ಮುಂಬಯಿಯಲ್ಲಿ ಗುರುವಾರದಿಂದ ಗರ್ಭಿಣಿ ಮಹಿಳೆಯರಿಗೂ ಕೊವಿಡ್​ ಲಸಿಕೆ ನೀಡುವ ಅಭಿಯಾನ ಆರಂಭ

TV9 Digital Desk

| Edited By: Arun Kumar Belly

Updated on:Jul 14, 2021 | 11:13 PM

ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡರೆ ರಕ್ತ ಹೆಪ್ಪುಗಟ್ಟುವ (ಥ್ರಾಂಬೊಸಿಸ್) ಅಪಾಯವೂ ಸೇರಿದಂತೆ ಗರ್ಭಿಣಿ ಮಹಿಳೆ ಮತ್ತು ಮಗವಿಗೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಲಾಗಿತ್ತು. ಆದರೆ ಸಮಿತಿಯು ಅಪಾಯಕ್ಕಿಂತ ಪ್ರಯೋಜನಗಳೇ ಜಾಸ್ತಿ ಎಂಬ ನಿರ್ಣಯಕ್ಕೆ ಬಂದಿತ್ತು.

ಮುಂಬಯಿಯಲ್ಲಿ ಗುರುವಾರದಿಂದ ಗರ್ಭಿಣಿ ಮಹಿಳೆಯರಿಗೂ ಕೊವಿಡ್​ ಲಸಿಕೆ ನೀಡುವ ಅಭಿಯಾನ ಆರಂಭ
ಗರ್ಭಿಣಿ ಮಹಿಳೆಯರಿಗೆ ಕೋವಿಡ್​ ಲಸಿಕೆ
Follow us

ಮುಂಬಯಿ: ಮುಂಬಯಿ ಮಹಾನಗರದ ಪೌರಾಡಳಿತವು ಗರ್ಭಿಣಿ ಮಹಿಳೆಯರಿಗೆ ಕೊವಿಡ್​-19 ಲಸಿಕೆ ನೀಡುವ ವಿಶೇಷ ಆಭಿಯಾನವನ್ನು ಗುರುವಾರದಿಂದ ಆರಂಭಿಸಲಿದೆ. ಜುಲೈ 15ರಿಂದ ಆರಂಭಗೊಳ್ಳುವ ಈ ಅಭಿಯಾನವು ನಗರದಾದ್ಯಂತ ಇರುವ 35 ಲಸಿಕಾ ಕೇಂದ್ರಗಳ ಪೈಕಿ ಒಂದರಲ್ಲಿ ಆರಂಭವಾಗಲಿದೆ ಮತ್ತು ಅದಕ್ಕಾಗಿ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ ಎಂದು ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಅಂಶ ಹಲವಾರು ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಶಿವ ಸೇನೆ ಪಕ್ಷದ ಸಂಸದೆ ಪ್ರಿಯಾಂಕಾ ಚತುರ್ವೇದಿ ಮುನ್ನೆಲೆಗೆ ತಂದಿದ್ದರು. ಮೇ ತಿಂಗಳಿನಲ್ಲಿ ಎನ್​​ಡಿಟಿವಿ ಜೊತೆ ಮಾತಾಡಿದ್ದ ಪ್ರಿಯಾಂಕಾ ಅವರು, ‘ಕೇವಲ ಜೈವಿಕ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರನ್ನು ಯಾಕೆ ಲಸಿಕೆ ಹಾಕಿಸಿಕೊಳ್ಳುವುದರಿಂದ ತಡೆಯಬೇಕು,’ ಎಂದು ಪ್ರಶ್ನಿಸಿದ್ದರು.

ಮೇ ತಿಂಗಳವರೆಗೆ ಎದೆ ಹಾಲುಣಿಸುವ ಮಹಿಳೆಯರು ಲಸಿಕೆ ಪಡೆಯಲ್ಲ ಅರ್ಹರು ಆದರೆ ಗರ್ಭಿಣಿಯರು ಅಲ್ಲ ಎನ್ನುವ ಮಾತಿತ್ತು. ಗರ್ಭಿಣಿ ಮಹಿಳೆಯರ ಮೇಲೆ ಲಸಿಕೆಯ ಕ್ಲಿನಿಕಲ್ ಟ್ರಯಲ್​ಗಳು ನಡೆದಿಲ್ಲ ಮತ್ತು ಅವರಿಗೆ ಲಸಿಕೆ ನೀಡದರೆ ಆಗಬಹದಾದ ಅಡ್ಡ ಪರಿಣಾಮಗಳು ಮತ್ತು ಅದು ಅವರಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲದ ಕಾರಣ ಅವರನ್ನು ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು.

ಅದರೆ ಜೂನ್​ನಲ್ಲಿ ನಿಲುವು ಬದಲಿಸಿದ ಕೇಂದ್ರ ಅರೋಗ್ಯ ಸಚಿವಾಲಯವು, ಗರ್ಭಿಣಿ ಮಹಿಳೆಯರು ಲಸಿಕೆಯನ್ನು ಹಾಕಿಸಿಕೊಳ್ಳಲೇ ಬೇಕು ಎಂದು ಹೇಳಿತು. ಮಾರಣಾಂತಿಕ ಸೋಂಕಿನಿಂದ ಲಸಿಕೆ ಮೂಲಕ ರಕ್ಷಣೆ ಪಡೆಯುವ ಅಧಿಕಾರ ಮತ್ತು ಹಕ್ಕು ಅವರಿಗಿದೆಯೆಂದು ಇಲಾಖೆ ಹೇಳಿತ್ತು.

‘ಆರೋಗ್ಯ ಸಚಿವಾಲಯವು, ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಬಹುದಾದ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅವರಿಗೆ ಲಸಿಕೆ ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ನೀಡಲೇಬೇಕು,’ ಎಂದು ಭಾರತದ ವೈದ್ಯಕೀಯ ಸಂಶೋಧನೆ ಕೌನ್ಸಿಲ್​ನ ಮಹಾ ನಿರ್ದೇಶಕ ಡಾ ಬಲರಾಮ ಭಾರ್ಗವ ಎಎನ್​ಐ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವುದು ಎನ್‌ಟಿಎಜಿಐ ಅಥವಾ ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್​ಟಿಎಜಿಐ) ಮೇ ತಿಂಗಳಲ್ಲಿ ಚರ್ಚಿಸಿದ ವಿಷಯಗಳಲ್ಲಿ ಒಂದಾಗಿದೆ.

ಕೊವಿಡ್ ಪಿಡುಗಿನ ಪ್ರಸಕ್ತ ಸ್ಥಿತಿಯನ್ನುಗಮನಿಸಿದರೆ, ಗರ್ಭಿಣಿ ಮಹಿಳೆಯರನ್ನು ಲಸಿಕಾ ಕಾರ್ಯಕ್ರಮದಿಂದ ಹೊರಗಿಡಬಾರದು ಎಂದು ಎನ್​ಟಿಎಜಿಐ-ಎಸ್​ಟಿಎಸ್​ಸಿ ಶಿಫಾರಸ್ಸು ಮಾಡುತ್ತದೆ. ಯಾಕೆಂದರೆ, ಅವರು ಸೋಂಕಿಗೆ ಒಳಗಾಗುವ ಸಾಧ್ಯತೆ ಜಾಸ್ತಿಯಿದೆ ಮತ್ತು ಅವರಿಗೆ ಎದುರಾಗಬಹುದಾದ ಅಪಾಯಕ್ಕಿಂತ ಪಡೆದುಕೊಳ್ಳುವ ಪ್ರಯೋಜನದ ತೂಕ ಜಾಸ್ತಿಯಿದೆ, ಎಂದು ಸಮಿತಿಯು ಮೇ 28 ರಂದು ನಡೆದ ಸಭೆಯಲ್ಲಿ ಹೇಳಿತ್ತು.

ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡರೆ ರಕ್ತ ಹೆಪ್ಪುಗಟ್ಟುವ (ಥ್ರಾಂಬೊಸಿಸ್) ಅಪಾಯವೂ ಸೇರಿದಂತೆ ಗರ್ಭಿಣಿ ಮಹಿಳೆ ಮತ್ತು ಮಗವಿಗೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಲಾಗಿತ್ತು. ಆದರೆ ಸಮಿತಿಯು ಅಪಾಯಕ್ಕಿಂತ ಪ್ರಯೋಜನಗಳೇ ಜಾಸ್ತಿ ಎಂಬ ನಿರ್ಣಯಕ್ಕೆ ಬಂದಿತ್ತು.

‘ಲಸಿಕೆ ನೀಡುವ ಮೊದಲು ಗರ್ಭಿಣಿ ಮಹಿಳೆಯರಿಗೆ ಲಸಿಕೆಯ ದೀರ್ಘಕಾಲಿಕ ಅಡ್ಡ ಪರಿಣಾಮಗಳು ಮತ್ತು ಗರ್ಭಕ್ಕೆ ಹಾಗೂ ಮಗುವಿಗೆ ಅದು ಸುರಕ್ಷಿತ ಎನ್ನುವ ಅಂಶವಿನ್ನೂ ಸಾಬೀತಾಗಿಲ್ಲ,’ ಎನ್ನುವುದನ್ನು ತಿಳಿಸಬೇಕು ಎಂದು ಎನ್​ಟಿಎಜಿಐ ಹೇಳಿದೆ.

ಇದನ್ನೂ ಓದಿ: Pregnancy Care: ಕೊವಿಡ್​ ಸಮಯದಲ್ಲಿ ಗರ್ಭಿಣಿಯರಿಗಾಗಿ ಆರೋಗ್ಯ ಸಲಹೆಗಳು; ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ

ತಾಜಾ ಸುದ್ದಿ

Click on your DTH Provider to Add TV9 Kannada