Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸರೋವರದಲ್ಲಿ ಬೆನ್ನಟ್ಟಿದ ದೈತ್ಯಾಕಾರದ ನೀರಾನೆ; ಸ್ಪೀಡ್​ ಬೋಟ್​ನಲ್ಲಿದ್ದರಿಂದ ಸ್ನೇಹಿತರೆಲ್ಲ ಬಚಾವ್

ಡಿಕನ್​ ಮುಚೆನಾ ತನ್ನ ಸ್ನೇಹಿತರೊಂದಿಗೆ ಆಫ್ರಿಕಾ ಕೀನ್ಯಾದ ವಿಕ್ಟೋರಿಯಾ ಸರೋವರಕ್ಕೆ ಪ್ರವಾಸಕ್ಕೆಂದು ತೆರಳಿರುತ್ತಾರೆ. ಮಾರ್ಗ ಮಧ್ಯದಲ್ಲಿ ಕೆಲವು ಹಿಪಪಾಟಮಸ್​ಗಳನ್ನು(ಹಿಪ್ಪೋ) ಹುಡುಕಿದ್ದರೂ ಕೂಡಾ ಮುಂದೆ ಆಘಾತಕಾರಿ ಘಟನೆಯೊಂದು ಸಂಭವಿಸುತ್ತದೆ ಎಂಬ ಊಹೆಯೂ ಅವರಿಗಿರಲಿಲ್ಲ.

Viral Video: ಸರೋವರದಲ್ಲಿ ಬೆನ್ನಟ್ಟಿದ ದೈತ್ಯಾಕಾರದ ನೀರಾನೆ; ಸ್ಪೀಡ್​ ಬೋಟ್​ನಲ್ಲಿದ್ದರಿಂದ ಸ್ನೇಹಿತರೆಲ್ಲ ಬಚಾವ್
ಸರೋವರದಲ್ಲಿ ಬೆನ್ನಟ್ಟಿದ ದೈತ್ಯಾಕಾರದ ನೀರಾನೆ
Follow us
TV9 Web
| Updated By: shruti hegde

Updated on:Jun 02, 2021 | 1:05 PM

ಕೆಲವು ನೀರಾನೆಗಳನ್ನು(ಹಿಪ್ಪೋ) ಗುರುತಿಸುವ ಸಲುವಾಗಿ ಆಫ್ರಿಕಾದ ವಿಕ್ಟೋರಿಯಾ ಮಹಾಸರೋವರದಲ್ಲಿ ಸ್ನೇಹಿತರೆಲ್ಲ ಸೇರಿ ಪ್ರವಾಸ ಕೈಗೊಂಡಿರುತ್ತಾರೆ. ಅದೇ ವೇಳೆ ದೈತ್ಯಾಕಾರದ ನೀರಾನೆ ಅವರನ್ನು ಬೆನ್ನಟ್ಟಿ ಬಂದ ಆಘಾತಕಾರಿ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೀರಾನೆ ಬೆನ್ನಟ್ಟಿ ಬಂದ ದೃಶ್ಯ ನಿಜಕ್ಕೂ ಭಯ ಹುಟ್ಟಿಸುವಂತಿದೆ. ವಿಡಿಯೋ ಪೋಸ್ಟ್​ ಆದ ಬಳಿಕ 1ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ಡಿಕನ್​ ಮುಚೆನಾ ತನ್ನ ಸ್ನೇಹಿತರೊಂದಿಗೆ ಆಫ್ರಿಕಾ ಕೀನ್ಯಾದ ವಿಕ್ಟೋರಿಯಾ ಸರೋವರಕ್ಕೆ ಪ್ರವಾಸಕ್ಕೆಂದು ತೆರಳಿರುತ್ತಾರೆ. ವಿವಿಧ ನೀರಾನೆಗಳನ್ನು ಗುರುತಿಸುವುದಾಗಿ ಸ್ನೇಹಿತರೆಲ್ಲರೂ ಸ್ಪೀಡ್​ ಬೋಟ್​ನಲ್ಲಿ ಸಾಗುತ್ತಿರುತ್ತಾರೆ. ಮಾರ್ಗ ಮಧ್ಯದಲ್ಲಿ ಕೆಲವು ಹಿಪಪಾಟಮಸ್​ಗಳನ್ನು(ಹಿಪ್ಪೋ) ಹುಡುಕಿದ್ದರೂ ಕೂಡಾ ಮುಂದೆ ಭಯಂಕರ ಘಟನೆಯೊಂದು ಸಂಭವಿಸುತ್ತದೆ ಎಂಬ ಊಹೆಯೂ ಅವರಿಗಿರಲಿಲ್ಲ.

‘ಈ ದೇಶವು ಹಿಪ್ಪೋಗಳ ಬಂದರು ಎಂದು ನಮಗೆ ತಿಳಿದಿತ್ತು. ಪ್ರವಾಸ ಕೈಗೊಂಡ ಸಮಯದಲ್ಲಿ ಯಾವ ದೈತ್ಯಾಕಾರದ ಹಿಪ್ಪೋಗಳೂ ಎದುರು ಬಂದಿರಲಿಲ್ಲ. ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ನಾವು ಬಯಸಿದ್ದೆವು. ಆದರೆ ನಮ್ಮ ಜೀವ ರಕ್ಷಣೆಗಾಗಿ ನಾವು ಹತ್ತಿರಕ್ಕೆ ಹೋಗುವ ಯಾವುದೇ ಸಾಹಸ ಮಾಡಿಲ್ಲ. ನಾವು ವೇಗದ ದೋಣಿಯಲ್ಲಿದ್ದೆವು. ಅದು ನಮ್ಮ ಅದೃಷ್ಟ. ಇದಾದ ಬಳಿಕ ನಾವು ಸುರಕ್ಷಿತವಾಗಿ ಕಡಲ ತೀರಕ್ಕೆ ಬಂದು ತಲುಪಿದೆವು’ ಎಂದು ಡಿಕೆನ್ ಮುಚೆನಾ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Viral Video: ಗಿಳಿಯ ಹಾಡಿಗೆ ಸೋಲದವರಿದ್ದಾರೆಯೇ? ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು; ವಿಡಿಯೋ ವೈರಲ್

ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್

Published On - 12:49 pm, Wed, 2 June 21

ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಚಲಿಸುತ್ತಿರುವ ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ಧ
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಸವದತ್ತಿ ಯಲ್ಲಮ್ಮಗೆ ಜಲ ದಿಗ್ಭಂಧನ: ದೇಗುಲದಲ್ಲಿ ಪ್ರವಾಹದಂತೆ ಹರಿದ ನೀರು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
ಬಡವರಿಗೆ ನಿವೇಶನಗಳನ್ನು ಮಾಡಿ ಹಂಚಲು ಬೈಲಹೊಂಗಲದಲ್ಲಿ ಖರೀದಿಯಾಗಿದ್ದ ಜಮೀನು
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
‘ಎಷ್ಟೇ ಎತ್ತರಕ್ಕೆ ಬೆಳೆದರೂ..’; ಯಶ್ ಸಹಾಯ ನೆನೆದ ಅಜಯ್ ರಾವ್
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು