‘ಪುಷ್ಪ 2’ ಕಾಲ್ತುಳಿತಕ್ಕೆ ವರ್ಷ: ಬಾಲಕನ ಸ್ಥಿತಿ ಈಗ ಹೇಗಿದೆ? ನಿಂತಿದೆಯೇ ಅಲ್ಲು ಅರ್ಜುನ್ ನೆರವು?
Sandhya Theater tragedy: ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಿ ಐದು ವರ್ಷಗಳಾಯ್ತು. ಅಂತೆಯೇ ಸಂಧ್ಯಾ ಚಿತ್ರಮಂದಿರದ ಕಾಲ್ತುಳಿತ ನಡೆದು ಸಹ ಐದು ವರ್ಷಗಳಾಯ್ತು. ಆಗ ಕೋಮಾಕ್ಕೆ ಹೋಗಿದ್ದ ಬಾಲಕ ಈಗ ಹೇಗಿದ್ದಾನೆ? ಅಲ್ಲು ಅರ್ಜುನ್ ಸಹಾಯ ನಿಂತಿದೆಯೇ? ಅಥಹಾ ಈಗಲೂ ಸಹಾಯ ಮಾಡುತ್ತಿದ್ದಾರೆಯೇ? ಮಾಹಿತಿ ಇಲ್ಲಿದೆ...

ಡಿಸೆಂಬರ್ 05 ಅಲ್ಲು ಅರ್ಜುನ್ (Allu Arjun) ವೃತ್ತಿ ಜೀವನದಲ್ಲಿ ಅತ್ಯಂತ ಮಹತ್ವದ ದಿನ. ಅವರ ವೃತ್ತಿ ಜೀವನದ ಅತ್ಯಂತ ದೊಡ್ಡ ಬ್ಲಾಕ್ ಬಸ್ಟರ್ ‘ಪುಷ್ಪ 2’ ಬಿಡುಗಡೆ ಆದ ದಿನ. ಆದರೆ ಅದನ್ನು ಸೆಲೆಬ್ರೇಟ್ ಮಾಡದ ಸ್ಥಿತಿಯಲ್ಲಿ ಅಲ್ಲು ಅರ್ಜುನ್ ಇದ್ದಾರೆ. ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚೆ ಅಂದರೆ ಡಿಸೆಂಬರ್ 04ರಂದು ಹಲವು ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಪ್ರೀಮಿಯರ್ ಶೋ ವೀಕ್ಷಿಸಲು ತೆರಳಿದ್ದರು. ಆಗ ನಡೆದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿ ಆಕೆಯ ಪುತ್ರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಆ ಬಾಲಕ ಇಂದಿಗೂ ಆಸ್ಪತ್ರೆಯಲ್ಲೇ ಇದ್ದಾನೆ.
ಸಂಧ್ಯಾ ಥಿಯೇಟರ್ನಲ್ಲಿ ಅಂದು ನಡೆದ ಕಾಲ್ತುಳಿತದಲ್ಲಿ ಒಂದು ಕುಟುಂಬವೇ ಬಲಿ ಆಗಿಬಿಟ್ಟಿತು. ಭಾಸ್ಕರ್ ಅವರ ಪತ್ನಿ ಮತ್ತು ಮಗಳು ಉಸಿರುಗಟ್ಟಿ ನಿಧನ ಹೊಂದಿದರೆ ಮಗ ಸಾಯಿ ತೇಜ್ ಕೋಮಕ್ಕೆ ಸೇರಿಕೊಂಡಿದ್ದ. ಘಟನೆ ನಡೆದು ಒಂದು ವರ್ಷವಾದರೂ ಇಂದಿಗೂ ಸಹ ಸಾಯಿ ತೇಜ್ ಆಸ್ಪತ್ರೆಯಲ್ಲಿಯೇ ಇದ್ದಾನೆ. ಇಂದಿಗೂ ಪ್ರತಿದಿನ ಚಿಕಿತ್ಸೆ ನಡೆಯುತ್ತಲೇ ಇದೆ. ಅಂದಹಾಗೆ ಅಲ್ಲು ಅರ್ಜುನ್ ಇಂದಿಗೂ ನೆರವು ನೀಡುತ್ತಿದ್ದಾರಾ?
ನಿನ್ನೆಯಷ್ಟೆ ಸಾಯಿ ತೇಜ್ ಅವರ ತಂದೆ ಭಾಸ್ಕರ್ ಅವರು ನಿರ್ಮಾಪಕ ದಿಲ್ ರಾಜು ಅವರನ್ನು ಭೇಟಿ ಆಗಿದ್ದು, ದಿಲ್ ರಾಜು ಅವರು ಭಾಸ್ಕರ್ ಅವರೊಟ್ಟಿಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಹೇಳಿರುವಂತೆ ಅಲ್ಲು ಅರ್ಜುನ್ ಅವರು ಇಂದಿಗೂ ಸಹ ಸಾಯಿ ತೇಜ್ ಚಿಕಿತ್ಸೆಗೆ ಸಹಾಯ ಮಾಡುತ್ತಲೇ ಇದ್ದಾರಂತೆ.
ಇದನ್ನೂ ಓದಿ:ಕೊರಿಯಾಕ್ಕೆ ಹೋಗಿ ಶಾಕ್ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್
ಸಾಯಿ ತೇಜ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಆಗಲೇ ಸುಮಾರು 70 ಲಕ್ಷ ರೂಪಾಯಿ ಹಣವನ್ನು ಅವರ ಶಸ್ತ್ರ ಚಿಕಿತ್ಸೆ ಇನ್ನಿತರೆಗಳಿಗೆ ಅಲ್ಲು ಅರ್ಜುನ್ ಮತ್ತು ಅಲ್ಲು ಅರವಿಂದ್ ಅವರು ನೀಡಿದ್ದರಂತೆ. ಅದಾದ ಬಳಿಕ ಎರಡು ಕೋಟಿ ರೂಪಾಯಿ ಹಣವನ್ನು ಎಫ್ಡಿ ಮಾಡಿ, ಅದರ ತಿಂಗಳ ಬಡ್ಡಿಯಾಗಿ ಬರುತ್ತಿರುವ 70 ಸಾವಿರ ರೂಪಾಯಿಗಳನ್ನು ಸಾಯಿ ತೇಜ್ ಚಿಕಿತ್ಸೆಗೆ ಖರ್ಚಾಗುವಂತೆ ಮಾಡಲಾಗಿದೆಯಂತೆ.
ಇದೀಗ ಭಾಸ್ಕರ್ ಅವರು ರಿಹಾಬ್ನಲ್ಲಿ ಮಗನನ್ನು ಸುಮಾರು ಆರು ತಿಂಗಳ ಕಾಲ ಇರಿಸಿ ಅಲ್ಲಿ ಫಿಸಿಯೋ ಥೆರಫಿ ಕೊಡಿಸಲು ಮುಂದಾಗಿದ್ದು ಅದಕ್ಕಾಗಿ ಹೆಚ್ಚಿನ ನೆರವನ್ನು ಅಲ್ಲು ಅರ್ಜುನ್ ಬಳಿ ಕೇಳಿದ್ದಾರಂತೆ. ಅದಕ್ಕೆ ದಿಲ್ ರಾಜು ಅವರು ಖಂಡಿತವಾಗಿಯೂ ಹೆಚ್ಚುವರಿ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ, ಆರು ತಿಂಗಳು ಮಾತ್ರವಲ್ಲ ಒಂದು ವರ್ಷ ಬೇಕಾದರೂ ಚಿಕಿತ್ಸೆ ಕೊಡಿಸಿ ಅದರ ಖರ್ಚನ್ನು ನಾವು ಭರಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




