ಇಷ್ಟೆತ್ತರದ ಹುಡುಗಿಯನ್ನು ನೋಡಿದ್ದೀರಾ? 7 ಅಡಿ ಎತ್ತರ, ಕೇವಲ 14 ವರ್ಷದ ಬಾಲಕಿ; ಬಾಸ್ಕೆಟ್ ಬಾಲ್ ಆಟಕ್ಕೆ ನೆಟ್ಟಿಗರು ಫಿದಾ
ಅವಳ ತಂಡ ಹಾಗೂ ಅವಳ ಎದುರಾಳಿ ತಂಡದ ಆಟಗಾರರಿಗೆ ಹೋಲಿಸಿದರೆ ಇವಳೇ ಎತ್ತರದ ಹುಡುಗಿ. ಸುಮಾರು 7.4 ಅಡಿ ಎತ್ತರವನ್ನು ಹೊಂದಿದ್ದಾಳೆ. ಆಟದಲ್ಲಿ 6 ಶಾಟ್ ಹೊಡೆಯುವ ಮೂಲಕ ತನ್ನ ತಂಡವನ್ನು ಗೆಲ್ಲಿಸಿದ್ದಾಳೆ.
ಜಾಂಗ್ ಜಿಯು ಹೆಸರಿನ 14 ವರ್ಷದ ಬಾಲಕಿಯ ಎತ್ತರ 7 ಅಡಿ. ತನ್ನ ಎತ್ತರವಾದ ದೇಹವನ್ನು ಅವಳು ಬಾಸ್ಕೆಟ್ ಬಾಲ್ ಆಟದಲ್ಲಿ ಸಾಧನೆ ಮಾಡಲು ಬಳಸಿಕೊಂಡಿದ್ದಾಳೆ. ಸಿಕ್ಕಾಪಟ್ಟೆ ಎತ್ತರ ಇರಬಾರದು.. ಕಂಡ್ರೀ ಎನ್ನುವವರಿಗೆ ಇದು ಸ್ಪೂರ್ತಿ ತುಂಬುವ ಸಾಧನೆ. ತನ್ನ ಚಿಕ್ಕ ವಯಸ್ಸಿಗೆ ಬಾಸ್ಕೆಟ್ಬಾಲ್ ಕ್ರೀಡೆಯಲ್ಲಿ ಹೆಸರು ಪಡೆದ ಬಾಲಕಿ ಸಾಧನೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.
ಬೀಜಿಂಗ್ನಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ 42 ಅಂಕಗಳನ್ನು ತನ್ನ ತಂಡಕ್ಕೆ ನೀಡುವ ಮೂಲಕ ಬಾಲಕಿ ಹೆಸರು ಪಡೆದಿದ್ದಾಳೆ. ಅವಳ ತಂಡ ಹಾಗೂ ಅವಳ ಎದುರಾಳಿ ತಂಡದ ಆಟಗಾರರಿಗೆ ಹೋಲಿಸಿದರೆ ಇವಳೇ ಎತ್ತರದ ಹುಡುಗಿ. ಸುಮಾರು 7.4 ಅಡಿ ಎತ್ತರವನ್ನು ಹೊಂದಿದ್ದಾಳೆ. ಆಟದಲ್ಲಿ 6 ಶಾಟ್ ಹೊಡೆಯುವ ಮೂಲಕ ತನ್ನ ತಂಡವನ್ನು ಗೆಲ್ಲಿಸಿದ್ದಾಳೆ.
ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಸುದ್ದಿಯಲ್ಲಿದೆ. ಬಾಲಕಿಯ ಆಟಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕೆಲವರು ಆಕೆಯ ಎತ್ತರವನ್ನು ನೋಡಿ ಅಶ್ಚರ್ಯಚಕಿತರಾಗಿದ್ದಾರೆ. ಚೀನಾದ ಬಾಸ್ಕೆಟ್ ಬಾಲ್ ಸ್ಟಾರ್ ಯಾವೊ ಮಿಂಗ್ ಅವರ ಎತ್ತರ ಹಾಗೂ ಬಾಲಕಿಯ ಎತ್ತರ ಸರಿಸುಮಾರು ಒಂದೇ ಆಗಿದೆ. ಮೂಲಗಳ ಪ್ರಕಾರ, ಜಾಂಗ್ ಜಿಯು ಪೂರ್ವ ಚೀನಾ ಭಾಗದವರು. ಅವರ ಕುಟುಂಬದವರು ಬಾಸ್ಕೇಟ್ ಬಾಲ್ ಆಟದಲ್ಲಿ ಪರಿಣಿತರು. ಅವರ ತಂದೆ 6.9 ಅಡಿ ಎತ್ತರ ಹಾಗೂ ತಾಯಿ 6.4 ಅಡಿ ಎತ್ತರವನ್ನು ಹೊಂದಿದ್ದಾರೆ.
7’4” Zhang Ziyu is 14 YEARS OLD ?
She put up 42 PTS, 25 REB, & 6 BLK to win China Nationals ?
(via @globaltimesnews) pic.twitter.com/teAAfx2F8v
— Overtime (@overtime) July 15, 2021
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಒಂದು ರಾತ್ರಿ ಕಳೆಯುವಷ್ಟರಲ್ಲಿ ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮೊದಲಿಗೆ ಟ್ವಿಟರ್ನಲ್ಲಿ ವಿಡಿಯೋ ಹರಿಬಿಡಲಾಗಿದೆ. ಬಾಲಕಿಯ ಎತ್ತರ ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
ಇದನ್ನೂ ಓದಿ:
ವಿಶ್ವದ ಅತ್ಯಂತ ಎತ್ತರದ ಕುದುರೆ ಬಿಗ್ ಜೇಕ್ ನಿಧನ; ಅದು ಮೃತಪಟ್ಟ ದಿನಾಂಕ ಹೇಳಲು ಹಿಂದೇಟು ಹಾಕಿದ ಮಾಲೀಕರು
Women Fall off 6300 Feet Cliff : ಜೋಕಾಲಿ ಆಡ್ತಾ 6300 ಅಡಿ ಎತ್ತರದಿಂದ ಬಿದ್ದರು
Published On - 3:21 pm, Fri, 16 July 21