Viral video: ವಧು ಪಕ್ಕದಲ್ಲಿರುವಾಗಲೇ ವರನಿಗೆ ಗಡದ್ದಾಗಿ ನಿದ್ದೆ! ರಾತ್ರಿ ಕುಡಿದಿದ್ದೇ ಹೆಚ್ಚಾಯ್ತಾ? ಎಂದ ನೆಟ್ಟಿಗರು

ವಿವಾಹ ಅಂದಾಕ್ಷಣ ಮಧು, ವರರಿಗೆ ಶುಭ ದಿನ. ವೈವಾಹಿಕ ಜೀವನಕ್ಕೆ ಕಾಲಿಡುವ ಮೊದಲ ದಿನ. ಈ ಸಮಯದಲ್ಲಿ ನವ ಜೋಡಿಗಳು ಸಂತೋಷದಿಂದ ಇರುತ್ತಾರೆ. ಮನೆಯವರೂ ಸಹ ಉತ್ಸಾಹದಲ್ಲಿರುತ್ತಾರೆ. ಆದರೆ ಈ ವರನಿಗೆ ಮಾತ್ರ ಏನಾಗಿತ್ತೋ ಏನೋ... ವಧು ಪಕ್ಕದಲ್ಲಿರುವಾಗಲೇ ನಿದ್ದೆ ಮಾಡುತ್ತಿದ್ದಾನೆ.

Viral video: ವಧು ಪಕ್ಕದಲ್ಲಿರುವಾಗಲೇ ವರನಿಗೆ ಗಡದ್ದಾಗಿ ನಿದ್ದೆ! ರಾತ್ರಿ ಕುಡಿದಿದ್ದೇ ಹೆಚ್ಚಾಯ್ತಾ? ಎಂದ ನೆಟ್ಟಿಗರು
ವಧು ಪಕ್ಕದಲ್ಲಿರುವಾಗಲೇ ವರ ನಿದ್ದೆ ಹೊಡೀತಿದಾನೆ!

ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವುದು ವಿಶೇಷವೇನಲ್ಲ. ಕೆಲವೊಂದು ವಿಡಿಯೋ ನೋಡಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಯ್ತು ಎಂದವರೂ ಇದ್ದಾರೆ. ಅದರಲ್ಲಿಯೂ ವಿವಾಹ ಸಂದರ್ಭದಲ್ಲಿ ನಡೆಯುವ ಕೆಲವು ಸಂಗತಿಗಳು ಹೆಚ್ಚು ತಮಾಷೆಯಾಗಿರುತ್ತದೆ. ವಿವಾಹವನ್ನು ಶಾಸ್ತ್ರ- ಸಂಪ್ರದಾಯಕ್ಕೆ ತಕ್ಕಂತೆ ಖುಷಿಯಿಂದ ಆಚರಿಸುವ ಪದ್ಧತಿ ಭಾರತದಲ್ಲಿದೆ. ಮನೆಯವರೆಲ್ಲಾ ಸುಂದರವಾಗಿ ಅಲಂಕಾರಗೊಂಡು ಸಂಪ್ರದಾಯ ಬದ್ಧವಾಗಿ ವಿವಾಹವನ್ನು ನೆರವೇರಿಸಲಾಗುತ್ತದೆ. ಆದ್ರೆ ಇಲ್ಲೊಂದು ತಮಾಷೆಯ ಸಂಗತಿ ನಡೆದಿದೆ. ಮಂಟಪದಲ್ಲಿ ಕುಳಿತಿರುವ ವರ ಪದೇ ಪದೇ ನಿದ್ದೆಗೆ ಜಾರುತ್ತಿದ್ದಾನೆ. ಇವನಿಗೇನಾಯ್ತಪ್ಪಾ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ವಿವಾಹ ಅಂದಾಕ್ಷಣ ಮಧು, ವರರಿಗೆ ಶುಭ ದಿನ. ವೈವಾಹಿಕ ಜೀವನಕ್ಕೆ ಕಾಲಿಡುವ ಮೊದಲ ದಿನ. ಈ ಸಮಯದಲ್ಲಿ ನವ ಜೋಡಿಗಳು ಸಂತೋಷದಿಂದ ಇರುತ್ತಾರೆ. ಮನೆಯವರೂ ಸಹ ಉತ್ಸಾಹದಲ್ಲಿರುತ್ತಾರೆ. ಆದರೆ ಈ ವರನಿಗೆ ಮಾತ್ರ ಏನಾಗಿತ್ತೋ ಏನೋ… ವಧು ಪಕ್ಕದಲ್ಲಿರುವಾಗಲೇ ನಿದ್ದೆ ಮಾಡುತ್ತಿದ್ದಾನೆ.

ವಿಡಿಯೋದಲ್ಲಿ ಗಮನಿಸುವಂತೆ ವಧು, ವರ ಅಕ್ಕಪಕ್ಕದಲ್ಲಿಯೇ ಕುಳಿತಿದ್ದಾರೆ. ವರ ಮಾತ್ರ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದಾನೆ. ಪಕ್ಕದಲ್ಲಿ ನಿಂತಿರುವವರು ಎಷ್ಟೇ ಎದ್ದೇಳಿಸಲು ಪ್ರಯತ್ನಿಸಿದರೂ ಆತ ಮಾತ್ರ ಕಣ್ಣು ಬಿಡುತ್ತಿಲ್ಲ. ವಿಡಿಯೋ ನೋಡಿದ ನೆಟ್ಟಿಗರು ರಾತ್ರಿ ಕುಡಿದಿದ್ದೇ ಹೆಚ್ಚಾಯ್ತಾ? ಎಂದು ಪ್ರಶ್ನೆ ಮಾಡಿದ್ದಾರೆ.

ಈ ತಮಾಷೆ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ವರ ಕಣ್ಣು ಬಿಡದ ಕಾರಣ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದೆ. ಮದುವೆಯ ಸಮಯದಲ್ಲೂ ಆತ ನಿರಾಳವಾಗಿ ನಿದ್ದೆ ಮಾಡ್ತಾ ಇದ್ದಾನಲ್ಲಾ.. ಕಾರಣವೇನಿರಬಹುದು? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಜನರು ಕುತೂಹಲರಾಗಿದ್ದಾರೆ. ಕಾಮೆಂಟ್​ ಕೂಡಾ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಕದ್ದ ಕೈನಲ್ಲೇ ಕಳ್ಳನೊಬ್ಬ ಸಿಕ್ಕಿಬಿದ್ರೆ ಕಳ್ಳನ ಪರಿಸ್ಥಿತಿ ಹೇಗಿರಬೇಡ ಹೇಳಿ? ವಿಡಿಯೋ ವೈರಲ್

ಲಾಕ್​ಡೌನ್​ ಎಫೆಕ್ಟ್: ಬಣ್ಣದ ಲೋಕ ತೊರೆದು ಮೀನು ಮಾರಾಟಕ್ಕೆ ಇಳಿದ ಕಿರುತೆರೆ ನಟ, ಫೋಟೋ ವೈರಲ್​