಸಬಹುದು ಎನ್ನಲಾಗಿದೆ. ಈ ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಿದ ದಿನ ಜಗತ್ತಿನಾದ್ಯಾಂತ ವಿದ್ಯುತ್​ ಸಮಸ್ಯೆ ಉಂಟಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸೂರ್ಯನ ವಾತಾವರಣದಲ್ಲಿ ರಂಧ್ರವೊಂದು ತೆರೆಯಲ್ಪಟ್ಟಿದ್ದು, ಅದರ ಮೂಲಕವೇ ಈ ಚಂಡಮಾರುತ ಹೊರಬರುತ್ತಿದೆ ಮತ್ತು ಭೂಮಿಯತ್ತ ಬೀಸುತ್ತಿದೆ ಎಂದು ಸ್ಪೇಸ್​ ವೆದರ್​ ಡಾಟ್​ ಕಾಂ ವೆಬ್​ಸೈಟ್ ವರದಿ ಮಾಡಿದೆ. ಪ್ರಸಕ್ತ ಸೌರ ಚಂಡಮಾರುತದಿಂದ ಉಪಗ್ರಹಗಳ ಸಿಗ್ನಲ್​ಗೂ ತಡೆಯುಂಟಾಗುತ್ತದೆ. ಇದರಿಂದಾಗಿ ರೇಡಿಯೋ ಸಿಗ್ನಲ್​ಗಳು, ಸಂವಹನ ಮತ್ತು ಹವಾಮಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವೆಬ್​ಸೈಟ್​​ನಲ್ಲಿ ವರದಿಯಾಗಿದೆ. ಇವಿಷ್ಟೇ ಅಲ್ಲ, ಭೂಮಿಯ ಕಾಂತಕ್ಷೇತ್ರದ ಪ್ರಾಬಲ್ಯ ಹೆಚ್ಚಿರುವ ಬಾಹ್ಯಾಕಾಶದ ಪ್ರದೇಶದ ಮೇಲೆಯೂ ಸೌರಚಂಡಮಾರುತ ಪ್ರಭಾವ ಬೀರಲಿದೆ.

ಸೌರ ಚಂಡಮಾರುತದ ವೇಗ ಗಂಟೆಗೆ 1.6 ಮಿಲಿಯನ್​ ಕಿಮೀ ಇದೆ. ಆದರೆ ಇದು ಇನ್ನೂ ಹೆಚ್ಚಾಗಬಹುದು ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಅಂದಾಜಿಸಿದೆ. ಇದು ಭೂಮಿಯ ಹೊರಮೈ ವಾತಾವರಣವನ್ನು ಉಷ್ಣಗೊಳಿಸಲಿದ್ದು, ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರಲಿದೆ. ಜಿಪಿಸಿಎಸ್​ ನೇವಿಗೇಶನ್​, ಮೊಬೈಲ್​ ಫೋನ್​ ನೆಟ್ವರ್ಕ್​​​, ಸೆಟಲೈಟ್ ಟಿವಿ, ವಿದ್ಯುತ್​ ಲೈನ್​​ಗಳಿಗೆ ಸಮಸ್ಯೆ ಒಡ್ಡುತ್ತದೆ. ಭೂಮಿಯ ಕಾಂತಕ್ಷೇತ್ರ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಆದರೆ ಅದರ ಮೇಲೆಯೇ ಸೌರಚಂಡಮಾರುತ ಅಪ್ಪಳಿಸುವುದರಿಂದ ತೀವ್ರ ತೊಂದರೆಯಾಗಲಿದೆ ಎಂದು ಹೇಳಲಾಗಿದೆ.

ಇನ್ನೊಂದು ಪ್ರಮುಖ ವಿಷಯವೆಂದರೆ ಈ ಸೌರ ಚಂಡಮಾರುತದ ಕಾರಣದಿಂದ ದೇಶದ ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸವಾಗಿರುವ ಜನರು ರಾತ್ರಿ ವೇಳೆ ಒಂದು ಸುಂದರ ಆಕಾಶ ಬೆಳಕನ್ನು ವೀಕ್ಷಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಸೌರ ಬಿರುಗಾಳಿಗಳು ಭೂಮಿಯ ವಾತಾವರಣವನ್ನು ಅಸ್ತವ್ಯಸ್ತಗೊಳಿಸುತ್ತವೆ. 1989ರ ಮಾರ್ಚ್​ನಲ್ಲಿ ಇಂಥದ್ದೇ ಒಂದು ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಿತ್ತು. ಆಗ ಕೆನಡಾದಲ್ಲಿ 9 ಗಂಟೆಗಳ ಕಾಲ ವಿದ್ಯುತ್​ ಪ್ರಸರಣದಲ್ಲಿ ಅವ್ಯವಸ್ಥೆ ಉಂಟಾಗಿತ್ತು.

ಇದನ್ನೂ ಓದಿ: Coronavirus cases in India: ದೇಶದಲ್ಲಿ 37,154 ಹೊಸ ಕೊವಿಡ್ ಪ್ರಕರಣ ಪತ್ತೆ, 724 ಮಂದಿ ಸಾವು

A solar storm heading towards Earth at 1.6 million km Per Hour