Viral Video: ಅಬ್ಬಬ್ಬಾ.. ಅತಿಥಿಗಳಿಗೆ ಕಂತೆ ಕಂತೆ ನೋಟುಗಳನ್ನೇ ಎಸೆದ ಪುಣ್ಯಾತ್ಮ! ಜನರು ಮಾತ್ರ ದುಡ್ಡನ್ನು ಮುಟ್ಟಲೂ ತಯಾರಿಲ್ಲ; ಇದೇನಾಶ್ಚರ್ಯ?
ಅತಿಥಿಗಳ ಎದುರು ಮದುವೆಯಾಗುವ ನವ ಜೋಡಿಗಳು ನಡೆದುಕೊಂಡು ಬರುವ ಸಂಪ್ರದಾಯ ಪಾಶ್ಚಾತ್ಯ ವಿವಾಹಗಳಲ್ಲಿದೆ. ಆದರೆ ಅವರ ಬದಲಿಗೆ ಇಲ್ಲೋರ್ವ ವ್ಯಕ್ತಿ ಹಣವನ್ನು ಎಸೆಯುತ್ತಾ ಬರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಕ್ಕ ಪಕ್ಕದಲ್ಲಿ ಕುಳಿತ ಅತಿಥಿಗಳೆಲ್ಲ ದಿಘ್ಭ್ರಮೆಗೊಳಗಾಗುವಂತೆ ಮಾಡಿದೆ.
ವಿವಾಹ ಅಂದಾಕ್ಷಣ ಸಡಗರ, ಸಂಭ್ರಮ ಇದ್ದೇ ಇರುತ್ತದೆ. ಹೂವಿನ ದಳಗಳನ್ನು ಎಸೆಯುವ ಮೂಲಕ ಸ್ವಾಗತ ಕೋರುವ ಪದ್ಧತಿ ಇಂದಿಗೂ ಇದೆ. ಆದರೆ ಇಲ್ಲೋರ್ವ ವ್ಯಕ್ತಿ ಅತಿಥಿಗಳೆದುರು ನಡೆದು ಬರವಾಗ ನೋಟುಗಳನ್ನು ಎಸೆಯುತ್ತಾ ಬರುತ್ತಿದ್ದಾನೆ. ಇದೆನಪ್ಪಾ.. ಕುಳಿತ ಅಥಿತಿಗಳು ದುಡ್ಡನ್ನು ಆರಿಸಿಕೊಳ್ಳುತ್ತಲೂ ಇಲ್ಲ.. ಎಂಬುದೇ ನೆಟ್ಟಿಗರಿಗೆ ಆಶ್ಚರ್ಯ ತಂದಿರುವ ವಿಚಾರ.
ದುಡ್ಡು ಎಂದರೆ ಹೆಣವೂ ಬಾಯ್ಬಿಡುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಇಲ್ಲಿ ಕಂತೆ ಕಂತೆ ಕಟ್ಟನ್ನು ಅತಿಥಿಗಳ ಕೈಗೆ ನೀಡುತ್ತಿದ್ದಾನೆ ಈತ. ಹೂವಿನ ದಳಗಳನ್ನು ಎಸೆಯುವಂತೆ ನೋಟುಗಳನ್ನು ಎಸೆಯುತ್ತಿದ್ದಾನೆ. ಕುಳಿತ ಅತಿಥಿಗಳಲ್ಲಿ ಕೆಲವರು ಅಶ್ಚರ್ಯ ಚಕಿತರಾಗಿದ್ದರೆ, ಇನ್ನು ಕೆಲವರು ನಗುತ್ತಾ ಕುಳಿತಿದ್ದಾರೆ. ಹಲವರು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಬ್ಬರೂ ಕೂಡಾ ನೆಲಕ್ಕೆ ಬೀಳುತ್ತಿರುವ ಹಣದಲ್ಲಿ ಒಂದು ನೋಟನ್ನೂ ಆರಿಸಿಕೊಳ್ಳುತ್ತಿಲ್ಲವಲ್ಲ ಎಂಬುದೇ ನೆಟ್ಟಿಗರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಮದುವೆಗಳಲ್ಲಿ ಸಾಮಾನ್ಯವಾಗಿ ಹೂವಿನ ದಳಗಳನ್ನು ಬಂದ ಅಥಿತಿಗಳಿಗೆ ಸ್ವಾಗತದ ರೀತಿಯಲ್ಲಿ ಎಸೆಯುವುದನ್ನು ನೋಡಿದ್ದೇವೆ. ಇಲ್ಲವೇ, ನವ ಜೋಡಿಗಳಿಗೆ ಹೂವಿನ ದಳಗಳನ್ನು ಎಸೆಯುವ ಮೂಲಕ ಆಚರಣೆಯನ್ನು ಸಂಭ್ರಮಿಸುತ್ತಾರೆ. ಆದರೆ ಈತ ನೋಟುಗಳನ್ನೇ ಹೂವಿನ ದಳ ಎಂಬಂತೆ ಎಸೆಯುತ್ತಿದ್ದಾನಲ್ಲಾ.. ಆಶ್ಚರ್ಯವಾಗಿದ್ದರೂ ವಿಡಿಯೋ ನೋಡಿದಾಕ್ಷಣ ನಂಬಲೇ ಬೇಕಾಗಿದೆ. ಯೂಟ್ಯೂಬ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅತಿಥಿಗಳ ಎದುರು ಮದುವೆಯಾಗುವ ನವ ಜೋಡಿಗಳು ನಡೆದುಕೊಂಡು ಬರುವ ಸಂಪ್ರದಾಯ ಪಾಶ್ಚಾತ್ಯ ವಿವಾಹಗಳಲ್ಲಿದೆ. ಆದರೆ ಅವರ ಬದಲಿಗೆ ಇಲ್ಲೋರ್ವ ವ್ಯಕ್ತಿ ಹಣವನ್ನು ಎಸೆಯುತ್ತಾ ಬರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಕ್ಕ ಪಕ್ಕದಲ್ಲಿ ಕುಳಿತ ಅತಿಥಿಗಳೆಲ್ಲ ದಿಘ್ಭ್ರಮೆಗೊಳಗಾಗುವಂತೆ ಮಾಡಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದ್ದಂತೆಯೇ 2.5 ಮಿಲಿಯನ್ಗಿಂತಲೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿಕೊಂಡಿದೆ. 12,000 ಕ್ಕೂ ಹೆಚ್ಚು ಕಾಮೆಂಟ್ಸ್ಗಳು ಬಂದಿವೆ. 13 ಮಿಲಿಯನ್ ವೀಕ್ಷಣೆಗಳಾಗಿವೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು .. ಯಾಕೆ? ಯಾರೂ ಕೂಡಾ ಹಣವನ್ನು ಎತ್ತಿಕೊಳ್ಳುತ್ತಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ನಾನಾಗಿದ್ರೇ ಮೊದಲು ಹಣವನ್ನೆಲ್ಲಾ ಬಾಚಿಕೊಳ್ತಿದ್ದೆ, ಖುರ್ಚಿ ಬಿಟ್ಟು ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:
Viral Video: ಮದುವೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ವಧು; ಕಂಗಾಲಾಗಿ ಮಂಟಪದಿಂದ ಓಡಿಹೋದ ವರ!
Viral Video: ಮದುವೆ ಮಂಟಪದಲ್ಲಿ ಮಲಗಿಕೊಂಡು ಫೋಟೊ ಕ್ಲಿಕ್ಕಿಸಿದ ಫೋಟೊಗ್ರಾಫರ್! ವಿಡಿಯೋ ನೋಡಿ, ನಕ್ಕು ಹಗುರಾಗಿ
(Man showing money in wedding guest video goes viral)
Published On - 11:23 am, Wed, 21 July 21