ಕೊವಿಡ್​ ಲಸಿಕೆ ಪಡೆಯಲು ಸುಲಭ ಮಾರ್ಗ ಸೃಷ್ಟಿಸಿದ ಕುಂದಾಪುರದ ಯುವಕ; ಹೊಸ ಆ್ಯಪ್​ ಕಂಡುಹಿಡಿಯುವಲ್ಲಿ ಯಶಸ್ವಿ

TV9kannada Web Team

TV9kannada Web Team | Edited By: preethi shettigar

Updated on: Jul 09, 2021 | 8:37 AM

ರಾಮ್ ದಾಸ್ ಕಂಡು ಹಿಡಿದ ಈ ಆ್ಯಪ್ ಹೆಸರು ‘ವಿ ಟ್ರ್ಯಾಕ್'. ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿ ಈ ಆ್ಯಪ್​ನ ಸಹಾಯದಿಂದ ನೀವು ವಾಸವಿರುವ ತಾಲೂಕಿನ ಪಿನ್ ಕೋಡ್ ಹಾಕಿ ವ್ಯಾಕ್ಸಿನ್ ಪಡೆದುಕೊಳ್ಳಲಿರುವ ಕೇಂದ್ರವನ್ನು ಆಯ್ಕೆ ಮಾಡಿದರೆ, ಆ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದ್ದಾಗ ಮೊಬೈಲ್​ನಲ್ಲಿ ನೋಟಿಫಿಕೇಶನ್ ಬರುವುದರ ಜತೆಗೆ ಅದನ್ನು ಓದುವವರೆಗೆ ಅಲಾರ್ಮ್ ಸದ್ದು ನಿಲ್ಲುವುದಿಲ್ಲ.

ಕೊವಿಡ್​ ಲಸಿಕೆ ಪಡೆಯಲು ಸುಲಭ ಮಾರ್ಗ ಸೃಷ್ಟಿಸಿದ ಕುಂದಾಪುರದ ಯುವಕ; ಹೊಸ ಆ್ಯಪ್​ ಕಂಡುಹಿಡಿಯುವಲ್ಲಿ ಯಶಸ್ವಿ
ರಾಮ್ ದಾಸ್

ಉಡುಪಿ: ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ವ್ಯಾಕ್ಸಿನ್ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇದಕ್ಕೆ ಕಾರಣ ವ್ಯಾಕ್ಸಿನ್​ನ ಮಹತ್ವದ ಬಗ್ಗೆ ಇದೀಗ ಪ್ರತಿಯೊಬ್ಬರಿಗೂ ಅರಿವಾಗಿದೆ. ಹೀಗಾಗಿ ಕೊವಿನ್ ಆ್ಯಪ್ ಮೂಲಕ ಲಸಿಕೆಯ ಲಭ್ಯತೆಯನ್ನು ತಿಳಿಯಲು ಹಾಗೂ ಕಾಯ್ದಿರಿಸಲು ಹೆಚ್ಚು ಜನರು ಪ್ರಯತ್ನಿಸುತ್ತಿದ್ದಾರೆ. ಆದರೆ ಹಲವರು ಕೊರೊನಾ ಲಸಿಕೆ ತೆಗೆದುಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಹೀಗೆ ಲಸಿಕೆ ತನ್ನ ಪೋಷಕರಿಗೆ ಕೊಡಿಸುವಲ್ಲಿ ಪರದಾಡಿದ ಓರ್ವ ಯುವಕ ಆ್ಯಪ್ ಒಂದನ್ನು ಹುಟ್ಟು ಹಾಕಿ ಲಸಿಕೆ ದಾರಿಯನ್ನು ಸುಗಮಗೊಳಿಸಿದ್ದಾರೆ. ಹಾಗಾದರೆ ಆ ಆ್ಯಪ್ ಯಾವುದು? ಅದು ಲಸಿಕೆ ಪಡೆಯಲು ಹೇಗೆ ಕೆಲಸ ಮಾಡುತ್ತದೆ ಎಂದು ಹುಬ್ಬೆರಿಸುವವರಿಗೆ ಉತ್ತರ ಇಲ್ಲಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮ ನಿವಾಸಿಯಾದ ರಾಮ್ ದಾಸ್ ನಾಯಕ್ ಲಸಿಕೆ ಪಡೆಯಲು ಹೊಸ ಆ್ಯಪ್​ ಕಂಡುಹಿಡಿದ ಯುವಕ. ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿರುವ ಈತ ಬೆಂಗಳೂರಿನ ಪ್ರತಿಷ್ಟಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ಊರಿಗೆ ಮರಳಿದ ರಾಮ್ ದಾಸ್ ಹಾಗೂ ಈತನ ಭಾವ ಕಾರ್ತಿಕ್ ಕಳೆದ ತಿಂಗಳ ಮೇ 3ರಂದು ತನ್ನ ತಂದೆಗೆ ವ್ಯಾಕ್ಸಿನ್ ಕೊಡಿಸಲು ವ್ಯಾಕ್ಸಿನ್ ಲಭ್ಯವಿರುವ ಕೇಂದ್ರ ಹುಡುಕಾಡಿ ಸುಸ್ತಾಗಿದ್ದಾರೆ. ಕೊನೆಗೆ ಈ ವ್ಯಾಕ್ಸಿನ್ ಹುಡುಕಾಟದ ಕಿರಿಕಿರಿಯೇ ದೂರ ಮಾಡೋಣ ಎಂದು ನಿರ್ಧರಿಸಿದ ಇವರು, ಕೇವಲ15ದಿನಗಳಲ್ಲಿ ಒಂದು ಹೊಸ ಆ್ಯಪ್ ಸಿದ್ಧಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಆ್ಯಪ್ ಮೂಲಕವೇ ಲಸಿಕೆ ಲಭ್ಯತೆ ಪತ್ತೆ ಹಚ್ಚಿ ಸುಲಭವಾಗಿ ಪೋಷಕರಿಗೆ ಲಸಿಕೆ ನೀಡಿದ್ದಾರೆ.

ತಾಜಾ ಸುದ್ದಿ

ರಾಮ್ ದಾಸ್ ಕಂಡು ಹಿಡಿದ ಈ ಆ್ಯಪ್ ಹೆಸರು ‘ವಿ ಟ್ರ್ಯಾಕ್’. ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿ ಈ ಆ್ಯಪ್​ನ ಸಹಾಯದಿಂದ ನೀವು ವಾಸವಿರುವ ತಾಲೂಕಿನ ಪಿನ್ ಕೋಡ್ ಹಾಕಿ ವ್ಯಾಕ್ಸಿನ್ ಪಡೆದುಕೊಳ್ಳಲಿರುವ ಕೇಂದ್ರವನ್ನು ಆಯ್ಕೆ ಮಾಡಿದರೆ, ಆ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದ್ದಾಗ ಮೊಬೈಲ್​ನಲ್ಲಿ ನೋಟಿಫಿಕೇಶನ್ ಬರುವುದರ ಜತೆಗೆ ಅದನ್ನು ಓದುವವರೆಗೆ ಅಲಾರ್ಮ್ ಸದ್ದು ನಿಲ್ಲುವುದಿಲ್ಲ. ಇನ್ನು ಈ ಆ್ಯಪ್ ಮೂಲಕ ಲಸಿಕೆ ಬುಕ್ ಮಾಡುವ ಆಯ್ಕೆ ಮಾಡಿದರೆ ನೇರವಾಗಿ ಕೊವಿನ್ ಆ್ಯಪ್​ನಲ್ಲಿ ರಿಜಿಸ್ಟರ್ ಆಗುತ್ತದೆ. ಈ ಮೂಲಕ ಸುಲಭವಾಗಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಸದ್ಯ 1ಸಾವಿರಕ್ಕೂ ಅಧಿಕ ಮಂದಿ ಈ ಆ್ಯಪ್ ಡೌನ್​ಲೋಡ್ ಮಾಡಿದ್ದಾರೆ. ಈ ಌಪ್ ಸಂಪೂರ್ಣವಾಗಿ ಸಿದ್ಧವಾಗಿದ್ದು, ಕೆಲವೊಂದು ತಾಂತ್ರಿಕ ದೋಷಗಳಿದೆ. ಹೀಗಾಗಿ ಅವುಗಳನ್ನು ಸರಿಪಡಿಸಲಾಗುತ್ತಿದೆ ಎಂದು ಆ್ಯಪ್​ ಕಂಡುಹಿಡಿದ ರಾಮ್ ದಾಸ್ ತಿಳಿಸಿದ್ದಾರೆ.

ಈ ಆ್ಯಪ್​ ಮೂಲಕ ಸಮಾಜ ಕಾರ್ಯವಾಗಿದ್ದು, ಮುಂದಿನ ದಿನಗಳಲ್ಲಿ ಈ ಆ್ಯಪ್​ ಅನ್ನು ಮತ್ತಷ್ಟು ಅಪ್​ಡೇಟ್ ಮಾಡಲಾಗುತ್ತಿದೆ. ಈ ಆ್ಯಪ್ ಮೂಲಕ ವಯಸ್ಸು, ವ್ಯಾಕ್ಸಿನ್ ಆಯ್ಕೆಯೂ ಮಾಡಬಹುದು ಎಂದು ರಾಮ್​ದಾಸ್ ತಿಳಿಸಿದ್ದಾರೆ. ತಾಂತ್ರಿಕವಾಗಿ ಌಪ್ ಸಿದ್ಧವಾದ ಬಳಿಕ ಇದನ್ನು ಪರಿಚಯಿಸಿದರೆ ವ್ಯಾಕ್ಸಿನ್ ಪಡೆಯಲು ಸರತಿ ಸಾಲು ನಿಲ್ಲುವ ಇನ್ನಷ್ಟು ಮಂದಿಗೆ ಸಹಾಯವಾಗಲಿದೆ. ಜತೆಗೆ ಪ್ರತಿಯೊಬ್ಬರಿಗೂ ಸಕಾಲದಲ್ಲಿ ವ್ಯಾಕ್ಸಿನ್ ದೊರಕಿದಂತಾಗುತ್ತದೆ ಎನ್ನುವುದು ಮಾತ್ರ ಸತ್ಯ.

ಇದನ್ನೂ ಓದಿ: ಸನೋಫಿ-ಜಿಎಸ್​ಕೆ ಕೊರೊನಾ ಲಸಿಕೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಭಾರತದಲ್ಲಿ ನಡೆಸಲು ಡಿಸಿಜಿಐ ಅನುಮೋದನೆ

CoWin: ಕೊವಿಡ್ ಲಸಿಕೆ ಬುಕಿಂಗ್ ಪೋರ್ಟಲ್​ ಕೊವಿನ್​ನಲ್ಲಿ ಏನಿದೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada