AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಕ್ಕಿಜ್ವರದ ಎಚ್ 10 ಎನ್ 3 ತಳಿ ಇದೇ ಮೊದಲ ಬಾರಿಗೆ ಚೀನಾದ ವ್ಯಕ್ತಿಯೊಬ್ಬರಲ್ಲಿ ಪತ್ತೆ

H10 N3 in Human: ಸದ್ಯ ವ್ಯಕ್ತಿ ಆರೋಗ್ಯವಾಗಿದ್ದು, ಮರಳಿ ಮನೆಗೆ ತೆರಳಲು ಸನ್ನದ್ಧರಾಗಿದ್ದಾರೆ. ಅವರ ಸಂಪರ್ದಲ್ಲಿರುವ ವ್ಯಕ್ತಿಗಳಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ಚೀನಾದ ಆರೋಗ್ಯ ಆಯೋಗ ತಿಳಿಸಿದೆ.

ಹಕ್ಕಿಜ್ವರದ ಎಚ್ 10 ಎನ್ 3 ತಳಿ ಇದೇ ಮೊದಲ ಬಾರಿಗೆ ಚೀನಾದ ವ್ಯಕ್ತಿಯೊಬ್ಬರಲ್ಲಿ ಪತ್ತೆ
ಸಾಂಕೇತಿಕ ಚಿತ್ರ
guruganesh bhat
|

Updated on: Jun 01, 2021 | 3:01 PM

Share

ಬೀಜಿಂಗ್: ಸದ್ಯ ಕೊವಿಡ್ ಸೋಂಕಿನಿಂದ ತಲ್ಲಣಿಸಿರುವ ವಿಶ್ವ ಮತ್ತೆ ದೃಢ ವಿಶ್ವಾಸದಿಂದ ಹೋರಾಡುತ್ತಿರುವ ಹೊತ್ತಲ್ಲೇ ಚೀನಾದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಹಕ್ಕಿಜ್ಚರದ ರೂಪಾಂತರಿ ತಳಿ H10 N3 ವೈರಸ್ ಇದೇ ಮೊದಲ ಬಾರಿಗೆ ಮಾನವನಲ್ಲಿ ಪತ್ತೆಯಾಗಿದ್ದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಮಾಹಿತಿಯನ್ನು ಖಚಿತಪಡಿಸಿದೆ.

ಏಪ್ರಿಲ್ 28ರಂದು ಜ್ವರ ಮತ್ತು ಇನ್ನಿತರ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡುಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವ್ಯಕ್ತಿಗೆ ಹಕ್ಕಿಜ್ಚರದ ರೂಪಾಂತರಿ ತಳಿ H10 N3 ಇರುವುದು ದೃಢಪಟ್ಟಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಕುರಿತು ಪ್ರಕಟಣೆ ನೀಡಿದ್ದರೂ, ಹಕ್ಕಿಜ್ವರದ ರೂಪಾಂತರಿ ತಳಿ ವೈರಸ್ ವ್ಯಕ್ತಿಗೆ ತಗುಲಿದ್ದು ಹೇಗೆ ಎಂಬ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ಎಚ್ 10 ಎನ್ 3 ವೈರಸ್ ಕಡಿಮೆ ರೋಗಕಾರಕ ಗುಣಗಳನ್ನು ಹೊಂದಿದ್ದು ಇತರ ರೋಗಕಾರಕ ವೈರಸ್​ಗಳಿಗೆ ಹೋಲಿಸಿದರೆ ಅಷ್ಟೇನೂ ತೀವ್ರತರವಾದುದ್ದಲ್ಲ. ಕೋಳಿಮಾಂಸದಲ್ಲಿ ಕಂಡುಬರುವ ವೈರಸ್​ ತಳಿ ಇದಾಗಿದ್ದು ವ್ಯಾಪಕವಾಗಿ ಹರಡುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಹೇಳಲಾಗಿದೆ. ಸದ್ಯ ವ್ಯಕ್ತಿ ಆರೋಗ್ಯವಾಗಿದ್ದು, ಮರಳಿ ಮನೆಗೆ ತೆರಳಲು ಸನ್ನದ್ಧರಾಗಿದ್ದಾರೆ. ಅವರ ಸಂಪರ್ದಲ್ಲಿರುವ ವ್ಯಕ್ತಿಗಳಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ಚೀನಾದ ಆರೋಗ್ಯ ಆಯೋಗ ತಿಳಿಸಿದೆ. ಆದರೆ ಹಕ್ಕಿಜ್ವರದ ಎಚ್7 ಎನ್ 7 ತಳಿ 2016-17ನೇ ಸಾಲಿನಲ್ಲಿ ವಿಶ್ವದಾದ್ಯಂತ ಒಟ್ಟು 300 ಜನರ ಸಾವಿಗೆ ಕಾರಣವಾಗಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

ಇದನ್ನೂ ಓದಿ: ಕೊವಿಡ್ ತಡೆಗೆ ಮೈಸೂರಿನಲ್ಲಿ ಮತ್ತೊಂದು ಪ್ರಯೋಗ; ರಿವರ್ಸ್ ಐಸೋಲೇಷನ್​ ಮೂಲಕ ಸೋಂಕಿತರ ಕಾಳಜಿ

ಡಿಮ್ಹಾನ್ಸ್‌ನ ಮಾನಸಿಕ ತಜ್ಞರಿಂದ ಟೆಲಿ ಕೌನ್ಸೆಲಿಂಗ್; ಕೊವಿಡ್​ನಿಂದ ಖಿನ್ನತೆಗೊಳಗಾದ 3000 ಜನರೊಂದಿಗೆ ಆಪ್ತ ಸಮಾಲೋಚನೆ

(Worlds first H10N3 Bird flu found in China man)

Follow Us
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ