AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ ಭವಿಷ್ಯದ ಹಿತಕ್ಕಾಗಿ ಇರಾನ್ ಮೇಲಿನ ದಾಳಿ ರದ್ದು: ಡೊನಾಲ್ಡ್ ಟ್ರಂಪ್ ಘೋಷಣೆ, ಹಾರ್ಮುಜ್ ಜಲಸಂಧಿ ತೆರೆಯಲು ಸಮ್ಮತಿ

ಜಾಗತಿಕ ಶಾಂತಿ ಮತ್ತು ಭವಿಷ್ಯದ ಹಿತಕ್ಕಾಗಿ ಇರಾನ್ ಮೇಲಿನ ಮಿಲಿಟರಿ ದಾಳಿಗಳನ್ನು ಅಮೆರಿಕ ಮತ್ತು ಇಸ್ರೇಲ್ ರದ್ದುಗೊಳಿಸಿವೆ ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ನಿರ್ಧಾರದಿಂದಾಗಿ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲಾಗುವುದು ಹಾಗೂ ಇರಾನ್‌ನ ಪರಮಾಣು ಬೆದರಿಕೆಗೆ ಶಾಶ್ವತ ತೆರೆ ಬೀಳಲಿದೆ. ಓಮನ್, ಕತಾರ್, ಟರ್ಕಿ ದೇಶಗಳ ರಾಜತಾಂತ್ರಿಕ ಪ್ರಯತ್ನಗಳು ಈ ಒಪ್ಪಂದಕ್ಕೆ ಸಹಕಾರಿಯಾಗಿವೆ. ಇದು ಜಾಗತಿಕ ಆರ್ಥಿಕತೆ ಮತ್ತು ಇಂಧನ ಪೂರೈಕೆಗೆ ನೆರವಾಗಲಿದೆ.

ಜಗತ್ತಿನ ಭವಿಷ್ಯದ ಹಿತಕ್ಕಾಗಿ ಇರಾನ್ ಮೇಲಿನ ದಾಳಿ ರದ್ದು: ಡೊನಾಲ್ಡ್ ಟ್ರಂಪ್ ಘೋಷಣೆ, ಹಾರ್ಮುಜ್ ಜಲಸಂಧಿ ತೆರೆಯಲು ಸಮ್ಮತಿ
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Aug 02, 2026 | 8:34 AM

Share

ವಾಷಿಂಗ್ಟನ್, ಆಗಸ್ಟ್​ 02: ಇರಾನ್ ಹಾಗೂ ಮಧ್ಯಪ್ರಾಚ್ಯದ ಇತರ ರಾಷ್ಟ್ರಗಳ ಸತತ ಕೋರಿಕೆಯ ಮೇರೆಗೆ, ಇರಾನ್ ವಿರುದ್ಧ ಯೋಜಿಸಲಾಗಿದ್ದ ಸರಣಿ ಮಿಲಿಟರಿ ದಾಳಿಗಳನ್ನು ಅಮೆರಿಕ ಮತ್ತು ಇಸ್ರೇಲ್ ತಡೆಹಿಡಿದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)  ಪ್ರಕಟಿಸಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಒಪ್ಪಂದಕ್ಕೆ ಬರಲಾಗಿದೆ ಎಂದಿದ್ದಾರೆ. ನೂತನ ಒಪ್ಪಂದದಂತೆ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ತಕ್ಷಣವೇ ಸಂಪೂರ್ಣವಾಗಿ ತೆರೆಯಲಾಗುವುದು ಮತ್ತು ಇರಾನ್‌ನ ಪರಮಾಣು ಬೆದರಿಕೆಗೆ ಶಾಶ್ವತ ತೆರೆ ಎಳೆಯಲಾಗುವುದು.

ಎರಡನೇ ಮಹಾಯುದ್ಧದ ನಂತರ ಜಗತ್ತು ಕಂಡರಿಯದ ಶಕ್ತಿಶಾಲಿ ಮಿಲಿಟರಿ ಬಲದೊಂದಿಗೆ ಅಮೆರಿಕ ಇರಾನ್ ವಿರುದ್ಧ ದಾಳಿಗೆ ಸಿದ್ಧವಾಗಿತ್ತು. ಆದರೆ ಜಾಗತಿಕ ಶಾಂತಿ, ಭವಿಷ್ಯದ ಒಳಿತು ಹಾಗೂ ಸಮೃದ್ಧ ಇರಾನ್‌ನ ಉಳಿವಿಗಾಗಿ, ದಾಳಿ ರದ್ದುಗೊಳಿಸಲು ನಾನು ಸಮ್ಮತಿಸಿದ್ದೇನೆ. ಈ ಬದ್ಧತೆಯಲ್ಲಿ ಇಸ್ರೇಲ್ ಕೂಡ ನಮ್ಮೊಂದಿಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಹಾರ್ಮುಜ್ ಜಲಸಂಧಿಯ ಗಂಭೀರತೆ: ಜಗತ್ತಿನ ಸುಮಾರು ಶೇ. 20 ರಷ್ಟು ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯು ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗವನ್ನು ತಡೆಹಿಡಿದಿದ್ದರಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತೀವ್ರ ಬೆಲೆ ಏರಿಕೆ ಉಂಟಾಗಿತ್ತು.

ಮತ್ತಷ್ಟು ಓದಿ: ಮೆಲಾನಿಯಾರನ್ನು ಎಲ್ಲಿ ಕೊಲ್ಲಬೇಕು?: ಟ್ರಂಪ್ ಪತ್ನಿ, ಮಗನಿಗೆ ಕೊಲೆ ಬೆದರಿಕೆ ಹಾಕಿದ ಇರಾನ್, ಭದ್ರತೆ ತೀವ್ರ ಹೆಚ್ಚಳ

ಮಧ್ಯವರ್ತಿಗಳ ಪಾತ್ರ: ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ಭಾರಿ ದಾಳಿ-ಪ್ರತಿದಾಳಿಗಳು ನಡೆದಿದ್ದವು. ಓಮನ್, ಕತಾರ್ ಹಾಗೂ ಟರ್ಕಿ ದೇಶಗಳು ನಡೆಸಿದ ರಹಸ್ಯ ರಾಜತಾಂತ್ರಿಕ ಮಾತುಕತೆಗಳ ಫಲವಾಗಿ ಈ ಸಂಘರ್ಷ ಶಮನದ ಹಾದಿ ಸುಗಮಗೊಂಡಿದೆ.

ಆರ್ಥಿಕತೆ ಮತ್ತು ಶಾಂತಿ: ಈ ನಿರ್ಧಾರದಿಂದಾಗಿ ಏಷ್ಯನ್ ಹಾಗೂ ಯುರೋಪಿಯನ್ ಮಾರುಕಟ್ಟೆಗಳಲ್ಲಿ ತೈಲ ಸರಬರಾಜು ಸುಗಮಗೊಳ್ಳಲಿದ್ದು, ಜಾಗತಿಕ ಆರ್ಥಿಕತೆಯ ಮೇಲಿದ್ದ ಭಾರಿ ಒತ್ತಡ ಕಡಿಮೆಯಾಗಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ