ಬರೀ ಕುಣಿತದ ಮೂಲಕವೇ ಜಾರ್ಖಂಡ್ನ ಈ ಅಣ್ಣ-ತಂಗಿ ಸಾಮಾಜಿಕ ಜಾಲತಾಣದ ಸೂಪರ್ ಸ್ಟಾರ್ಗಳಾಗಿದ್ದಾರೆ!!
ಇವರು ಪೋಸ್ಟ್ ಮಾಡಿರುವ ಫೋಸ್ಟ್ಗಳಲ್ಲಿ ಆತ್ಯಂತ ಜನಪ್ರಿಯವಾದದ್ದು ಎಂದರೆ, ಮಳೆ ಸುರಿಯುವಾಗ ತಮ್ಮ ಮನೆಯ ಮುಂದೆ ಮಾಡಿರುವ ಕುಣಿತದ ವಿಡಿಯೋ. ಮೊಣಕಾಲಿನ ಮಟ್ಟ ನೀರಿದ್ದರೂ ಆದನ್ನು ಲೆಕ್ಕಿಸದೆ ಅವರು ಕುಣಿದಿದ್ದಾರೆ
ಜನಪ್ರಿಯರಾಬೇಕಾದರೆ ನೀವು ಕ್ರಿಕೆಟ್ ಆಟಗಾರನೋ, ರಾಜಕಾರಣಿಯೋ ಆಗಬೇಕು ಅಂತೇನಿಲ್ಲ. ಒಂದು ವಿಶಿಷ್ಟ ಕಲೆ ನಿಮ್ಮಲ್ಲಿದ್ದು ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ, ನೀವು ರಾತ್ರೋರಾತ್ರಿ ಸ್ಟಾರ್ ಆಗುವ ಅವಕಾಶವಿದೆ. ನಾವಿದನ್ನು ಸುಮ್ಮನೆ ಹೇಳುತ್ತಿಲ್ಲ. ಅನೇಕ ಯೂಟ್ಯೂಬರ್ಗಳು ಜನಪ್ರಿಯರಾಗಿದ್ದು ನಿಮಗೆ ಗೊತ್ತೇ ಇದೆ. ಜಾರ್ಖಂಡ್ ಈ ಅಣ್ಣ-ತಂಗಿಯ ಜೋಡಿಯನ್ನೇ ನೋಡಿ. ಅವೇಶಕ್ಕೊಳಗಾದವರಂತೆ ಡ್ಯಾನ್ಸ್ ಮಾಡುವ ಇವರು ತಾವು ಕುಣಿಯುವುದನ್ನು ಮೊದಲು ಟಿಕ್ಟಾಕ್ಗೆ ಹಾಕುತ್ತಿದ್ದರು ಈಗ ಇನ್ಸ್ಸ್ಟಾಗ್ರಾಮ್ನಲ್ಲಿ ಹರಿಬಿಡುತ್ತಿದ್ದಾರೆ. ಈ ವಿಡಿಯೋಗಳನ್ನು ಲಕ್ಷಾಂತರ ಜನ ನೋಡಿ ಲೈಕ್ ಮತ್ತು ಶೇರ್ ಮಾಡುತ್ತಿದ್ದಾರೆ. ಅವರ ಕುಣಿತ, ಹಾಕುವ ಸ್ಟೆಪ್ಗಳು ಜನರನ್ನು ಮಂತ್ರಮುಗ್ಧಗೊಳಿಸುತ್ತಿವೆ.
ಅಂದಹಾಗೆ, ನಿರಂತರವಾಗಿ ತಮ್ಮ ಕುಣಿತದ ವಿಡಿಯೋಗಳನ್ನು ಪೋಸ್ಟ್ ಮಾಡುವ ಈ ಅಣ್ಣತಂಗಿಯ ಹೆಸರು ಸನಾತನ್ ಕುಮಾರ್ ಮಹಾತೊ ಮತ್ತು ಸಾವಿತ್ರಿ ಕುಮಾರಿ. ಭಾರತದ ಜನಪ್ರಿಯ ಹಾಡುಗಳನ್ನು ಆರಿಸಿಕೊಂಡು ಇವರು ಕುಣಿಯುತ್ತಾರೆ.
ಜಾರ್ಖಂಡ್ನ ಧನ್ಭಾದ್ ಜಿಲ್ಲೆಯವರಾಗಿರುವ ಇವರಿಬ್ಬರು ಕುಣಿತದಲ್ಲಿ ಪ್ರದರ್ಶಿಸುವ ವೈವಿಧ್ಯತೆ, ಎನರ್ಜಿ ಮತ್ತು ಪ್ರತಿಭೆಯನ್ನು ಆನ್ಲೈನ್ನಲ್ಲಿ ನೋಡುತ್ತಿರುವ ಜನ ಆಶ್ಚರ್ಯಚಕಿತರಾಗಿದ್ದಾರೆ.
View this post on Instagram
ಇವರು ಪೋಸ್ಟ್ ಮಾಡಿರುವ ಫೋಸ್ಟ್ಗಳಲ್ಲಿ ಆತ್ಯಂತ ಜನಪ್ರಿಯವಾದದ್ದು ಎಂದರೆ, ಮಳೆ ಸುರಿಯುವಾಗ ತಮ್ಮ ಮನೆಯ ಮುಂದೆ ಮಾಡಿರುವ ಕುಣಿತದ ವಿಡಿಯೋ. ಮೊಣಕಾಲಿನ ಮಟ್ಟ ನೀರಿದ್ದರೂ ಆದನ್ನು ಲೆಕ್ಕಿಸದೆ ಅವರು ಕುಣಿದಿದ್ದಾರೆ. ಈ ವಿಡಿಯೋವನನ್ನು ಎಷ್ಟು ಬಾರಿ ವೀಕ್ಷಿಸಲಾಗಿದೆ ಗೊತ್ತಾ? 3 ಕೋಟಿ 28 ಲಕ್ಷ ಸಲ!!! 23 ಲಕ್ಷ ಜನ ಲೈಕ್ ಮಾಡಿದ್ದಾರೆ ಮತ್ತು 11,600 ಜನ ಕಾಮೆಂಟ್ ನೀಡಿದ್ದಾರೆ.
ನೆಟ್ಟಿಗರು ಇವರನ್ನು ಹೊಗಳಿದ್ದೇ ಹೊಗಳಿದ್ದು. ಗುಜರಾತಿನ ಒಬ್ಬ ಯೂಸರ್, ‘ನಿಮ್ಮ ಪರಿಚಯ ಯಾರಿಗೂ ಇಲ್ಲ ಅಂತ ನೀವು ಹೇಳುತ್ತೀರಿ, ಆದರೆ ಇಡೀ ಭಾರತಕ್ಕೆ ನಿಮ್ಮ ಬಗ್ಗೆ ಗೊತ್ತಿದೆ,’ ಎಂದು ಹೇಳಿದ್ದಾರೆ, ಮತ್ತೊಬ್ಬರು, ‘ಮುಂದಿನ ಡ್ಯಾನ್ಸ್ ಸೂಪರ್ ಸ್ಟಾರ್ ನೀವೇ!’ ಎಂದಿದ್ದಾರೆ.
ಇನ್ನೂ ಕೆಲವರು, ‘ಸೂಪರ್ ಸ್ಟಾರ್ಗಳೆಂದರೆ ನೀವು,’ ಅಂತ ಹೇಳಿದ್ದಾರೆ. ಬೇರೆ ಯಾವುದೇ ವಿಡಿಯೋಗೆ 35 ದಶಲಕ್ಷ ವ್ಯೂಗಳು ಲಭ್ಯವಾಗಿಲ್ಲ. ಯೂಟ್ಯೂಬ್ನಲ್ಲಿ ಹತ್ತು ಲಕ್ಷ ಸಬ್ಸ್ಕ್ರೈಬರ್ಗಳು ದೊರೆತ ನಂತರ ಕೇಕ್ ಕತ್ತರಿಸಿ ಅವರು ಸೆಲಬ್ರೇಟ್ ಮಾಡಿದ್ದಾರೆ, ಆದರೆ ಕೇಕ್ ಕಟ್ ಮಾಡುವ ಮೊದಲು ಇವರು ಮತ್ತೊಂದು ಸುಂದರ ನೃತ್ಯ ಪ್ರದರ್ಶಿಸಿದ್ದಾರೆ. ಹಿಂದೆ ಬಲೂನಗಳ ಮಧ್ಯೆ 1 ಮಿಲಿಯನ್ ಅಂತ ಕಾಣಿಸುತ್ತದೆ.
ಇದನ್ನೂ ನೋಡಿ: Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು
Published On - 10:28 pm, Thu, 15 July 21