Viral Video: ಇದು ಲೀಮರ್ನ ಜಿಗಿತವೋ ಕುಣಿತವೋ? ವಿಡಿಯೋ ನೋಡಿ ನೀವೇ ಹೇಳಿ
ಲೀಮರ್ ಜಿಗಿತವು ಕುಣಿತದಂತೆಯೇ ಅನಿಸುವಂತಿದ್ದು, ಮುದ್ದು ಲೀಮರ್ ನೋಡಲು ಎರಡು ಕಣ್ಣುಗಳೆರಡು ಸಾಲದು ಎನ್ನುತ್ತಿದ್ದಾರೆ ನೆಟ್ಟಿಗರು. ಒಟ್ಟಿನಲ್ಲಿ ಇಂತಹ ವಿಧ ವಿಧದ ಚೆಂದದ ಮತ್ತು ಕುತೂಹಲಕಾರಿ ವಿಡಿಯೋಗಳು ನೆಟ್ಟಿಗರ ವಿಹಾರಕ್ಕೆ ಉತ್ತಮ ಆಹಾರವಾಗುವುದಂತೂ ಖರೆ.
ಲೀಮರ್ ಎಂಬ ಪ್ರಾಣಿಯ ಬಗ್ಗೆ ನೀವು ಕೇಳಿರಬಹುದು, ಆಗಾಗ ಕೆಲವು ವಿಡಿಯೋಗಳನ್ನು ನೋಡಿರಲೂಬಹುದು. ಆದರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲೀಮರ್ ಪ್ರಾಣಿಯ ಜಿಗಿತದ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅದೆಂತಾ ವಿಡಿಯೋ ಅಂತೀರಾ? ಈ ವಿಡಿಯೋ ನಿಮ್ಮ ಮನಸಿಗೆ ಕಚಗುಳಿಯನ್ನೋ ಪುಳಕವನ್ನೋ ನೀಡುವುದು ಖಚಿತ.
ಚೆಸ್ಟರ್ ಝೂವಿನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಳಾಗಿರುವ ಈ ವಿಡಿಯೋ ಹಂಚಿಕೊಂಡು 4 ದಿನಗಳಾಗಿದ್ದು 60 ಸಾವಿರಕ್ಕಿಂತ ಹೆಚ್ಚಿನ ವ್ಯೂಸ್ ಕಂಡಿದೆ. ಲೀಮರ್ ಜಿಗಿತವು ಕುಣಿತದಂತೆಯೇ ಅನಿಸುವಂತಿದ್ದು, ಮುದ್ದು ಲೀಮರ್ ನೋಡಲು ಎರಡು ಕಣ್ಣುಗಳೆರಡು ಸಾಲದು ಎನ್ನುತ್ತಿದ್ದಾರೆ ನೆಟ್ಟಿಗರು. ಒಟ್ಟಿನಲ್ಲಿ ಇಂತಹ ವಿಧ ವಿಧದ ಚೆಂದದ ಮತ್ತು ಕುತೂಹಲಕಾರಿ ವಿಡಿಯೋಗಳು ನೆಟ್ಟಿಗರ ವಿಹಾರಕ್ಕೆ ಉತ್ತಮ ಆಹಾರವಾಗುವುದಂತೂ ಖರೆ.
View this post on Instagram
View this post on Instagram
ಇಲ್ಲಿದೆ ಲೀಮರ್ನ ಪುಟ್ಟ ಪರಿಚಯ ಲೀಮರ್ ಪ್ರಾಣಿ ಸಂಪೂರ್ಣ ಸಸ್ಯಾಹಾರಿಯಾಗಿದ್ದು ತನ್ನ ಆಹಾರದ ಶೇಕಡಾ 75ರಷ್ಟು ಭಾಗವನ್ನು ಹಣ್ಣುಗಳನ್ನೇ ಸೇವಿಸುತ್ತದೆ. ಲೀಮರ್ ಜಾತಿಗೇ ಸೇರಿದ ನಮಗೆ ಪರಿಚಿತ ಪ್ರಾಣಿಯೇ ಕಾಡುಪಾಪ. ಮಡಗಾಸ್ಕರ್ ಭಾಗದಲ್ಲಿ ಈ ಪ್ರಾಣಿಯನ್ನು ನೋಡಬಹುದಾಗಿದ್ದು, ಸುರುಳಿ ಬಾಲದ ಲೀಮರ್, ಕೆಂಪು ತುಪ್ಪಳದ ಲೀಮರ್ ಎಂಬ ಕೆಲವು ಪ್ರಬೇಧಗಳಿವೆ.
ಇದನ್ನೂ ಓದಿ: Fact Check: ಸೋನಿಯಾ ಗಾಂಧಿ ಅವರ ಶೆಲ್ಫ್ನಲ್ಲಿ ಮತಾಂತರದ ಪುಸ್ತಕ? ವೈರಲ್ ಆಗಿದ್ದು ಎಡಿಟ್ ಮಾಡಿದ ಚಿತ್ರ
(Netizens praise lemurs dance in instagram viral video)