AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Frank Kameny: ಅಮೆರಿಕ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಫ್ರಾಂಕ್ ಕಾಮೆನಿ ಅವರಿಗೆ ವಿಶೇಷ ಗೂಗಲ್​ ಡೂಡಲ್​ ಗೌರವ

Google Doodles: 1957ರಲ್ಲಿ ಇವರು ಅಮೆರಿಕ ಸರ್ಕಾರದ ಖಗೋಳಶಾಸ್ತ್ರಜ್ಞನಾಗಿ ಸೇವೆ ಸಲ್ಲಿಸುವತ್ತ ತನ್ನ ಕೆಲಸವನ್ನು ಪ್ರಾರಂಭಿಸಿದರು. ಆದರೆ ಅವರ ಸಲಿಂಗಕಾಮದಿಂದಾಗಿ ಅವರನ್ನು ಕಲವೇ ತಿಂಗಳುಗಳಲ್ಲಿ ಕೆಲಸದಿಂದ ತೆಗೆದುಹಾಕಲಾಯಿತು.

Frank Kameny: ಅಮೆರಿಕ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಫ್ರಾಂಕ್ ಕಾಮೆನಿ ಅವರಿಗೆ ವಿಶೇಷ ಗೂಗಲ್​ ಡೂಡಲ್​ ಗೌರವ
Google With Special Doodle
Follow us
TV9 Web
| Updated By: Digi Tech Desk

Updated on:Jun 02, 2021 | 11:19 AM

ಅಮೆರಿಕದ ಸಲಿಂಗಕಾಮ ಹಕ್ಕುಗಳ ಕಾರ್ಯಕರ್ತ ಫ್ರಾಂಕ್​ ಕಾಮೆನಿ ಅವರನ್ನು ಇಂದು ಗೂಗಲ್ ಡೂಡಲ್​ ವಿಶೇಷ​ವಾಗಿ ಗೌರವಿಸಿದೆ. ಅಮೆರಿಕದ ಎಲ್​ಜಿಬಿಟಿಕ್ಯೂ ಹಕ್ಕು ಚಳುವಳಿಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರೆಂದು ಇವರನ್ನು ಗುರುತಿಸಲಾಗಿದೆ. ತಮ್ಮ ಕೊನೆಯುಸಿರಿರುವವರೆಗೂ ಸಲಿಂಗಕಾಮ ಹಕ್ಕುಗಳ ಪ್ರವರ್ತಕರಾಗಿ ಇವರು ಗುರುತಿಸಿಕೊಂಡಿದ್ದಾರೆ.

ಫ್ರಾಂಕ್ಲಿನ್​ ಎಡ್ವರ್ಡ್​ ಕಾಮೆನಿ 1925 ರಂದು ನ್ಯೂಯಾರ್ಕ್​ನ ಕ್ವೀನ್ಸ್​ ಎಂಬಲ್ಲಿ ಜನಿಸಿದರು. ತನ್ನ 15 ನೇ ವಯಸ್ಸಿನಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಲು ಕ್ವೀನ್ಸ್​ ಕಾಲೇಜಿಗೆ ಸೇರಿಕೊಂಡರು. ಕಾಲಾನಂತರ ಇವರು ಅಮೆರಿಕದ ಖಗೋಳಶಾಸ್ತ್ರಜ್ಞರಾಗಿ ಹಾಗೂ ಸಲಿಂಗಕಾಮಿ ಹಕ್ಕುಗಳ ಕಾರ್ಯಕರ್ತರಾದರು.

ಯುರೋಪಿನಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದರು. ಸೈನ್ಯವನ್ನು ತೊರೆದ ಬಳಿಕ ಪುನಃ ಕ್ವೀನ್ಸ್​ ಕಾಲೇಜಿಗೆ ತಮ್ಮ ವಿದ್ಯಾಭ್ಯಾಸ ಮುಂದುವರೆಸಲು ಸೇರಿಕೊಂಡರು. 1948ರಲ್ಲಿ ಭೌತಶಾಸ್ತ್ರದಲ್ಲಿ ಬ್ಯಾಕಲೌರಿಯೇಟ್​ ಪದವಿಗೆ ಪಾತ್ರರಾದರು.

ತದ ನಂತರ ಫ್ರಾಂಕ್​ ಕಾಮೆನಿ ಅವರು ಹಾರ್ಡ್​ವೇರ್​ ವಿಶ್ವವಿದ್ಯಾಲಯದಿಂದ ಖಗೋಳಶಾಸ್ತ್ರದಲ್ಲಿ ಡಾಕ್ಟರೇಟ್​ ಪಡೆದರು. 1949ರಲ್ಲಿ ಖಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ 1954ರಲ್ಲಿ ಡಾಕ್ಟರೇಟ್​ ಪದವಿಗೆ ಪಾತ್ರರಾದರು.

1957ರಲ್ಲಿ ಇವರು ಅಮೆರಿಕ ಸರ್ಕಾರದ ಖಗೋಳಶಾಸ್ತ್ರಜ್ಞನಾಗಿ ಸೇವೆ ಸಲ್ಲಿಸುವತ್ತ ತನ್ನ ಕೆಲಸವನ್ನು ಪ್ರಾರಂಭಿಸಿದರು. ಆದರೆ ಅವರ ಸಲಿಂಗಕಾಮದಿಂದಾಗಿ ಅವರನ್ನು ಕಲವೇ ತಿಂಗಳುಗಳಲ್ಲಿ ಕೆಲಸದಿಂದ ತೆಗೆದುಹಾಕಲಾಯಿತು.

ಇದರಿಂದಾಗಿ 1960ರಲ್ಲಿ ಶ್ವೇತಭವನದ ಹೊರಗಡೆ ಸಲಿಂಗಕಾಮ ಹಕ್ಕುಗಳ ಪ್ರತಿಭಟನೆಯನ್ನು ಆಯೋಜಿಸಿದರು. 70ರ ದಶಕದಲ್ಲಿ ಅಮೆರಿಕ ಸೈಕಿಯಾಟ್ರಿಕ್ ಅಸೋಸಿಯೇಷನ್​ನ ಸಲಿಂಗಕಾಮವನ್ನು ಮಾನಸಿಕ ಅಸ್ವಸ್ಥತೆ ಎಂದು ಹೇಳಿರುವದನ್ನು ಖಡಾಖಂಡಿತವಾಗಿ ಸರಿಯಲ್ಲ ಎಂಬುದಾಗಿ ಪ್ರಶ್ನಿಸಿದರು. ಫ್ರಾಂಕ್​ ಕಾಮೆನಿ 2011ರಲ್ಲಿ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು.

ಇದನ್ನೂ ಓದಿ: 

Mother’s Day 2021: ಅಮ್ಮಂದಿರ ದಿನಕ್ಕೆ ಗೂಗಲ್ ಡೂಡಲ್​ ಗೌರವ; ನೀವ್ಯಾಕೆ ತಡ ಮಾಡುತ್ತೀರಿ ನಿಮ್ಮ ತಾಯಿಗೊಂದು ಸ್ಪೆಶಲ್​ ವಿಶ್ ಮಾಡಿ 

Published On - 10:18 am, Wed, 2 June 21