Viral Video: ಮದುವೆ ಮಂಟಪದಲ್ಲಿ ಮಲಗಿಕೊಂಡು ಫೋಟೊ ಕ್ಲಿಕ್ಕಿಸಿದ ಫೋಟೊಗ್ರಾಫರ್! ವಿಡಿಯೋ ನೋಡಿ, ನಕ್ಕು ಹಗುರಾಗಿ
ಫೊಟೊಗ್ರಾಫರ್ ತಲ್ಲೀನತೆ ಹೇಗಿದೆ ಗೊತ್ತಾ? ಈ ವಿಡಿಯೋ ನೀವು ನೋಡಬೇಕು. ವಿಡಿಯೋದಲ್ಲಿ ಫೊಟೊಗ್ರಾಫರ್ ಮದುವೆ ಮಂಟಪದ ಮೇಲೆ ಮಲಗಿಕೊಂಡೇ ಫೊಟೊ ತೆಗೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಮದುವೆ ಮಂಟಪದ ವಿವಿಧ ವಿಡಿಯೋಗಳು ಶೇರ್ ಆಗುತ್ತಿವೆ. ವಿವಾಹ ಮಂಟಪದಲ್ಲಿ ಹುಡುಗ ಹುಡುಗಿ ಪೇಚಾಟ, ಪರದಾಟ, ಸಿಟ್ಟು, ಸಿಡುಕು, ಮೌನ ಎಲ್ಲಾ ವಿಶೇಷಗಳೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಕೆಲವು ವಿಶಿಷ್ಟ, ತಮಾಷೆಯ ವಿಡಿಯೋಗಳು ಕೂಡ ಹಂಚಿಕೆಯಾಗುತ್ತಿದೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ನೆಟ್ಟಿಗರು ಕೂಡ ಸಿಕ್ಕಾಪಟ್ಟೆ ನಕ್ಕು ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಫೊಟೊಗ್ರಾಫರ್‌ಗಳ ತಂಡವೇ ಇರುತ್ತದೆ. ವೇದಿಕೆಯ ಮೇಲೆ ಮೂರು ನಾಲ್ಕು ಮಂದಿ ಫೊಟೊಗ್ರಾಫರ್ ತಂಡದ ಸದಸ್ಯರು ಇರುತ್ತಾರೆ. ಬೆಳಕು, ವಿಡಿಯೋ, ಫೊಟೊ ಎಲ್ಲವೂ ಈಗ ಅತಿಮುಖ್ಯ. ಸಂಪ್ರದಾಯ,ಆಚರಣೆ ಇಲ್ಲ ಅಂದ್ರೂ ಪರವಾಗಿಲ್ಲ. ಫೊಟೊಗ್ರಾಫರ್ ಒಬ್ಬ ಇರಲೇಬೇಕು ಈಗಿನ ಸಮಾರಂಭಗಳಲ್ಲಿ ಎಂದು ಹಲವರು ಹೇಳುವುದನ್ನು ನಾವು ನೋಡಿ, ಕೇಳಿರುತ್ತೇವೆ. ಮದುವೆ ಅಂದರೆ ಫೊಟೊಶೂಟ್ ಮುಖ್ಯ ಕೆಲಸ ಆದಂತಾಗಿದೆ. ಫೊಟೊಗ್ರಾಫರ್‌ನ ವಿಶೇಷ ಸನ್ನಿವೇಶ ಒಂದು ಈಗ ವೈರಲ್ ಆಗುತ್ತಿದೆ.
ಫೊಟೊಗ್ರಾಫರ್ ತಲ್ಲೀನತೆ ಹೇಗಿದೆ ಗೊತ್ತಾ? ಈ ವಿಡಿಯೋ ನೀವು ನೋಡಬೇಕು. ವಿಡಿಯೋದಲ್ಲಿ ಫೊಟೊಗ್ರಾಫರ್ ಮದುವೆ ಮಂಟಪದ ಮೇಲೆ ಮಲಗಿಕೊಂಡೇ ಫೊಟೊ ತೆಗೆದಿದ್ದಾರೆ. ಅದೂ ಕೂಡ ಮದುಮಗಳು, ಮದುಮಗನ ನಡುವೆ ಮಲಗಿಕೊಂಡು ಹೀಗೆ ಫೊಟೊ ತೆಗೆದಿದ್ದಾರೆ. ಉತ್ತಮ ಫೊಟೊ ಸೆರೆಹಿಡಿಯಬೇಕು ಎಂದು ಫೊಟೊಗ್ರಾಫರ್ ಹರಸಾಹಸ ಪಟ್ಟಿದ್ದಾರೆ.
View this post on Instagram
ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಹಲವರು ವಿಡಿಯೋಗೆ ತಮಾಷೆಯ ಕಮೆಂಟ್ ಮಾಡಿಕೊಂಡಿದ್ದಾರೆ. ಶೇರ್ ಕೂಡಾ ಮಾಡಿದ್ದಾರೆ. ಫೊಟೊಗ್ರಾಫರ್ ಪೂರ್ತಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದಾನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿದಾಗ ಫೊಟೊಗ್ರಾಫರ್‌ಗಳ ಪಾಡೇನು ಎಂದು ತಿಳಿಯುತ್ತದೆ. ಒಂದೊಳ್ಳೆಯ ಫೊಟೊಗಾಗಿ ಅದನ್ನು ಸೆರೆ ಹಿಡಿಯುವಾತ ಏನೇನು ಮಾಡುತ್ತಾನೆ ಎಂದು ತಿಳಿದುಬರುತ್ತದೆ. ಜೊತೆಗೆ ಈಗ ಫೊಟೊಗ್ರಾಫರ್ ಪಾತ್ರ ಎಷ್ಟು ಮುಖ್ಯ, ಮದುವೆ ಸಂಪ್ರದಾಯದ ಮಧ್ಯೆ ಫೊಟೊಗ್ರಾಫರ್‌ಗೆ ಕೂಡ ವಧು ವರರು ಹೇಗೆ ಹೊಂದಿಕೊಳ್ಳಬೇಕಾಗುತ್ತದೆ ಎಂದು ಈ ವಿಡಿಯೋ ತೋರಿಸಿಕೊಟ್ಟಿದೆ.
ಇದನ್ನೂ ಓದಿ: Viral Video: ಪುಟ್ಟ ಮಗುವಿನ ಸಮೀಪ ಸುಳಿಯಲು ಯತ್ನಿಸಿದ ಕಾಳಿಂಗ ಸರ್ಪ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ -ವಿಡಿಯೋ ನೋಡಿ
ಈ ಫ್ರೆಂಚ್ ಫ್ರೈಸ್ ಬೆಲೆ ಬರೋಬ್ಬರಿ 15,000 ರೂಪಾಯಿ! ಕಾರಣವೇನು? ವಿವರ ಇಲ್ಲಿದೆ