Kadambini Ganguly: ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಅವರಿಗೆ ಗೂಗಲ್​ ಡೂಡಲ್ ವಿಶೇಷ​ ಗೌರವ

Google Doodles: ಪ್ರತಿಷ್ಠಿತ ಕೊಲ್ಕತ್ತಾ ಮೆಡಿಕಲ್​ ಕಾಲೇಜಿನಲ್ಲಿ ಓದಿದ ಮೊದಲ ಭಾರತೀಯ ಮಹಿಳೆ ಇವರು. 1884ರಲ್ಲಿ ಕೊಲ್ಕತ್ತಾ ಕಾಲೇಜಿಗೆ ಸೇರಿಕೊಂಡರು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಓರ್ವ ಮಹಿಳೆ ಔಷಧಕ್ಕೆ ಸಂಬಂಧಿಸಿದ ವಿದ್ಯಾಭ್ಯಾಸ ಮಾಡುವುದು ಅಥವಾ ತರಬೇತಿಯನ್ನು ಪಡೆದಿರುವುದು ಸಾಧಾರಣ ವಿಷಯವಲ್ಲ.

Kadambini Ganguly: ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಅವರಿಗೆ ಗೂಗಲ್​ ಡೂಡಲ್ ವಿಶೇಷ​ ಗೌರವ
ಕದಂಬಿನಿ ಗಂಗೂಲಿ
Follow us
TV9 Web
| Updated By: shruti hegde

Updated on:Jul 18, 2021 | 10:17 AM

ಇಂದು ಗೂಗಲ್​ ಡೂಡಲ್​ ಕಂಬಿನಿ ಗಂಗೂಲಿಯವರ 160ನೇ ಹುಟ್ಟುಹಬ್ಬವನ್ನು ಆಚರಿಸಿದೆ. ಇವರು ಬ್ರಿಟೀಷ್​ ಸಾಮ್ಯಾಜ್ಯದಲ್ಲಿದ್ದ ಇಬ್ಬರು ಮಹಿಳಾ ಪದವೀಧರರಲ್ಲಿ ಒಬ್ಬರಾಗಿದ್ದವರು. ಜತೆಗೆ ಪಾಶ್ಚಾತ್ಯ ಔಷಧದ ತರಬೇತಿಯನ್ನು ಪಡೆದುಕೊಂಡ ಭಾರತೀಯ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಮಹಿಳೆಯರಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಗತಿಯನ್ನು ತಂದುಕೊಟ್ಟಿದ್ದಕ್ಕಾಗಿ ಜನಮ ದಿನದ ಪ್ರಯುಕ್ತ ಕಂಬಿನಿ ಗಂಗೂಲಿಯವರಿಗೆ ಗೂಗಲ್​ ಡೂಡಲ್​ ಗೌರವಿಸಿದೆ.

ಪ್ರತಿಷ್ಠಿತ ಕೊಲ್ಕತ್ತಾ ಮೆಡಿಕಲ್​ ಕಾಲೇಜಿನಲ್ಲಿ ಓದಿದ ಮೊದಲ ಭಾರತೀಯ ಮಹಿಳೆ ಇವರು. 1884ರಲ್ಲಿ ಕೊಲ್ಕತ್ತಾ ಕಾಲೇಜಿಗೆ ಸೇರಿಕೊಂಡರು. ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಓರ್ವ ಮಹಿಳೆ ಔಷಧಕ್ಕೆ ಸಂಬಂಧಿಸಿದ ವಿದ್ಯಾಭ್ಯಾಸ ಮಾಡುವುದು ಅಥವಾ ತರಬೇತಿಯನ್ನು ಪಡೆದಿರುವುದು ಸಾಧಾರಣ ವಿಷಯವಲ್ಲ. ಎಲ್ಲಾ ಮಹಿಳೆಯರಿಗೆ ಸ್ಪೂರ್ತಿಯಾಗಿ ನಿಂತವರು ಕದಂಬಿನಿ ಗಂಗೂಲಿ.

ಇವರು ಹೆಸರನ್ನು ಆನಂದಿ ಗೋಪಾಲ್​ ಜೋಶಿ ಅವರೊಂದಿಗೆ ನೆನಪಿಸಿಕೊಳ್ಳುವುದು ಹೆಚ್ಚು. ಏಕೆಂದರೆ ಇಬ್ಬರೂ ಪದವೀಧರರು 1886ರಲ್ಲಿ ತಮ್ಮ ಪದವಿಯನ್ನು ಒಟ್ಟಿಗೆ ಪಡೆದರು. ಇದು ಅವರಿಗೆ ಔಷಧ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ಪಡೆಯಲು ಅವಕಾಶ ಮಾಡಿಕೊಟ್ಟಿತು.

ಕದಂಬಿನಿ ಗಂಗೂಲಿಯವರು ಔಷಧ ಅಧ್ಯಯನ ಮಾಡಬೇಕೆಂಬ ಆಸೆ ಹೊಂದಿದ್ದರು. ಆದರೆ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶವಿರಲಿಲ್ಲ. ಇವರಿಗೆ ಪತಿ ದ್ವಾರಕಾನಾಥ್​​ ಗಂಗೂಲಿ ಬೆನ್ನೆಲುಬಾಗಿ ನಿಂತರು. ಹಾಗಾಗಿ 1874ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯಕ್ಕೆ ವಿದ್ಯಾಭ್ಯಾಸಕ್ಕಾಗಿ ಸೇರಿಕೊಂಡರು.

1884 ರಲ್ಲಿ ವಿದ್ಯಾಭ್ಯಾಸ ಪಡೆಯಲು ಸೇರಿಕೊಂಡು ಮಹಿಳೆಯರಿಗೆ ಸ್ಪೂರ್ತಿ ತುಂಬಿದರು. 1892ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಯುನೈಟೆಡ್​ ಕಿಂಗ್​ಡಮ್​ಗೆ ತೆರಳಿದರು. ತಮ್ಮ ವಿದ್ಯಾಭ್ಯಾಸದ ಪ್ರಮಾಣ ಪತ್ರದೊಂದಿಗೆ ಭಾರತಕ್ಕೆ ಮರಳಿದರು.

ತಮ್ಮ ವೃತ್ತಿಯ ಜತೆಜತೆಗೆ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಮಹಿಳೆ. ಸಾಮಾಜಿಕ ಚಳುವಳಿಯಲ್ಲಿಯೂ ಇವರ ಪಾತ್ರ ಮುಖ್ಯವಾಗಿದೆ. ಹಕ್ಕುಗಳಿಗಾಗಿ ಧ್ವನಿ ಎತ್ತಿದರು. 1923ರಲ್ಲಿ ಇವರು ನಿಧನರಾದರು. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕಂಬಿನಿ ಗಂಗೂಲಿ ಅವರ ಕೊಡುಗೆ ಅತ್ಯಮೂಲ್ಯ.

ಇದನ್ನೂ ಓದಿ:

Frank Kameny: ಅಮೆರಿಕ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಫ್ರಾಂಕ್ ಕಾಮೆನಿ ಅವರಿಗೆ ವಿಶೇಷ ಗೂಗಲ್​ ಡೂಡಲ್​ ಗೌರವ

Spring Season: ಬಂದ ವಸಂತ; ಋತುಗಳ ರಾಜನನ್ನು ಹೊತ್ತು ತಂದ ಮುಳ್ಳುಹಂದಿ-ಗೂಗಲ್​ ಡೂಡಲ್​ನಿಂದ ಸ್ವಾಗತ

Published On - 10:07 am, Sun, 18 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ