Shocking News: ಬೆಂಕಿಯಿಂದ ಪಾರು ಮಾಡಲು ಕಟ್ಟಡದ ಮಹಡಿಯಿಂದ ಅಂಬೆಗಾಲಿಡುವ ಮಗುವನ್ನು ಎಸೆದ ಮಹಿಳೆ!
ಘಟನೆಯ ಸಂದರ್ಭದಲ್ಲಿ ನನಗೆ ಏನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ. ನನ್ನ ಮಗುವನ್ನು ಬಿಟ್ಟು ನಾನೊಬ್ಬಳೆ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಮಗುವನ್ನು ಕೆಳಗೆ ಎಸೆಯಲೇಬೇಕಾಯಿತು ಎಂದು ನಲೆಡಿ ಹೇಳಿದ್ದಾರೆ.
ಧಗಧಗನೆ ಉರಿಯುತ್ತಿರುವ ಬೆಂಕಿಯಿಂದ ಕಾಪಾಡಲು ತನ್ನ ಮಗುವನ್ನು ಕಟ್ಟಡದ ಮಹಡಿಯಿಂದ ತಾಯಿ ಎಸೆದಿದ್ದಾಳೆ. ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ದೊಡ್ಡ ಕಟ್ಟಡವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ 16ನೇ ಮಹಡಿಯ ಮೇಲಿದ್ದ ತಾಯಿ ಮತ್ತು ಮಗು ಆತಂಕಗೊಂಡಿದ್ದರು. ಪ್ರಾಣಾಪಾಯದಿಂದ ಹೇಗೆ ಪಾರಾಗುವುದು ಎಂಬ ಭಯ ಅವರಲ್ಲಿತ್ತು. ತಕ್ಷಣವೇ ತಡಮಾಡದೇ ಮಹಡಿಯ ಮೇಲಿದ್ದ ತಾಯಿ ಅಂಬೆಗಾಲಿಡುವ ಮಗುವನ್ನು ಕೆಳಗಿರುವ ಜನರಿಗೆ ಎಸೆದಿದ್ದಾಳೆ. ಈ ದೃಶ್ಯವನ್ನು ಪತ್ರಕರ್ತೆ ನೋಮ್ಸಾ ಮಾಸೆಕೊ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು ಭಯಾನಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಂಗಳವಾರ ಎತ್ತರದ ಕಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗ ನಾನು 16ನೇ ಮಹಡಿಯಲ್ಲಿದ್ದೆ. ಬೆಂಕಿಯಿಂದ ತನ್ನ ಮಗುವನ್ನು ರಕ್ಷಿಸುವ ಸಲುವಾಗಿ ಬೇರೆ ಉಪಾಯ ನನಗೆ ಹೊಳೆಯಲಿಲ್ಲ. ಮೆಟ್ಟಿಲುಗಳಿಂದ ಇಳಿಯಬೇಕು ಅನ್ನುವಷ್ಟರಲ್ಲಿ ಕಗ್ಗತ್ತಲು ಆವರಿಸಿತ್ತು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನಲೆಡಿ ಮನ್ಯೋನಿ ಹೇಳಿದ್ದಾರೆ.
[WATCH] Toddler rescued from a fire. Looters started a fire after stealing everything from the shops on the ground floor. They then set fire to the building, affecting apartments upstairs. Neighbours caught the little girl ?#ShutdownKZN watch @BBCWorld for more pic.twitter.com/LTMTAa7WAz
— Nomsa Maseko (@nomsa_maseko) July 13, 2021
ಅಂಬೆಗಾಲಿಡುವ ತನ್ನ ಮಗುವನ್ನು ಕೆಳಗೆ ನಿಂತಿದ್ದ ಜನರ ಗುಂಪಿಗೆ ಎಸೆದಳು. ಅದೃಷ್ಟವಶಾತ್ ಮಗುವಿಗೆ ಯಾವುದೇ ಹಾನಿಯಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆಯೇ ಎರಡು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆಯ ಸಂದರ್ಭದಲ್ಲಿ ನನಗೆ ಏನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ. ನನ್ನ ಮಗುವನ್ನು ಬಿಟ್ಟು ನಾನೊಬ್ಬಳೆ ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಹಾಗಾಗಿ ಮಗುವನ್ನು ಕೆಳಗೆ ಎಸೆಯಲೇಬೇಕಾಯಿತು. ಬಳಿಕ ಕಷ್ಟದ ಸಂದರ್ಭದಲ್ಲಿ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ನಲೆಡಿ ರಾಯಿಟರ್ಸ್ಗೆ ಹೇಳಿದ್ದಾರೆ.
ಇದನ್ನೂ ಓದಿ:
ಹೈದರಾಬಾದ್: ತಂದೆ-ತಾಯಿಯ ಎದುರೇ ತಂಗಿಗೆ ಬೆಂಕಿ ಹಚ್ಚಿದ ಅಣ್ಣ
Boat Catches Fire : ಮತ್ಸ್ಯಕಾ ಮೀನುಗಾರರ ಬೋಟ್ಗೆ ಬೆಂಕಿ, ಹಡಗು ಸಂಪೂರ್ಣ ಭಸ್ಮ