ಕೊವಿಡ್ ತಡೆಗೆ ಮೈಸೂರಿನಲ್ಲಿ ಮತ್ತೊಂದು ಪ್ರಯೋಗ; ರಿವರ್ಸ್ ಐಸೋಲೇಷನ್​ ಮೂಲಕ ಸೋಂಕಿತರ ಕಾಳಜಿ

ಕೊವಿಡ್ ತಡೆಗೆ ಮೈಸೂರಿನಲ್ಲಿ ಮತ್ತೊಂದು ಪ್ರಯೋಗ; ರಿವರ್ಸ್ ಐಸೋಲೇಷನ್​ ಮೂಲಕ ಸೋಂಕಿತರ ಕಾಳಜಿ
ರಿವರ್ಸ್ ಐಸೋಲೇಷನ್​ ಮೂಲಕ ಸೋಂಕಿತರ ಕಾಳಜಿ

ಮೈಸೂರು ಮಹಾನಗರ ಪಾಲಿಕೆ ವಾತ್ಸಲ್ಯ ಕೇಂದ್ರದ ಹೆಸರಿನಲ್ಲಿ ರಿವರ್ಸ್ ಐಸೋಲೇಷನ್ ಕಾರ್ಯಕ್ರಮಕ್ಕೆ ನಿನ್ನೆ (ಮೇ 31) ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದ ಮೂಲಕ ರೋಗ ಗುಣಲಕ್ಷಣಗಳಿಲ್ಲದ ಸೋಂಕಿತರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿರಿಸಲು ಸಹಕಾರಿಯಾಗುವಂತೆ, ಅವರ ಮನೆಯ ಉಳಿದ ನಾನ್ ಕೊವಿಡ್ ಸದಸ್ಯರಿಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ.

preethi shettigar

|

Jun 01, 2021 | 10:40 AM

ಮೈಸೂರು: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅದರಂತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡ ಕೊರೊನಾ ಹೆಚ್ಚಾಗಿದ್ದು, ಸೋಂಕು ಬಹು ಬೇಗ ಸಾಮಾಜಿಕವಾಗಿ ಹರಡುತ್ತಿದೆ. ಹೀಗಾಗಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಭಿನ್ನ ವಿಭಿನ್ನ ಪ್ರಯತ್ನವನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ.‌ ಅದಕ್ಕೆ‌ ಮತ್ತೊಂದು ಸೇರ್ಪಡೆ ರಿವರ್ಸ್ ಐಸೋಲೇಷನ್. ಸರ್ಕಾರದ ಒಂದು ರೂಪಾಯಿ ವೆಚ್ಚವಿಲ್ಲದ ಪರಿಣಾಮಕಾರಿ ಯೋಜನೆ ಇದಾಗಿದೆ.

ಮೈಸೂರು ಮಹಾನಗರ ಪಾಲಿಕೆ ವಾತ್ಸಲ್ಯ ಕೇಂದ್ರದ ಹೆಸರಿನಲ್ಲಿ ರಿವರ್ಸ್ ಐಸೋಲೇಷನ್ ಕಾರ್ಯಕ್ರಮಕ್ಕೆ ನಿನ್ನೆ (ಮೇ 31) ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದ ಮೂಲಕ ರೋಗ ಗುಣಲಕ್ಷಣಗಳಿಲ್ಲದ ಸೋಂಕಿತರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿರಿಸಲು ಸಹಕಾರಿಯಾಗುವಂತೆ, ಅವರ ಮನೆಯ ಉಳಿದ ನಾನ್ ಕೊವಿಡ್ ಸದಸ್ಯರಿಗೆ ಆಶ್ರಯ ನೀಡಲು ವ್ಯವಸ್ಥೆ ಮಾಡಲಾಗಿದೆ.

ಸೋಂಕಿತರು ಕೊವಿಡ್ ಸೆಂಟರ್ ಬದಲಾಗಿ ತಮ್ಮ ಮನೆಯಲ್ಲೇ ಇದ್ದರೆ ಹೆಚ್ಚಿನ ಆತ್ಮವಿಶ್ವಾದಿಂದ ಇರುತ್ತಾರೆ.‌ ಇದರಿಂದ ಅವರು ಬೇಗ ಗುಣಮುಖರಾಗಲು ಸಹಕಾರಿಯಾಗುತ್ತದೆ. ಜೊತೆಗೆ ಮನೆಯ ಇತರ ಸದಸ್ಯರನ್ನು ಅವರಿಂದ ಪ್ರತ್ಯೇಕವಾಗಿ ಇರಿಸುವ ಕಾರಣ ಅವರಿಗೆ ಸೋಂಕು ಹರಡುವುದನ್ನು ತಡೆಯಬಹುದಾಗಿದೆ. ಇದಕ್ಕೆ ಮೈಸೂರು ಮಹಾನಗರಪಾಲಿಕೆಗೆ ತೇರಾಪಂತ್ ಯುವಕರ ಸಂಘ, ಜಿಎಸ್‌ಎಸ್ ಯೋಗಾಸಂಸ್ಥೆ, ರೋಟರಿ ಸಂಸ್ಥೆ, ಆರೋಗ್ಯ ಭಾರತಿ, ಪ್ರಮತಿ ವಿದ್ಯಾಸಂಸ್ಥೆಯವರು ಸಾಥ್ ನೀಡಿದ್ದಾರೆ ಎಂದು ನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ತಿಳಿಸಿದ್ದಾರೆ.

ಈ ಯೋಜನೆಯಿಂದ ಸರ್ಕಾರದ ಒಂದು ರೂಪಾಯಿ ಕೂಡ ಖರ್ಚಾಗುತ್ತಿಲ್ಲ. ಎಲ್ಲವನ್ನೂ ಸಂಘ ಸಂಸ್ಥೆಗಳೇ ವಹಿಸಿಕೊಂಡಿವೆ. ಸೋಂಕಿತರ ಮನೆಯ ಸದಸ್ಯರಿಗೆ ಆಶ್ರಯ ನೀಡಲು ಪ್ರಮತಿ ವಿದ್ಯಾಸಂಸ್ಥೆ ಮುಂದೆ ಬಂದಿದೆ.‌ ಇಲ್ಲಿ ಆಶ್ರಯ ಪಡೆಯವವರಿಗೆ ತೇರಾಪಂತ್ ಯುವಕರ ಸಂಘದಿಂದ ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಭಾರತಿ ಸಂಸ್ಥೆಯವರು ಇಲ್ಲಿ ಬರುವ ಎಲ್ಲರ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡುವ ಹೊಣೆ ಹೊತ್ತಿದ್ದಾರೆ. ಇನ್ನು ಇದರ ಸಂಪೂರ್ಣ ನಿರ್ವಹಣೆಯನ್ನು ರೋಟರಿ ಹಾಗೂ ಜಿಎಸ್​ಎಸ್ ಯೋಗ ಸಂಸ್ಥೆಯ ಸದಸ್ಯರು ನಿರ್ವಹಿಸಲಿದ್ದಾರೆ ಎಂದು ನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್ ಹೇಳಿದ್ದಾರೆ.

ಜನರ ಆತ್ಮವಿಶ್ವಾಸ ಹೆಚ್ಚಿಸಲು ಕ್ರೀಡೆ ಮನರಂಜನೆ ಹಾಗೂ ಯೋಗಾ ಪ್ರಾರ್ಥನೆಯ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಮೂಲಕ ಕೊರೊನಾವನ್ನು ನಿಯಂತ್ರಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಲೇ ಕೊವಿಡ್ ಮಿತ್ರ ಟೆಲಿ ಮೆಡಿಕೇರ್ ಮನೆ ಮನೆ ಸಮೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಇದು ಸಹಾ ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗಲಿ. ಮೈಸೂರು ಮತ್ತೆ ಕೊರೊನಾ ಮುಕ್ತವಾಗಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ:

ಜುಲೈ 1ರೊಳಗೆ ಕೊವಿಡ್ ಮುಕ್ತ ಗುರಿ, ಮಹಿಳೆಯರಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಒನ್ ವೇ ಓಡಾಟ; ಲಾಕ್​ಡೌನ್ ವಿಸ್ತರಣೆ ಹಿನ್ನೆಲೆ ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಚುರುಕು

Follow us on

Related Stories

Most Read Stories

Click on your DTH Provider to Add TV9 Kannada