AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್

ಮನೆಯಲ್ಲಿಯೇ ಗರಿಗರಿಯಾದ ಪೊಟಾಟೊ(ಆಲೂಗಡ್ಡೆ) ಲೇಸ್​ ಅಥವಾ ಚಿಪ್ಸ್ ಮಾಡುವ ವಿಧಾನ ಹೇಗೆ ಎಂಬುದನ್ನು ಕೇರಳ ಮೂಲದ ಬಾಲಕ ಶಂಕರ್​ ವಿವರಿಸುತ್ತಾನೆ. ಇತ್ತೀಚೆಗೆ ಶಂಕರ್​ ವ್ಲಾಗ್ಸ್ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹರಿ ಬಿಟ್ಟಿದ್ದಾನೆ. ಚಿಪ್ಸ್​ ತಯಾರಿಸುವ ವಿಡಿಯೋ ಸುಮಾರು 5 ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದೆ.

ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್
ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಪುಟ್ಟ ಬಾಲಕ
shruti hegde
|

Updated on:May 31, 2021 | 11:19 AM

Share

ಕೊರೊನಾ ವೈರಸ್​ ಹರಡುತ್ತಿದ್ದಂತೆಯೇ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಯಿತು, ಲಾಕ್​ಡೌನ್​ ಕೂಡಾ ಜಾರಿಯಲ್ಲಿದೆ. ಈ ಮಧ್ಯೆ ಮನೆಯಲ್ಲಿ ಕೂತು ಸಮಯವೇ ಸಾಗುತ್ತಿಲ್ಲ ಎನ್ನುತ್ತಿರುವವರು ಒಂದು ಕಡೆ, ಅಮ್ಮಾ ಹಸಿವು… ಎಂಬ ಮಕ್ಕಳ ಕೂಗು ಇನ್ನೊಂದು ಕಡೆ. ತಿಂಡಿ ತಿನಿಸುಗಳನ್ನು ಅಂಗಡಿಗಳಿಂದ ತರೋಣ ಎಂದರೆ ಹೊರಗಡೆ ಕಾಲಿಡುವಂತಿಲ್ಲ. ಅಗತ್ಯವಾದ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುವುದಿಂದ ಮಕ್ಕಳಿಗಿಷ್ಟವಾದ ಗರಿಗರಿ ಚಿಪ್ಸ್​ಗಳು ಸಿಗುತ್ತಿಲ್ಲ. ಹೀಗಿರುವಾಗ ಮನೆಯಲ್ಲೇ ಚಿಪ್ಸ್​ ಮಾಡುವುದು ಹೇಗೆ ಎಂಬುದನ್ನು ಆ ಪುಟ್ಟ ಬಾಲಕ ಹೇಳುತ್ತಾನೆ. ಚಟ್​ಪಟ್​ ಅಂತ ಮಾಡನಾಡುತ್ತಲೇ ಚಿಪ್ಸ್​ ತಯಾರಿಸಿ ಸವಿದೇ ಬಿಡುತ್ತಾನೆ. ಇದೀಗ ಕೇರಳದ ಆ ಪುಟ್ಟ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡುತ್ತಿದೆ. ಬಾಲಕನ ಮಾತಿಗೆ ನೆಟ್ಟಿಗರು ಫುಲ್​ ಫಿದಾ ಆಗಿದ್ದಂತೂ ಸತ್ಯ.

ಮನೆಯಲ್ಲಿಯೇ ಗರಿಗರಿಯಾದ ಪೊಟಾಟೊ(ಆಲೂಗಡ್ಡೆ) ಲೇಸ್​ ಅಥವಾ ಚಿಪ್ಸ್ ಮಾಡುವ ವಿಧಾನ ಹೇಗೆ ಎಂಬುದನ್ನು ಕೇರಳ ಮೂಲದ ಬಾಲಕ ಶಂಕರ್​ ವಿವರಿಸುತ್ತಾನೆ. ಇತ್ತೀಚೆಗೆ ಶಂಕರ್​ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹರಿ ಬಿಟ್ಟಿದ್ದಾನೆ. ಚಿಪ್ಸ್​ ತಯಾರಿಸುವ ವಿಡಿಯೋ ಸುಮಾರು 5 ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದೆ.

ಲಾಕ್​ಡೌನ್​ ಸಮಯದಲ್ಲಿ ಶಾಲೆ ಮುಚ್ಚಲ್ಪಟ್ಟಾಗ ಶಂಕರ್​ ಹೆಚ್ಚು ಉತ್ಸುಕನಾಗಿದ್ದನು. ಆದರೆ ನಂತರ ತನ್ನ ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಆತನಿಗೆ ಕಾಡತೊಡಗಿತು. ಹಾಗಾಗಿ ಯೂಟ್ಯೂಬ್​ ಚಾನೆಲ್​ ತೆರಯಬೇಕು ಎಂಬ ಆಸೆ ಹೊತ್ತು ತನ್ನದೇ ಹೆಸರಿನ ಯುಟ್ಯೂಬ್​ ಚಾನೆಲ್​ ಅನ್ನು ತೆರೆದಿದ್ದಾನೆ. ಆತನ ಚಟ್​ಪಟ್​ ಮಾತು ಜತೆಗೆ ಗರಿಗರಿಯಾದ ಚಿಪ್ಸ್​ ತಯಾರಿಸುವ ವಿಧಾನ ಇದೀಗ ನೆಟ್ಟಿಗರ ಮನಸೆಳೆದಿದೆ.

ಬಾಲಕ ಶಂಕರ್​ ಗರಿಗರಿಯಾದ ಪೊಟಾಟೊ ಚಿಪ್ಸ್ಅನ್ನು ಸರಳ ವಿಧಾನದಲ್ಲಿ​ ತಯಾರಿಸುವುದು ಹೇಗೆ ಎಂಬುದನ್ನು ತನ್ನ ಯುಟ್ಯೂಬ್​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋ ಇಲ್ಲಿದೆ ನೋಡಿ..

ಬೇಕಾಗುವ ಸಾಮಗ್ರಿಗಳು ಆಲೂಗಡ್ಡೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್​ ಟೊಮ್ಯಾಟೊ ಗರಂ ಮಸಾಲಾ ಸಕ್ಕರೆ ಮೆಣಸಿನ ಪುಡಿ ಉಪ್ಪು ಎಣ್ಣೆ

ತಯಾರಿಸುವ ವಿಧಾನ ಟೊಮ್ಯಾಟೋನಿಂದ ಸಾಸ್​ ತಯಾರಿಸಿಕೊಳ್ಳಿ. ಮನೆಯಲ್ಲಿರುವ ಆಲೂಗಡ್ಡೆಯ ಸಿಪ್ಪೆ ತೆಗೆದು ತೆಳುವಾಗಿ ಕತ್ತರಿಸಿಕೊಳ್ಳಿ. ಪ್ಯಾನ್​ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಕಾದ ಬಳಿಕ ತೆಳುವಾಗು ಕತ್ತರಿಸಿದ ಆಲೂಗಡ್ಡೆಯನ್ನು ಫ್ರೈ ಮಾಡಿ. ಬಳಿಕ ಗರಿಗರಿಯಾದ ಕತ್ತರಿಸಿದ ಆಲೂ ಸಿದ್ಧವಾಗುತ್ತದೆ. ಅದಕ್ಕೆ ತಯಾರಿಸಿಕೊಂಡ ಗರಂ ಮಸಾಲಾ ಹಾಕಿ ಮಿಕ್ಸ್​ ಮಾಡಿದರೆ ಪೊಟಾಟೊ ಚಿಪ್ಸ್​ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: 

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

Published On - 11:03 am, Mon, 31 May 21

Follow Us
shruti hegde
shruti hegde
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ವನ್ಯಜೀವಿ ಛಾಯಾಗ್ರಾಹಕಿಯಾದ ಸೋನಲ್ ಮೊಂತೆರೋ
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಸಂಜೆಯಾದರೆ ರಸ್ತೆಗಿಳಿಯುವ ಈ ಒಂಟಿ ಸಲಗಕ್ಕೆ ವಾಹನಗಳೇ ಟಾರ್ಗೆಟ್!
ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ
ಅಜ್ಜ-ಅಜ್ಜಿ ಜತೆ ಬೈಕ್​​ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ
ಮಾಂಗಲ್ಯ ಸರದಲ್ಲಿ ಮುತ್ತು-ಹವಳ ಧರಿಸುವುದರ ಅಸಲಿ ರಹಸ್ಯವೇನು?
ಮಾಂಗಲ್ಯ ಸರದಲ್ಲಿ ಮುತ್ತು-ಹವಳ ಧರಿಸುವುದರ ಅಸಲಿ ರಹಸ್ಯವೇನು?
ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಗೋವಾ ಮುಖ್ಯಮಂತ್ರಿ ಭೇಟಿ
ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಗೋವಾ ಮುಖ್ಯಮಂತ್ರಿ ಭೇಟಿ