ಕ್ರಿಮಿನಲ್ಗೆ ಕೇಕ್ ತಿನ್ನಿಸಿದ ಮುಂಬೈ ಪೊಲೀಸ್ ಇನ್ಸ್ಪೆಕ್ಟರ್; ವಿಡಿಯೋದಲ್ಲಿ ದೃಶ್ಯ ಸೆರೆ, ತನಿಖೆಗೆ ಆದೇಶ
ಸಾಮಾಜಿಕ ಜಾಲತಾಣಗಳಲ್ಲಿ 15 ಸೆಕೆಂಡುಗಳ ಈ ವಿಡಿಯೋದಲ್ಲಿ ವೈರಲ್ ಆಗಿದ್ದು, ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಂದ್ರ ನೇರಳೇಕರ್ ಕ್ರಿಮಿನಲ್ ಡ್ಯಾನಿಷ್ ಷೇಕ್ಗೆ ಕೇಕ್ ತಿನ್ನಿಸುತ್ತಿರುವುದು ಕಂಡುಬಂದಿದೆ.
ಮುಂಬೈ: ಅಪರಾಧಿಯೊಬ್ಬನ ಹುಟ್ಟುಹಬ್ಬದಂದು (birthday celebration) ಅವನಿಗೆ ಮುಂಬೈ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಕೇಕ್ ತಿನ್ನಿಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral video) ಆಗಿದ್ದು, ತನಿಖೆಗೆ ಆದೇಶ ನೀಡಲಾಗಿದೆ. ಮುಂಬೈನ ಹೊರವಲಯದಲ್ಲಿರುವ ಜೋಗೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ವಾರಗಳ ಹಿಂದೆ ಈ ಪ್ರಸಂಗ ನಡೆದಿದೆ ಎನ್ನಲಾಗಿದೆ. ಮೊನ್ನೆ ಕರ್ನಾಟಕದಲ್ಲಿಯೂ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಮುಂದೇನಾಯ್ತೋ ಎಂಬುದು ತಿಳಿದುಬಂದಿಲ್ಲ. ಏಕೆಂದ್ರೆ ಅದೇ ಮಾಜಿ ರೌಡಿ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಶಾಸಕ ಕೈ ಕೈ ಹೊಸೆಯುತ್ತಿದ್ದ ಫೋಟೋ ಸಹ ಅಲ್ಲಿ ಬಹಿಂಗವಾಗಿತ್ತು.
ದೃಶ್ಯದಲ್ಲಿರುವ ಅಪರಾಧಿಯ ಹೆಸರು ಡ್ಯಾನಿಷ್ ಷೇಕ್ ಎಂದು ತಿಳಿದುಬಂದಿದೆ. ಈತನ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಅನೆಕ ಅಪರಾಧ ಕೃತ್ಯಗಳು ದಾಖಲಾಗಿವೆ. ಈತನನ್ನು ಶಕಿನಕ ಪೊಲೀಸ್ ವಿಭಾಗದ (Sakinaka division) ಜೋಗೇಶ್ವರಿ ಪೊಲೀಸರು (Jogeshwari Police) ಈ ಹಿಂದೆ ಬಂಧಿಸಿದ್ದರು ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ (social media) 15 ಸೆಕೆಂಡುಗಳ ಈ ವಿಡಿಯೋದಲ್ಲಿ ವೈರಲ್ ಆಗಿದ್ದು, ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಂದ್ರ ನೇರಳೇಕರ್ (inspector Mahendra Nerleikar) ಕ್ರಿಮಿನಲ್ ಡ್ಯಾನಿಷ್ ಷೇಕ್ಗೆ ಕೇಕ್ ತಿನ್ನಿಸುತ್ತಿರುವುದು ಕಂಡುಬಂದಿದೆ.
ಆದರೆ ಇನ್ಸ್ಪೆಕ್ಟರ್ ಮಹೇಂದ್ರ ನೇರಳೇಕರ್ ಅದೊಂದು ಹಳೆಯ ವಿಡಿಯೋ. ಹೌಸಿಂಗ್ ಸೊಸೈಟಿಯ ಕಟ್ಟಡ ಕೆಡುವುತ್ತಿರುವಾಗ ನಾನು ಸ್ಥಳಕ್ಕೆ ಹೋಗಿದ್ದೆ. ಆಗ ಅಲ್ಲಿದ್ದ ಹಿರಿಯರು ಹೌಸಿಂಗ್ ಸೊಸೈಟಿಯ ಕಚೇರಿಗೆ ಭೇಟಿ ನೀಡುವಂತೆ ಮನವಿ ಮಾಡಿದರು. ಅದರಂತೆ ನಾನು ಕಚೇರಿಯೊಳಕ್ಕೆ ಹೋಗಿದ್ದೆ. ಆದರೆ ಅಲ್ಲಿ ಡ್ಯಾನಿಷ್ ಷೇಕ್ ಕೇಕ್ ಜೊತೆ ಇರುವುದನ್ನು ನಾನು ಅಂದಾಜಿಸಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಮುಂಬೈ ಡೆಪ್ಯುಟಿ ಕಮಿಷನರ್ ಮಹೇಶ್ ರೆಡ್ಡಿ (Deputy Commissioner of Police -Zone 10) ಅವರು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಹಾಯಕ ಪೊಲೀಸ್ ಆಯುಕ್ತರಿಗೆ ಆದೇಶ ನೀಡಿದ್ದಾರೆ.
ಕೊರೊನಾ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿದ ಮಾಜಿ ರೌಡಿಶೀಟರ್; ಪೊಲೀಸ್ ಅಧಿಕಾರಿ, ರಾಜಕಾರಣಿ ಜತೆ ಇರುವ ಫೋಟೋ ವೈರಲ್ (Mumbai Jogeshwari Police inspector Mahendra Nerleikar Caught On Camera Feeding Cake To Criminal Danish Sheikh Probe Ordered)