ಗೆಳತಿಯ ನಿಶ್ಚಿತಾರ್ಥದ ಉಂಗುರಕ್ಕಾಗಿ ದೇಶಾದ್ಯಂತ ತಿರುಗಿ, ಸ್ವತಃ ಗಣಿಗಾರಿಕೆ ನಡೆಸಿ ವಜ್ರ ಹುಡುಕಿ ತಂದ ಲಿಡೆನ್! ಯಾರೀತ?
ಅವನ ಕನಸು ನನಸಾಗುತ್ತದೆ ಎಂಬ ನಂಬಿಕೆ ಆತನಿಕೆ ಇತ್ತು. ಅವನು ತನ್ನ ಗೆಳತಿ ದೇಸಿರಾಳೊಂದಿಗೆ ಡೇಟಿಂಗ್ ಮಾಡುತ್ತಿದ್ದನು. ಹಾಗೂ ಉಂಗರವೂ ಸಹ ಅವಳಿಗೆ ಎಂಬುದು ತಿಳಿದಿತ್ತು ಎಂದು ಲಿಡೆನ್ ಸಹೋದ್ಯೋಗಿ ಹೇಳಿದ್ದಾರೆ.
ವಾಷಿಂಗ್ಟನ್ನ ವ್ಯಕ್ತಿಯೋರ್ವ(ಲಿಡೆನ್) ಸ್ವತಃ ಗಣಿಗಾರಿಕೆ ನಡೆಸಿ ವಜ್ರದ ಉಂಗುರವನ್ನು ಹುಡುಕುವ ಆಸೆ ಹೊಂದಿದ್ದನು. ಆತನ ಆಸೆಯಂತೇ ಸ್ವತಃ ಗಣಿಕಾರಿಕೆ ಮಾಡಿ ಸುಂದವಾದ ವಜ್ರ ಸಂಪಾದಿಸಿ ತನ್ನ ಪ್ರೇಯಸಿಗಾಗಿ ನೀಡಬೇಕು ಎಂಬ ಕನಸು ಹೊತ್ತಿದ್ದನು. ತನ್ನ ಗುರಿ ಸಾಧಿಸಲು ಕಷ್ಟಪಟ್ಟು ಮುನ್ನುಗ್ಗಿ ಇದೀಗ ತನ್ನ ಪ್ರೇಯಸಿಗೆ ಆತನೇ ಗಣಿಗಾರಿಕೆ ಮಾಡಿ ಹುಡುಕಿದ ಉಂಗುರವೊಂದನ್ನು ನೀಡಿದ್ದಾನೆ. ವಜ್ರ ಸಿಕ್ಕಿದ ಕ್ಷಣದ ಖುಷಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಸಿಕ್ಕಿದ ವಜ್ರದ ತುಂಡನ್ನು ಜಾಗೃತೆಯಿಂದ ತಂದೆವು ಎಂದು ಲಿಡೆನ್ ತಮ್ಮ ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಆತ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಉಂಗುರ ಮಾಡಿಸಲು ಸ್ವತಃ ತಾನೇ ರತ್ನಗಳ ಗಣಿಗಾರಿಕೆ ಮಾಡುಬೇಕು ಎಂಬ ಕನಸು ಆತನದು. ಆದರೆ ಈ ಪ್ರಕ್ರಿಯೆ ಹೇಗೆ ಎಂಬುದು ಆತನಿಗೆ ತಿಳಿದಿರಲಿಲ್ಲ. ದಿನ ಸಾಗುತ್ತಿದ್ದಂತೆಯೇ ಈ ಕುರಿತಾಗಿ ತಿಳಿದುಕೊಳ್ಳುವ ಕುತೂಹಲ ಹುಟ್ಟಿಕೊಂಡಿತು. ಅಮೇರಿಕದಲ್ಲಿ ಕಚ್ಚಾ ರತ್ನಗಳನ್ನು ಕಂಡು ಹಿಡಿಯುವುದು ಎಷ್ಟು ಕಷ್ಟವಿದೆ ಗೊತ್ತಾ ಎನ್ನುತ್ತಾ ಲಿಡೆನ್ ವಿವರಿಸಿದ್ದಾರೆ. ಈ ಕುರಿತಂತೆ ಎನ್ಎನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಅವನ ಕನಸು ನನಸಾಗುತ್ತದೆ ಎಂಬ ನಂಬಿಕೆ ಆತನಿಕೆ ಇತ್ತು. ಅವನು ತನ್ನ ಗೆಳತಿ ದೇಸಿರಾಳೊಂದಿಗೆ ಡೇಟಿಂಗ್ ಮಾಡುತ್ತಿದ್ದನು. ಹಾಗೂ ಉಂಗರವೂ ಸಹ ಅವಳಿಗೆ ಎಂಬುದು ತಿಳಿದಿತ್ತು’ ಎಂದು ಲಿಡೆನ್ ಸಹೋದ್ಯೋಗಿ ಹೇಳಿದ್ದಾರೆ.
ಕಚ್ಚಾ ರತ್ನಗಳ ಸಂಶೋಧನೆಯ ಕುರಿತಾಗಿ ನಾನು ಪ್ರವಾಸವನ್ನು ಕೈಗೊಂಡಾಗ ಕನಸನ್ನು ನನಸಾಗಿಸಿಕೊಳ್ಳಬಹುದು ಎಂಬ ನಂಬಿಕೆ ಹುಟ್ಟಿಕೊಂಡಿತು. ನಿಜವಾಗಿಯೂ ಇದನ್ನು ಕಂಡುಹಿಡಿಯಲು ಸಾಧ್ಯವಿದೆ ಎಂಬುದು ಮನದಟ್ಟಾಯಿತು. ಆ ಬಳಿಕ ನಾನು ವಜ್ರಗಳ ಸಂಶೋಧನೆ ನಡೆಸಲು ಪ್ರಾರಂಭಿಸಿದೆ ಎಂದು ಲಿಡೆನ್ ಅಭಿಪ್ರಾಯ ಹಂಚಿಕೊಂಡರು.
ವಜ್ಯಗಳನ್ನು ಹುಡುಕಲು ಪ್ರವಾಸ ಕೈಗೊಳ್ಳುವುದರ ಮೊದಲು ಲಿಡೆನ್ ಈ ಕುರಿತಾಗಿ ಕೆಲವೊಂದಿಷ್ಟು ಮಾಹಿತಿಯನ್ನು ಸಂಗ್ರಹಿಸಿದನು. ಕೆಲವೊಂದಿಷ್ಟು ವಿಡಿಯೋಗಳ ಮೂಲಕ ಜ್ಞಾನವನ್ನು ಪಡೆದುಕೊಂಡನು. ಮೊದಲಿನಿಂದಲೂ ಲಿಡೆನ್ ಕನಸಿಗ ಬಗ್ಗೆ ತಿಳಿದಿದ್ದ ಸ್ನೇಹಿತ ಜೋಶ್ ಆತನ ಸಾಹಸಕ್ಕೆ ಕೈಜೋಡಿಸಿದನು.
ಗೆಳತಿ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಆತ ಗಣಿಗಾರಿಕೆಗೆ ಬೇಕಾದ ಉಪಕರಣಗಳ ಸಿದ್ಧತೆ ಮಾಡಿಕೊಂಡನು. ಗಣಿಗಾರಿಗೆ ನಡೆಸಲು ಹೊರಟ ದಿನ ಅವಳಿಗೆ ಗೊತ್ತಿರಲಿಲ್ಲ. ನಾನು ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಭಾವಿಸಿದ್ದಳು. ಕೆಲವು ಉದ್ಯಾನವಗಳಿಗೆ ಭೇಟಿ ನೀಡಲು ಹೋಗುತ್ತಿದ್ದೇವೆ ಎಂದು ಅವಳಿಗೆ ಹೇಳಿದ್ದೆ. ಆದರೆ, ರತ್ನಗಳನ್ನು ಕಂಡು ಹಿಡಿಯಲು ಹೊರಟಿದ್ದೇವೆ ಎಂಬ ವಿಷಯ ಅವಳಿಗೆ ತಿಳಿದಿರಲಿಲ್ಲ ಎಂದು ಲಿಡೆನ್ ಹೇಳಿದ್ದಾರೆ.
ಮೇ 1ರಿಂದ ಗಣಿಗಾರಿಕೆಯನ್ನು ಪ್ರಾರಂಭಿಸಲು ಲಿಡೆನ್ ಮತ್ತು ಜೋಶ್ ಮುಂದಾದರು. ಮೊದಲಿಗೆ ಮೊಂಟಾನಾದಲ್ಲಿ ಗಣಿಗಾರಿಗೆ ಪ್ರಾರಂಭಿಸಿದರು. ಆದರೆ ಯಾವುದೇ ರತ್ನಗಳು ಸಿಗಲಿಲ್ಲ. ಈ ಪ್ರಯತ್ನ ಯಶಸ್ವಿ ಆಗಲಿಲ್ಲ ಎಂದು ಬೇರೆ ವಿಧಾನವನ್ನು ಪ್ರಯತ್ನಿಸಿ ಜಲ್ಲಿಕಲ್ಲುಗಳ ಮೇಲ್ಪದರ ಗಣಿಗಾರಿಕೆ ಮಾಡಲು ಪ್ರಾರಂಭಿಸಿದರು. ಆದರು ಅವರಿಗೆ ವಜ್ರ ಸಿಗುವ ಯಾವುದೇ ಭರವಸೆ ಸಿಗಲಿಲ್ಲ.
ಕೊನೆಯ ಬಾರಿಗೆ ಇದು ಕೊನೆಯ ಎರಡು ಬಂಡಿಗಳು ಎನ್ನುತ್ತಾ ಸಂಶೋಧನೆ ನಡೆಸುತ್ತಿದ್ದಾಗ ಆಶ್ಚರ್ವಾಗುವಂಥಹ ಸಂಗತಿಯೊಂದು ನಡೆಯಿತು. ಎರಡು ಕ್ಯಾರೆಟ್ಗಳಷ್ಟು ತೂಕದ ಹಳದಿ ಬಣ್ಣದ ವಜ್ರ ಅವರಿಗೆ ಕಂಡುಬಂದಿತು. ಆ ಕ್ಷಣದ ಖುಷಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಸಿಕ್ಕಿದ ವಜ್ರದ ತುಂಡನ್ನು ಜಾಗೃತೆಯಿಂದ ತಂದೆವು ಎಂದು ಲಿಡೆನ್ ತಮ್ಮ ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ನಾನು ಎಂದೂ ಈ ಸಂದರ್ಭವನ್ನು ಊಹಿಸಿಯೂ ಇರಲಿಲ್ಲ. ಕೇವಲ ಒಂದು ಸಣ್ಣ ತುಂಡಾದರೂ ಹುಡುಕಬೇಕು ಎಂಬ ಆಸೆ ಹೊಂದಿದ್ದೆ. ಅಂತೂ ಯಶಸ್ವಿಯಾಗಿದ್ದೇನೆ ಎಂದು ಲಿಡೆನ್ ಸಂತೋಷ ವ್ಯಕ್ತಪಡಿಸಿದ್ದಾರೆ. ಉದ್ಯಾನವನದಲ್ಲಿ ಕಳೆದ ಅಕ್ಟೋಬರ್ ನಂತರ ಸಿಕ್ಕಿದ ಅತ್ಯಂತ ದೊಡ್ಡ ರತ್ನವಿದು. 2.20 ಕ್ಯಾರೆಟ್ ವಜ್ರವಿದು ಎಂಬ ವಿಷಯ ತಿಳಿದುಬಂತು. ಬಳಿಕ ಮನೆಗೆ ಮರಳಿ ಗೆಳತಿಗೆ ವಿಷಯ ತಿಳಿಸಿದೆ ಎಂದು ಲಿಡೆನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಮೈಮೇಲೆಲ್ಲ ಗಾಯ; ವಕೀಲರಿಂದ ಗಂಭೀರ ಆರೋಪ