AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಂಬೆಗಾಲಿಡುತ್ತಿರುವ ಈ ಪುಟ್ಟ ಮಗುವಿನ ನಗು ನೋಡಿ; ನಿಮ್ಮೆಲ್ಲಾ ಚಿಂತೆಯನ್ನು ದೂರ ಮಾಡುವ ವಿಡಿಯೋ ಇಲ್ಲಿದೆ

ವಿಡಿಯೋದಲ್ಲಿ ಗಮನಿಸುವಂತೆ ಜಿನೆ​ ಮೇರಾ ದಿಲ್​ ಲುಟೆಯ ಹಾಡಿಗೆ ಮಗು ನೃತ್ಯ ಮಾಡುತ್ತಿದೆ. ಖುಷಿಯಿಂದ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದೆ. ಹಾಡು ಕೇಳುತ್ತಿದ್ದಂತೆಯೇ ಮಗುವಿನ ಮುಖದ ತುಂಬ ನಗು. ಪುಟ್ಟ ತುಟಿಗಳಂಚಿನಿಂದ ಮೂಡಿದ ಆ ಪುಟ್ಟ ಮಗುವಿನ ನಗು ನೆಟ್ಟಿಗರ ಹ್ರದಯ ಗೆದ್ದಿದೆ.

Viral Video: ಅಂಬೆಗಾಲಿಡುತ್ತಿರುವ ಈ ಪುಟ್ಟ ಮಗುವಿನ ನಗು ನೋಡಿ; ನಿಮ್ಮೆಲ್ಲಾ ಚಿಂತೆಯನ್ನು ದೂರ ಮಾಡುವ ವಿಡಿಯೋ ಇಲ್ಲಿದೆ
ಅಂಬೆಗಾಲಿಡುತ್ತಿರುವ ಈ ಪುಟ್ಟ ಮಗುವಿನ ನಗು ನೋಡಿ
Follow us
TV9 Web
| Updated By: Digi Tech Desk

Updated on:Jun 01, 2021 | 5:44 PM

ಪುಟ್ಟ ಮಕ್ಕಳು ನಗುವುದನ್ನು ಕೇಳುತ್ತಿದ್ದರೆ ಮನಸ್ಸಿಗೆ ಖುಷಿಯಾಗುತ್ತದೆ. ಮಗುವನ್ನು ಹೆಚ್ಚು ಹೆಚ್ಚು ನಗಿಸಲು ನಾವು ಪ್ರಯತ್ನಿಸುತ್ತೇವೆ. ಪುಟ್ಟ-ಪುಟ್ಟ ಕಾಲುಗಳು, ಮುದ್ದಾದ ಕಣ್ಣುಗಳು ಏನೂ ಅರಿಯದ ಮೃದು ಮನಸ್ಸು.. ಯಾವುದೇ ಕಲ್ಮಷವಿಲ್ಲದ ಆ ಮನಸ್ಸನ್ನು ಖುಷಿಗೊಳಿಸುವುದರಲ್ಲಿ ನಮಗೆ ಸಂತೋಷ ಸಿಗುತ್ತದೆ. ಅಂತಹುದೇ ಒಂದು ಮುದ್ದಾದ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಗುವಿನ ಖುಷಿ ನೋಡುತ್ತಿದ್ದ ನೆಟ್ಟಿಗರು ಮಗುವಿನ ನಗುವಿಗೆ ಸೋತಿದ್ದಾರೆ.

ಕೊವಿಡ್​ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದು ಎಲ್ಲರ ನಿದ್ದೆಗೆಡಿಸಿದೆ. ಸುತ್ತಮುತ್ತಲು ಕೊವಿಡ್​ ಪ್ರಕರಣಗಳನ್ನು ಕೇಳುತ್ತಿರುವ ಜನರು ಚಿಂತೆಗೀಡಾಗಿದ್ದಾರೆ. ಇದರಿಂದ ಹೊರಬರಲು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಆದಷ್ಟು ಮನಸ್ಸಿಗೆ ಖುಷಿ ನೀಡುವ ಸಂದೇಶವನ್ನು ಹುಡುಕಿ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮನಸ್ಸಿಗೆ ಖುಷಿ ನೀಡುವ ಹಾಗೂ ಒಂದು ಕ್ಷಣ ನಿಮ್ಮ ಚಿಂತೆಯನ್ನೆಲ್ಲಾ ದೂರ ಮಾಡಿ ನಿಮ್ಮ ಮುಖದಲ್ಲಿ ನಗುತರಿಸುವ ವಿಡಿಯೋ ಇಲ್ಲಿದೆ. ನೀವೂ ನೋಡಿ.

ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಹೆಚ್ಚು ಸಮಯ ಮಗುವಿನೊಂದಿಗೇ ಕಳೆದು ಹೋಗುತ್ತದೆ. ಮಗುವಿನ ಸಂತೋಷದ ಜತೆಗೆ ತುಂಟಾಟಗಳನ್ನು ನೋಡುತ್ತಾ ಖುಷಿ ಪಡುತ್ತಿದ್ದರೆ ನಮ್ಮೆಲ್ಲಾ ಚಿಂತೆಗಳು ಮಾಯವಾಗುತ್ತದೆ. ಅಂತಹ ಶಕ್ತಿ ಪುಟ್ಟ ಮಕ್ಕಳಲ್ಲಿರುವುದು. ಅದೆಷ್ಟೇ ಮನೆ ಕೆಲಸವಿರಲಿ, ದೇಹಕ್ಕೆ ಆಯಾಸವಾಗಿರಲಿ ಚಿಕ್ಕ ಮಕ್ಕಳು ಕಂಡಾಕ್ಷಣ ಮಾತನಾಡಿಸದೇ ಹಾಗೇ ಹೋಗಲಾರೆವು. ಮಗುವಿನ ಆ ಪುಟ್ಟ ನಗು ಸಾಕು ನಮ್ಮೆಲ್ಲಾ ನೋವುಗಳನ್ನು ಮರೆಸಲು. ಇಲ್ಲಿರುವ ಮುದ್ದಾದ ಮಗುವಿನ ನಗು ನೋಡುತ್ತಾ ನೀವು ನಿಮ್ಮ ಚಿಂತೆಗಳನ್ನೆಲ್ಲಾ ಮರೆತುಬಿಡಿ.

ವಿಡಿಯೋದಲ್ಲಿ ಗಮನಿಸುವಂತೆ ಜಿನೆ​ ಮೇರಾ ದಿಲ್​ ಲುಟೆಯ ಹಾಡಿಗೆ ಮಗು ನೃತ್ಯ ಮಾಡುತ್ತಿದೆ. ಖುಷಿಯಿಂದ ಹೆಜ್ಜೆ ಹಾಕಲು ಪ್ರಯತ್ನಿಸುತ್ತಿದೆ. ಹಾಡು ಕೇಳುತ್ತಿದ್ದಂತೆಯೇ ಮಗುವಿನ ಮುಖದ ತುಂಬ ನಗು. ಪುಟ್ಟ ತುಟಿಗಳಂಚಿನಿಂದ ಮೂಡಿದ ಆ ಪುಟ್ಟ ಮಗುವಿನ ನಗು ನೆಟ್ಟಿಗರ ಹ್ರದಯ ಗೆದ್ದಿದೆ.

ಇದನ್ನೂ ಓದಿ: 

ಕಳೆದುಕೊಂಡ ಸ್ನೇಹಿತೆ ಮತ್ತೆ ಸಿಕ್ಕಿದ್ದಾಳೆ, ಕತ್ತೆಯು ಮಗುವನ್ನು ಅಪ್ಪಿಕೊಂಡಿರುವುದು ಹೇಗೆ ನೋಡಿ; ವೈರಲ್​ ಆಯ್ತು ವಿಡಿಯೋ

ಕೈಯಲ್ಲಿ ಮಗು ಹಿಡಿದು ಕೆಲಸಕ್ಕೆ ಹಾಜರಾದ ಮಹಿಳಾ ಟ್ರಾಫಿಕ್ ಪೊಲೀಸ್, ವಿಡಿಯೋ ವೈರಲ್

Published On - 4:37 pm, Tue, 1 June 21

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ