AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫ್ರೆಂಚ್ ಫ್ರೈಸ್ ಬೆಲೆ ಬರೋಬ್ಬರಿ 15,000 ರೂಪಾಯಿ! ಕಾರಣವೇನು? ವಿವರ ಇಲ್ಲಿದೆ

ನ್ಯೂಯಾರ್ಕ್​ನ ಈ ವಿಶೇಷ ಫ್ರೆಂಚ್ ಫ್ರೈಸ್ ಹೆಸರು ಕ್ರೀಮ್ ಡೆ ಲಾ ಕ್ರೀಮ್ ಪೊಮ್ ಫ್ರೈಸ್ ಎಂದಾಗಿದೆ. ಈ ಫ್ರೆಂಚ್ ಫ್ರೈಸ್ ಜಗತ್ತಿನ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ ಎಂದು ಹೆಸರು ಪಡೆದಿದೆ.

ಈ ಫ್ರೆಂಚ್ ಫ್ರೈಸ್ ಬೆಲೆ ಬರೋಬ್ಬರಿ 15,000 ರೂಪಾಯಿ! ಕಾರಣವೇನು? ವಿವರ ಇಲ್ಲಿದೆ
ದುಬಾರಿ ಫ್ರೆಂಚ್ ಫ್ರೈಸ್
TV9 Web
| Edited By: |

Updated on: Jul 16, 2021 | 3:27 PM

Share

ನಾವು ಪ್ರತಿನಿತ್ಯವೂ ವಿವಿಧ ಶೈಲಿಯ, ಬಗೆಬಗೆಯ ಆಹಾರವನ್ನು ಸೇವಿಸುತ್ತಿರುತ್ತೇವೆ. ನಮ್ಮೂರಿನ, ನಮ್ಮ ಸಂಪ್ರದಾಯದ ತಿಂಡಿ ತಿನಿಸುಗಳ ಜೊತೆಗೆ, ಸೌತ್ ಇಂಡಿಯನ್ ಆಹಾರ ಎಂದು ಕರೆಯಲ್ಪಡುವ ಇತರ ಊಟ, ಉಪಾಹಾರ ಸೇವಿಸುತ್ತೇವೆ. ಅಷ್ಟೇ ಅಲ್ಲದೆ, ನಾರ್ತ್ ಇಂಡಿಯನ್, ಚೈನೀಸ್ ಫುಡ್​ಗಳ ಬಗ್ಗೆಯೂ ಆಸಕ್ತಿ ವಹಿಸಿ ಅದನ್ನು ಇಷ್ಟಪಡುವ ಜನರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ದಕ್ಷಿಣ ಭಾರತೀಯ ಶೈಲಿಯ ತಿನಿಸುಗಳಿಗೆ ಹೋಲಿಸಿದರೆ ಉತ್ತರ ಭಾರತೀಯ ಅಥವಾ ಚೈನೀಸ್ ತಿನಿಸುಗಳಿಗೆ ಸಾಮಾನ್ಯವಾಗಿ ಹೆಚ್ಚು ಹಣ ನಿಗದಿಯಾಗಿರುತ್ತದೆ.

ಇಲ್ಲೀಗ ತಿಂಡಿ- ತಿನಿಸು, ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ಅದಕ್ಕೆಷ್ಟು ಹಣ ಅನ್ನೋ ಚರ್ಚೆ ಯಾಕೆ ಅಂತೀರಾ, ಅಲ್ಲೇ ಇರೋದು ವಿಶೇಷ. ಬಹುತೇಕ ಮಂದಿ ಸಾಮಾನ್ಯವಾಗಿ ಫ್ರೆಂಚ್ ಫ್ರೈಸ್ ತಿಂದೇ ಇರುತ್ತೀರಾ. ಸುಮಾರು 40 ರೂಪಾಯಿಯಿಂದ 200 ರೂಪಾಯಿ ವರೆಗೂ ಈ ಫ್ರೆಂಚ್ ಫ್ರೈಸ್​ಗೆ ನೀವು ಕೊಟ್ಟಿರಬಹುದು. ಆದರೆ, ವಿಶ್ವದ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್​ ಬಗ್ಗೆ ಇಲ್ಲಿ ಮಾಹಿತಿ ಇದೆ.

ನ್ಯೂಯಾರ್ಕ್​ನ ಈ ವಿಶೇಷ ಫ್ರೆಂಚ್ ಫ್ರೈಸ್ ಹೆಸರು ಕ್ರೀಮ್ ಡೆ ಲಾ ಕ್ರೀಮ್ ಪೊಮ್ ಫ್ರೈಸ್ ಎಂದಾಗಿದೆ. ಈ ಫ್ರೆಂಚ್ ಫ್ರೈಸ್ ಜಗತ್ತಿನ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ ಎಂದು ಹೆಸರು ಪಡೆದಿದೆ. ಆಲೂಗಡ್ಡೆ ಹಾಗೂ ಇನ್ನಿತರ ಪದಾರ್ಥಗಳೊಂದಿಗೆ ತಯಾರಿಸಲ್ಪಟ್ಟ ಈ ಫ್ರೈಸ್ ಬೆಲೆ ಬರೋಬ್ಬರಿ 200 ಡಾಲರ್. ಅಂದರೆ, ಸುಮಾರು 15,000 ರೂಪಾಯಿಗಳು!

ಈ ಬಗ್ಗೆ ನ್ಯೂಯಾರ್ಕ್​ನ ರೆಸ್ಟೋರೆಂಟ್ ಮಾಹಿತಿ ಹಂಚಿಕೊಂಡಿದೆ. ಚೆಫ್ ಜೋಯ್ ಹಾಗೂ ಚೆಫ್ ಫ್ರೆಡ್ಡಿ ಈ ಫ್ರೆಂಚ್ ಫ್ರೈಸ್ ತಯಾರಿಸುವ ಮೂಲಕ, ಗಿನ್ನೆಸ್ ವಿಶ್ವದಾಖಲೆ ಮಾಡಿದ್ದಾರೆ. ಜಗತ್ತಿನ ಅತ್ಯಂತ ದುಬಾರಿ ಫ್ರೆಂಚ್ ಫ್ರೈಸ್ ಎಂಬ ದಾಖಲೆ ಮಾಡಿದ್ದಾರೆ ಎಂದು ಹೇಳಿದೆ.

ಈ ದುಬಾರಿ ಫ್ರೆಂಚ್ ಫ್ರೈಸ್​ಗೆ ಅಷ್ಟೊಂದು ಬೆಲೆ ನಿಗದಿಯಾಗಲು ಕಾರಣವೇನು ಗೊತ್ತಾ? ಫ್ರೆಂಚ್ ಫ್ರೈಸ್​ಗೆ ಬಲಸುವ ಸಾಮಾನ್ಯ ಹಾಗೂ ವಿಶೇಷ ಪದಾರ್ಥಗಳ ಜೊತೆಗೆ 23 ಕ್ಯಾರೇಟ್ ಎಡಿಬಲ್ ಚಿನ್ನದ ಧೂಳನ್ನು (ಗೋಲ್ಡ್ ಡಸ್ಟ್) ಕೂಡ ಈ ಫ್ರೆಂಚ್ ಫ್ರೈಸ್ ಮೇಲೆ ಉದುರಿಸಲಾಗಿದೆ. ನ್ಯೂಯಾರ್ಕ್​ನ ಹೊಟೇಲ್ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ದುಬಾರಿ ಫ್ರೆಂಚ್ ಫ್ರೈಸ್​ನ ಫೋಟೊಗಳನ್ನು ಕೂಡ ಹಂಚಿಕೊಂಡಿದೆ.

ಇದನ್ನೂ ಓದಿ: ಕ್ರಿಮಿನಲ್​ಗೆ ಕೇಕ್ ತಿನ್ನಿಸಿದ ಮುಂಬೈ ಪೊಲೀಸ್ ಇನ್ಸ್​ಪೆಕ್ಟರ್​​; ವಿಡಿಯೋದಲ್ಲಿ ದೃಶ್ಯ ಸೆರೆ, ತನಿಖೆಗೆ ಆದೇಶ

Viral Video: ಜೋಕಾಲಿ ಆಡ್ತಾ ಆಡ್ತಾ ಬಂಡೆ ಅಂಚಿನಿಂದ ಬಿದ್ದ ಯುವತಿಯರು; ಭಯಾನಕ ದೃಶ್ಯದ ವಿಡಿಯೋ ವೈರಲ್

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ