ಕೊರೊನಾ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿದ ಮಾಜಿ ರೌಡಿಶೀಟರ್; ಪೊಲೀಸ್ ಅಧಿಕಾರಿ, ರಾಜಕಾರಣಿ ಜತೆ ಇರುವ ಫೋಟೋ ವೈರಲ್

ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ 2019ರಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿಗೆ ಬೇಲ್​​ ಕೊಡಿಸುವುದಾಗಿ 28 ಲಕ್ಷ ರೂಪಾಯಿ ವಸೂಲಿ ಮಾಡಿದ ಆರೋಪ ಈತನ ಮೇಲಿದೆ. ಇದೀಗ ಈ ಮಾಜಿ ರೌಡಿ ಶೀಟರ್ ದಾಸ ಅಬ್ಬರದಿಂದ ಹುಟ್ಟುಹಬ್ಬ ಆಚರಿಸುವ ಮೂಲಕ ಮತ್ತೆ ತನ್ನ ಗತ್ತು, ದೌಲತ್ತು ಪ್ರದರ್ಶಿಸಲು ಮುಂದಾಗಿರುವನಾ ಎಂಬ ಸಂದೇಹ ಮೂಡಿದೆ.

ಕೊರೊನಾ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿದ ಮಾಜಿ ರೌಡಿಶೀಟರ್; ಪೊಲೀಸ್ ಅಧಿಕಾರಿ, ರಾಜಕಾರಣಿ ಜತೆ ಇರುವ ಫೋಟೋ ವೈರಲ್
ಪೊಲೀಸ್​ ಅಧಿಕಾರಿ, ರಾಜಕಾರಣಿ ಜತೆ ಪೋಸ್
Follow us
TV9 Web
| Updated By: Skanda

Updated on:Jul 13, 2021 | 9:05 AM

ನೆಲಮಂಗಲ: ಮಾಜಿ ರೌಡಿಶೀಟರ್​ ಒಬ್ಬ ಕೊರೊನಾ ನಿಯಮಾವಳಿಗಳನ್ನೂ (Covid Rules) ಉಲ್ಲಂಘಿಸಿ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಜಿ ರೌಡಿಶೀಟರ್ (Ex Rowdy Sheeter) ಮಂಜುನಾಥ್ ಅಲಿಯಾಸ್ ದಾಸ ಎಂಬಾತ ನಿನ್ನೆ ಹುಟ್ಟುಹಬ್ಬ (Birthday) ಆಚರಿಸಿಕೊಂಡಿದ್ದು, ಸಮಾಜ ಸೇವಕನಂತೆ ಫೋಸ್ ಕೊಡುತ್ತಾ, ಹಾರ ತುರಾಯಿಗಳನ್ನು ಹಾಕಿಕೊಂಡು ಮಾಸ್ಕ್, ಸಾಮಾಜಿಕ ಅಂತರ ಯಾವುದನ್ನೂ ಕಾಯ್ದುಕೊಳ್ಳದೇ ಹುಟ್ಟುಹಬ್ಬ ಆಚರಿಸಿದ್ದಾನೆ. ಅಲ್ಲದೇ ಈತನೊಂದಿಗೆ ಪೊಲೀಸರು, ರಾಜಕೀಯ ವ್ಯಕ್ತಿಗಳು ಇರುವ ಫೋಟೋ ವೈರಲ್ (Photos Viral)​ ಆಗಿದ್ದು, ಈತ ಮತ್ತೆ ತನ್ನ ಪ್ರಾಬಲ್ಯ ತೋರಿಸಲು ಯತ್ನಿಸುತ್ತಿದ್ದಾನಾ ಎನ್ನುವ ಅನುಮಾನಗಳು ವ್ಯಕ್ತವಾಗಿವೆ.

ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ 2019ರಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಲೆ ಆರೋಪಿಗೆ ಬೇಲ್​​ ಕೊಡಿಸುವುದಾಗಿ 28 ಲಕ್ಷ ರೂಪಾಯಿ ವಸೂಲಿ ಮಾಡಿದ ಆರೋಪ ಈತನ ಮೇಲಿದೆ. ಇದೀಗ ಈ ಮಾಜಿ ರೌಡಿ ಶೀಟರ್ ದಾಸ ಅಬ್ಬರದಿಂದ ಹುಟ್ಟುಹಬ್ಬ ಆಚರಿಸುವ ಮೂಲಕ ಮತ್ತೆ ತನ್ನ ಗತ್ತು, ದೌಲತ್ತು ಪ್ರದರ್ಶಿಸಲು ಮುಂದಾಗಿರುವನಾ ಎಂಬ ಸಂದೇಹ ಮೂಡಿದೆ. ಈತನ ಹುಟ್ಟುಹಬ್ಬಕ್ಕೆ ಸುಮಾರು 200 ಜನ ಸೇರಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಹುಟ್ಟುಹಬ್ಬ ಆಚರಿಸಿಕೊಂಡ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.

ಸದ್ಯ ಕೊರೊನಾ ನಿಯಮಾವಳಿಗಳನ್ನು ಸಂಪೂರ್ಣ ಉಲ್ಲಂಘಿಸಿ ಮಾಸ್ಕ್​​ ಹಾಕಿಕೊಳ್ಳದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಹುಟ್ಟುಹಬ್ಬ ಆಚರಿಸಿಕೊಂಡ ಆರೋಪ ಕೇಳಿಬಂದಿದೆ. ಹೀಗೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಅದರ ಫೋಟೋ, ವಿಡಿಯೋ ವೈರಲ್ ಮಾಡುವ ಮೂಲಕ ಈ ವ್ಯಕ್ತಿ ನೆಲಮಂಗಲ, ಯಲಹಂಕ, ಹೆಸರಘಟ್ಟ, ಮಾದನಾಯಕನಹಳ್ಳಿ ಪ್ರದೇಶದಲ್ಲಿ ಮತ್ತೆ ತನ್ನ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದ್ದಾನಾ ಎಂದು ಕೆಲವರು ಅನುಮಾನಿಸಿದ್ದಾರೆ.

EX ROWDY SHEETER BIRTHDAY POSTER

ಹುಟ್ಟುಹಬ್ಬಕ್ಕೆ ಶುಭಕೋರುವ ಪೋಸ್ಟರ್​

EX ROWDY SHEETER

ಕೊರೊನಾ ನಿಯಮ ಉಲ್ಲಂಘಿಸಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ

ಈತನ ಹಿಂಬಾಲಕರು ತಮ್ಮ ವಾಟ್ಸ್​ಆ್ಯಪ್​ ಸ್ಟೇಟಸ್​ಗಳಲ್ಲಿ ಈತನ ರಾಶಿ ರಾಶಿ ಫೋಟೋಗಳನ್ನು ಹಾಕಿಕೊಂಡು ಶುಭಕೋರಿರುವುದನ್ನು ನೋಡಿದರೆ ಸಮಾಜ ಸೇವಕರ ರೀತಿಯಲ್ಲಿ ಪೋಸ್​ ನೀಡಿರುವುದು ಕಾಣಿಸುತ್ತದೆ. ಕೆಲವರು ಈತನ ಹುಟ್ಟುಹಬ್ಬಕ್ಕೆ ಪೋಸ್ಟರ್ ಕೂಡಾ ಮಾಡಿದ್ದು ಅದರಲ್ಲಿ ಶುಭ ಕೋರುವ ಮೂಲಕ ಅದನ್ನೂ ವೈರಲ್ ಮಾಡಿದ್ದಾರೆ. ಎಲ್ಲಕ್ಕೂ ಮುಖ್ಯವಾಗಿ ಈತ ಪೊಲೀಸ್ ಹಾಗೂ ರಾಜಕೀಯ ಕ್ಷೇತ್ರದ ವ್ಯಕ್ತಿಗಳ ಜತೆಗೆ ಪೋಸ್ ಕೊಟ್ಟಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಲು ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 1,500 ರೌಡಿಗಳು ಪೊಲೀಸರ ವಶಕ್ಕೆ; 2 ಸಾವಿರ ರೌಡಿ ಶೀಟರ್ಸ್ ಮನೆ ಮೇಲೆ ದಾಳಿ 

ಗಾಂಜಾ ಸೇವಿಸಿ ಬಂದ ರೌಡಿ ಶೀಟರ್​ಗೆ ಕಪಾಳಮೋಕ್ಷ ಮಾಡಿದ ಪೊಲೀಸರು!

(Ex Rowdy sheeter Birthday in Nelamangala breaking covid rules photos with police politicians goes viral)

Published On - 9:04 am, Tue, 13 July 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು