Viral Video: ಅಸಹಾಯಕ ವೃದ್ಧೆಗೆ ತಿಂಡಿ ತಿನ್ನಿಸಿದ ಪೊಲೀಸ್; ಮಾನವೀಯ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ
ನಮ್ಮ ಜೀವನದ ನೆಮ್ಮದಿಯ ಜತೆಗೆ ಇತರರ ಜೀವನವೂ ಖುಷಿಯಿಂದ ಇರುವ ಯೋಚನೆ ಪ್ರತಿಯೊಬ್ಬರಲ್ಲಿ ಬಂದರೆ ಇಡೀ ಜಗತ್ತೇ ಸುಂದವಾಗಿ ಕಾಣಿಸುತ್ತದೆ. ಅಂದಹುದೇ ಒಂದು ಹೃದಯಗೆಲ್ಲುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮನೆಯಿಲ್ಲದೇ ಮರದ ಕೆಳಗೆ ಕುಳಿತಿದ್ದ ವೃದ್ಧೆಗೆ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ತಿಂಡಿ ತಿನ್ನಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. ಪೊಲೀಸ್ ಅಧಿಕಾರಿಯ ಈ ಮಾನವೀಯ ಕಾರ್ಯಕ್ಕೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ‘ಪೊಲೀಸರ ಇನ್ನೊಂದು ಮುಖ ಹೀಗೂ ಇರುತ್ತದೆ’ ಎಂಬ ಶೀರ್ಷಿಕೆಯೊಂದಿಗೆ, ರಿಂಕು ಹುಡಾ ಎಂಬ ಟ್ವಿಟರ್ ಖಾತೆಯಿಂದ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಎಲ್ಲರೂ ಪ್ರೀತಿ ವಿಶ್ವಾಸದಿಂದ ಇದ್ದರೆ ಎಷ್ಟು ಚಂದವಲ್ಲವೇ? ಒಬ್ಬರಿಗೆ ಇನ್ನೊಬ್ಬರ ಮೇಲೆ ಗೌರವವಿರಬೇಕು. ಪ್ರೀತಿ, ವಿಶ್ವಾಸದ ಜತೆಗೆ ನಂಬಿಕೆ ಇರಬೇಕು. ಕಷ್ಟಕಾಲದಲ್ಲಿ ಸಹಾಯ ಮಾಡುಗ ಗುಣವಿರಬೇಕು. ನಮ್ಮ ಜೀವನದ ನೆಮ್ಮದಿಯ ಜತೆಗೆ ಇತರರ ಜೀವನವೂ ಖುಷಿಯಿಂದ ಇರುವ ಯೋಚನೆ ಪ್ರತಿಯೊಬ್ಬರಲ್ಲಿ ಬಂದರೆ ಇಡೀ ಜಗತ್ತೇ ಸುಂದವಾಗಿ ಕಾಣಿಸುತ್ತದೆ. ಅಂದಹುದೇ ಒಂದು ಹೃದಯಗೆಲ್ಲುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮನೆಯಿಲ್ಲದೇ ಬೀದಿಯ ಪಕ್ಕದಲ್ಲಿದ್ದ ಮರದ ಕೆಳಗೆ ಕುಳಿತಿರುವ ವೃದ್ಧೆಯನ್ನು ನೋಡಿದ ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೋರ್ವರು ವೃದ್ಧೆಗೆ ಆಹಾರ ನೀಡಿದ್ದಾರೆ. ವೃದ್ಧೆಯ ಪಕ್ಕದಲ್ಲೇ ಕುಳಿತು ತಿಂಡಿ ತಿನಿಸಿದ್ದಾರೆ. ಈ ದೃಶ್ಯ ಮನಸೆಯುವಂತಿದೆ. ಒಂದು ಕ್ಷಣ ಕಣ್ಣಲ್ಲಿ ಸಂತೋಷದ ನೀರು ತರಿಸುತ್ತದೆ. ಇಂತಹ ಹೃದಯಸ್ಪರ್ಶಿ ದೃಶ್ಯವನ್ನು ನೆಟ್ಟಿಗರು ಮನಸ್ಪೂರ್ತಿಯಾಗಿ ಮೆಚ್ಚಿಕೊಂಡಿದ್ದಾರೆ.
पुलिस का एक चेहरा ऐसा भी होता है ??#Salute ?? pic.twitter.com/Q38jJL7lVI
— Rinku Hooda (@RinkuHooda001) May 31, 2021
ಸಾಮನ್ಯವಾಗಿ ಪೊಲೀಸರು ಹತ್ತಿರ ಬಂದರೆ ಸಾಕು ಹೆದರುತ್ತೇವೆ. ಏನೋ ತಪ್ಪು ಮಾಡಿದ್ದೀವಾ ಎಂಬ ಭಯ ತನ್ನಂತಾನೆಯೇ ಹುಟ್ಟಿಕೊಳ್ಳುತ್ತದೆ. ಕರ್ತವ್ಯಕ್ಕೆ ಬದ್ಧರಾಗಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವ ಗುಣ ಪೊಲೀಸರದ್ದು. ಹಾಗೆಯೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಗುಣಕ್ಕೆ ಸಾಕ್ಷಿಯಾಗಿ ಈ ದೃಶ್ಯವನ್ನು ನೋಡಬಹುದು.
ಇದನ್ನೂ ಓದಿ:
ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್