ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಟಿವಿ9 ನೆಟ್​ವರ್ಕ್​ ಅಭಿಯಾನ ಕಾರ್ಯಕ್ರಮ

TV9 Network Covid Awareness Campaign: ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಟಿವಿ9 ನೆಟ್​ವರ್ಕ್​ ಅಭಿಯಾನವೊಂದನ್ನು ಹಮ್ಮಿಕೊಂಡಿದೆ. ಈ ಮೂಲಕ ವ್ಯಾಕ್ಸಿನೇಷನ್​ ಕೇಂದ್ರಗಳಿಗೆ ಭೇಟಿ ನೀಡಿ ಜನರಿಗೆ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಟಿವಿ9 ನೆಟ್​ವರ್ಕ್​ ಅಭಿಯಾನ ಕಾರ್ಯಕ್ರಮ
ಅಭಿಯಾನ
TV9kannada Web Team

| Edited By: Apurva Kumar Balegere

Jul 17, 2021 | 2:07 PM


ಕೊರೊನಾ ಮಹಾಮಾರಿಯ ಅಟ್ಟಹಾಸ ಜನರನ್ನು ಈಗಾಗಲೇ ಸುಸ್ತು ಬಡಿಸಿದೆ. ಜನರು ಕೊವಿಡ್​ ಹೆಸರು ಕೇಳಿಯೇ ಸಾಕಾಗಿಬಿಟ್ಟಿದೆ ಅಂತಿದ್ದಾರೆ. ಕೊವಿಡ್​ ಎರಡನೇ ಅಲೆ ಇನ್ನೇನು ಮುಗಿಯುತ್ತಿದೆ ಅನ್ನುವಷ್ಟರಲ್ಲೇ 3ನೇ ಅಲೆಯ ಆರ್ಭಟ ಇನ್ನಷ್ಟು ಅಪಾಯಕಾರಿಯಾಗಿರಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಜನರು ಈ ಕುರಿತಂತೆ ನಿರ್ಲಕ್ಷ್ಯ ತೋರುತ್ತಿದ್ದರೆ 3ನೇ ಅಲೆ ಎದುರಿಸುವುದು ಇನ್ನೂ ಕಷ್ಟವಾಗಿಬಿಡುತ್ತದೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿದೆ. ಹೀಗಿರುವಾಗ ಜನರು ಸ್ವಚ್ಛತೆ ಮತ್ತು ವ್ಯಾಕ್ಸಿನ್​ ಕುರಿತಾಗಿ ಗಮನವಹಿಸಲೇಬೇಕು. ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಟಿವಿ9 ನೆಟ್​ವರ್ಕ್​ ಅಭಿಯಾನವೊಂದನ್ನು ಹಮ್ಮಿಕೊಂಡಿದೆ.  ಟಿವಿ9 ನೆಟ್​ವರ್ಕ್​ ಮತ್ತು ಬಿಸ್ಲೆರಿ ಕಂಪೆನಿ ವತಿಯಿಂದ ಹ್ಯಾಂಡ್ ಪ್ಯೂರಿಫೈಯರ್ ಅಭಿಯಾನ ನಡೆಯಲಿದೆ.

ದೇಶದ ವಿವಿಧ ಭಾಗಗಳಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ‘ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳಿ’ ಎಂಬುದು  ಟಿವಿ9 ನೆಟ್​ವರ್ಕ್​ನ ಆರೋಗ್ಯ ಅಭಿಯಾನ. ಪ್ರಮುಖ 11 ನಗರಗಳಲ್ಲಿ 11 ದಿನಗಳ ಕಾಲ ಒಟ್ಟು 450ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳನ್ನು ತಲುಪಲಿದೆ. (ನೋಯ್ಡಾ, ದೆಹಲಿ, ಮುಂಬೈ, ಥಾಣೆ, ಪುಣೆ, ನವಿ ಮುಂಬೈ, ಹೈದರಾಬಾದ್​, ಬೆಂಗಳೂರು, ಚೆನ್ನೈ, ಕೋಲ್ಕತ್ತಾ). ಟಿವಿ9 ನೆಟ್​ವರ್ಕ್​ ಲೋಗೋ ಹೊಂದಿರುವ ವ್ಯಾನ್​ ಇಂದು ದೇಶದ ಪ್ರಮುಖ ನಗರಗಳಲ್ಲಿ ಸಂಚರಿಸುತ್ತದೆ. ಜತೆಗೆ ಲಸಿಕಾ ಕೇಂದ್ರಗಳಿಗೂ ಭೇಟಿ ನೀಡಲಿದೆ. ಈ ಅಭಿಯಾನ ಇಂದಿನಿಂದ 11 ದಿನಗಳ ಕಾಲ ನಡೆಯಲಿದೆ.

ಈಗಾಗಲೇ ಬೆಂಗಳೂರಿಗೆ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್ ವಾಹನ ಲಸಿಕಾ ಕೆಂದ್ರಕ್ಕೆ ಭೇಟಿ ನೀಡಲು ಸಿದ್ಧವಾಗಿದೆ. ವ್ಯಾಕ್ಸಿನೇಷನ್ ಸೆಂಟರ್ ಬಳಿ ಹೋದವರು ಉಚಿತವಾಗಿ ಕೈ ಸ್ವಚ್ಛ ಮಾಡಿಕೊಳ್ಳಬಹುದಾಗಿದೆ. ವೆರೈಟಿ ಫ್ಲೇವರ್​ನಲ್ಲಿ ಕಡಿಮೆ ಬೆಲೆಗೆ ಸಿದ್ಧಪಡಿಸಿದ ಫ್ಯೂರಿಫೈಯರ್ ಜನರಿಗೆ ಲಭ್ಯವಾಗಲಿದೆ. ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್ ಜೆಲ್ 25 ರೂಪಾಯಿ ಹಾಗೂ ಬಿಸ್ಲೆರಿ ಹ್ಯಾಂಡ್ ಪ್ಯೂರಿಫೈಯರ್ ಸ್ಪ್ರೇ 65 ರೂಪಾಯಿ ಇದೆ. ಪ್ರತಿ ದಿನ ನಾಲ್ಕು ವ್ಯಾಕ್ಸಿನೇಷನ್ ಸೆಂಟರ್ ಬಳಿ ವಾಹನ ಸಂಚರಿಸಲಿದೆ. ಜನ ಉಚಿತವಾಗಿ ಪ್ಯೂರಿಫೈಯರ್ ಬಳಸಿ ಇಷ್ಟವಾದರೆ ಖರೀದಿ ಮಾಡಬಹುದು. ಸಾಂಕ್ರಾಮಿಕ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ವ್ಯಾಕ್ಸಿನ್ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಜನರು ಈಗಲೇ ಎಚ್ಚುತ್ತುಕೊಳ್ಳುವುದು ಅತ್ಯವಶ್ಯಕ. ಆರೋಗ್ಯದ ಬಗ್ಗೆ ಗಮನವಹಿಸದೇ ಹೋದರೆ ಅಥವಾ ಕೊವಿಡ್​ ನಿಯಂತ್ರಣ ಕಟ್ಟುನಿಟ್ಟಿನ ಕ್ರಮದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಪಾಯವನ್ನು ಎದುರಿಸುಬೇಕಾಗುತ್ತದೆ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಟಿವಿ9 ನೆಟ್​ವರ್ಕ್​ ವತಿಯಿಂದ ಸಣ್ಣದೊಂದು ಪ್ರಯತ್ನ.

ಏಕಾಏಕಿ ದಾಳಿ ನಡೆಸಿದ ಸಾಂಕ್ರಾಮಿಕ ರೋಗದ ತೀವ್ರತೆ ಜನರ ಜೀವನ ಶೈಲಿಯನ್ನೇ ಬದಲಾಯಿಸಿಬಿಟ್ಟಿತು. ಅದೆಷ್ಟೋ ಜನರ ಪ್ರಾಣವನ್ನೇ ಕಿತ್ತುಕೊಂಡಿತ್ತು. ಆರ್ಥಿಕ ಚಟುವಟಿಕೆಗಳೆಲ್ಲ ಕುಂಠಿತಗೊಂಡವು. ಇನ್ನೇನು ಒಂದನೇ ಅಲೆ, ಎರಡನೇ ಅಲೆಯನ್ನು ಹಿಮ್ಮೆಟ್ಟಿ ಮುಂದೆ ಸಾಗಿದೆವು ಅನ್ನುವಷ್ಟರಲ್ಲಿಯೇ ವೈರಸ್​ ರೂಪಾಂತರಗಳ ಅಪಾಯ ಆತಂಕವನ್ನು ಸೃಷ್ಟಿಸುತ್ತಿದೆ. ದಿನಕ್ಕೊಂದು ಹೊಸ ರೂಪಾಂತರ ವೈರಸ್​ಗಳ ಹೆಸರುಗಳು ಕೇಳಿಬರುತ್ತಿವೆ. ಈ ಮಧ್ಯೆ ಕಠಿಣ ದಿನಗಳನ್ನು ಎದುರಿಸಲು ದೇಶದ ಪ್ರತಿಯೊಬ್ಬ ನಾಗರಿಕನೂ ಹೋರಾಡಲೇ ಬೇಕು. ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಜತೆಗೆ ವ್ಯಾಕ್ಸಿನ್​ ಪಡೆಯಬೇಕು. ನಮ್ಮ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.

ಇದನ್ನೂ ಓದಿ:

ಮುಂಬಯಿಯಲ್ಲಿ ಗುರುವಾರದಿಂದ ಗರ್ಭಿಣಿ ಮಹಿಳೆಯರಿಗೂ ಕೊವಿಡ್​ ಲಸಿಕೆ ನೀಡುವ ಅಭಿಯಾನ ಆರಂಭ

ಕೊವಿಡ್​ ಲಸಿಕೆ ಪಡೆಯಲು ಸುಲಭ ಮಾರ್ಗ ಸೃಷ್ಟಿಸಿದ ಕುಂದಾಪುರದ ಯುವಕ; ಹೊಸ ಆ್ಯಪ್​ ಕಂಡುಹಿಡಿಯುವಲ್ಲಿ ಯಶಸ್ವಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada