ಗಾಂಜಾ ಸೇವಿಸಿ ಬಂದ ರೌಡಿ ಶೀಟರ್​ಗೆ ಕಪಾಳಮೋಕ್ಷ ಮಾಡಿದ ಪೊಲೀಸರು!

TV9 Web
| Updated By: ganapathi bhat

Updated on:Jul 10, 2021 | 10:34 PM

ರೌಡಿ ಶೀಟರ್ಸ್​ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಒಂದೂವರೆ ಸಾವಿರ ಮಂದಿಯನ್ನು ವಶಕ್ಕೆ ಪಡೆದಿದ್ದು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ರೌಡಿ ಪರೇಡ್‌ ವೇಳೆ ಗಾಂಜಾ ಸೇವಿಸಿ ಬಂದಿದ್ದ ರೌಡಿಯೊಬ್ಬನಿಗೆ ಪೊಲೀಸರು ಸರಿಯಾಗಿ ಬಾರಿಸಿದ ಘಟನೆ ನಡೆದಿದೆ.

ಬೆಂಗಳೂರು ನಗರದಾದ್ಯಂತ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಾರ್ಯಾಚರಣೆಗೆ ಇಳಿದ ಬೆಂಗಳೂರು ಪೊಲೀಸರು (Bengaluru Police) ಬೆಳಗ್ಗೆಯಿಂದ ಇಲ್ಲಿಯ ತನಕ ಸುಮಾರು 1,500 ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 2000 ರೌಡಿ ಶೀಟರ್ಸ್​ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಒಂದೂವರೆ ಸಾವಿರ ಮಂದಿಯನ್ನು ವಶಕ್ಕೆ ಪಡೆದಿದ್ದು, ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಂತೆ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಇಷ್ಟೇ ಅಲ್ಲ ರೌಡಿ ಪರೇಡ್‌ ವೇಳೆ ಗಾಂಜಾ ಸೇವಿಸಿ ಬಂದಿದ್ದ ರೌಡಿಯೊಬ್ಬನಿಗೆ ಪೊಲೀಸರು ಸರಿಯಾಗಿ ಬಾರಿಸಿದ ಘಟನೆ ನಡೆದಿದೆ.

ವೈಟ್​ಫೀಲ್ಡ್ ವಿಭಾಗದಲ್ಲಿ ಡಿಸಿಪಿ‌ ದೇವರಾಜ್ ನೇತೃತ್ವದಲ್ಲಿ, ಬಾಗಲಗುಂಟೆ ಬಳಿ ಸಿಪಿಐ ಸುನಿಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಸಂಜೀವ್ ಪಾಟೀಲ್ ವಿಚಾರಣೆ ನಡೆಸಿದ್ದಾರೆ. ಕೆಲವೆಡೆ ಶ್ವಾನದಳದ ಸಮೇತ ದಾಳಿ ನಡೆಸಿರುವ ಪೊಲೀಸರು ಅಕ್ರಮದಲ್ಲಿ ತೊಡಗಿಕೊಂಡಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರಗನ್ ಭೇಟಿ ನೀಡಿ ರೌಡಿಗಳಿಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿಕ್ಸ್ ಲೈನ್ ಬಳಿ ಸೂಪರ್ ಮ್ಯಾನ್​ನಂತೆ ಹಾರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ: ರೋಚಕ ವಿಡಿಯೋ ಇಲ್ಲಿದೆ

ಬೆಂಗಳೂರು: ಮೀನಿನ ಬಾಕ್ಸ್​ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರ ಸೆರೆ

Published on: Jul 10, 2021 10:32 PM