ಜುಲೈ 1ರೊಳಗೆ ಕೊವಿಡ್ ಮುಕ್ತ ಗುರಿ, ಮಹಿಳೆಯರಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

Mysuru DC Rohini Sindhuri: ಗ್ರಾಮೀಣ ಪ್ರದೇಶದ ಹೆಣ್ಣು‌ ಮಕ್ಕಳು ಹುಷಾರಿಲ್ಲದಿದ್ದರೂ ಹೇಳಿಕೊಳ್ಳುತ್ತಿಲ್ಲ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 18 ಕೋವಿಡ್ ಸೆಂಟರ್ ಮಾಡಲಾಗಿದೆ. ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಲು ಯಾರೂ ಇಲ್ಲ  ಎಂದು ಕೊವಿಡ್ ಕೇರ್ ಸೆಂಟರ್​ಗಳಿಗೆ ದಾಖಲಾಗಲು ಒಪ್ಪುತ್ತಿಲ್ಲ ಎಂದು ಪರಿಸ್ಥಿತಿಯನ್ನು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿವರಿಸಿದರು.

ಜುಲೈ 1ರೊಳಗೆ ಕೊವಿಡ್ ಮುಕ್ತ ಗುರಿ, ಮಹಿಳೆಯರಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ
Follow us
guruganesh bhat
| Updated By: preethi shettigar

Updated on: Jun 01, 2021 | 9:02 AM

ಮೈಸೂರು: ಜಿಲ್ಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೊವಿಡ್ ಸೆಂಟರ್ ಆರಂಭಿಸಲಾಗುವುದು. ಸದ್ಯ ಜಿಲ್ಲೆಯ 1,560 ಗ್ರಾಮಗಳಲ್ಲಿ 343 ಗ್ರಾಮ ಕೊರೊನಾ ಮುಕ್ತವಾಗಿದ್ದು, ಡಿ.ಬಿ.ಕುಪ್ಪೆ ಗ್ರಾ.ಪಂ ವ್ಯಾಪ್ತಿಯಲ್ಲಿ ಒಂದು ಕೇಸ್ ಸಹ ಇಲ್ಲ. ಜುಲೈ 1 ರೊಳಗೆ ಮೈಸೂರು ಜಿಲ್ಲೆಯನ್ನು ಕೊರೊನಾ‌ ಮುಕ್ತವಾಗಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ಗುರಿ ಸಾಧನೆಗೆ ಎಲ್ಲರ ಸಹಕಾರ ಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದರು.

ಮೈಸೂರು ನಗರದಲ್ಲಿ ಸದ್ಯ 8,535 ಕೊವಿಡ್ ಪ್ರಕರಣಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 6,560 ಕೊವಿಡ್ ಸೋಂಕಿತರಿದ್ದಾರೆ. ನಗರ ಪಾಲಿಕೆಯಲ್ಲಿ 24 ವಾರ್ಡ್‌ಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳಿವೆ. ಕೆಲವೊಂದು ವಾರ್ಡ್‌ನಲ್ಲಿ 300 ರಿಂದ 400 ಪ್ರಕರಣಗಳಿದ್ದು, ಅಂತಹ ವಾರ್ಡ್‌ಗಳ ಬಗ್ಗೆ ಹೆಚ್ಚಿನ ಗಮನ ಕೊಡಲಾಗಿದೆ. ಕೊರೊನಾ‌ ಮುಕ್ತ ಗ್ರಾಮ, ಕೊರೊನಾ ಮುಕ್ತ

ಕೊರೊನಾ ಮುಕ್ತ ವಾರ್ಡ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಗ್ರಾಮೀಣ‌ ಪ್ರದೇಶದಲ್ಲಿ ಮನೆ ಮನೆ ಸಮೀಕ್ಷೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶದ ಹೆಣ್ಣು‌ ಮಕ್ಕಳು ಹುಷಾರಿಲ್ಲದಿದ್ದರೂ ಹೇಳಿಕೊಳ್ಳುತ್ತಿಲ್ಲ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 18 ಕೋವಿಡ್ ಸೆಂಟರ್ ಮಾಡಲಾಗಿದೆ. ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಲು ಯಾರೂ ಇಲ್ಲ  ಎಂದು ಕೊವಿಡ್ ಕೇರ್ ಸೆಂಟರ್​ಗಳಿಗೆ ದಾಖಲಾಗಲು ಒಪ್ಪುತ್ತಿಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಜಿಲ್ಲೆಯಲ್ಲಿ ಈವರೆಗೆ 66 ಬ್ಲ್ಯಾಕ್ ಫಂಗಸ್ ಕೇಸ್‌ಗಳು ಪತ್ತೆಯಾಗಿದ್ದು, ಈವರೆಗೆ 8 ಜನ ಗುಣಮುಖರಾಗಿ 8 ಸೋಂಕಿತರು ಮೃತಪಟ್ಟಿದ್ದಾರೆ. ಬ್ಲ್ಯಾಕ್ ಫಂಗಸ್‌ ಸೋಂಕಿಗೆ ಸರ್ಕಾರದಿಂದ ಔಷಧ ಜಿಲ್ಲೆಯನ್ನು ತಲುಪಿದೆ. ಕೊರೊನಾ ನಿಯಂತ್ರಣಕ್ಕೆ ಸಹಕರಿಸುವವರನ್ನು ಕೊರೊನಾ ಹೀರೋ, ಕೊರೊನಾ ವಾರಿಯರ್ಸ್ ಅಂತಾ ಗೌರವಿಸಲಾಗುವುದು. ಸಂಘ, ಸಂಸ್ಥೆಗಳನ್ನೂ ಸೇರಿ ಕೊವಿಡ್​ನಲ್ಲಿನ ಪಾಸಿಟಿವ್ ಸ್ಟೋರಿಗಳನ್ನು ಎಲ್ಲರಿಗೂ ತಿಳಿಸಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಚುವೆಚ್ಚದ ವಿವರ ಬಿಡುಗಡೆಗೊಳಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ

(Mysuru DC Rohini Sindhuri says Mysuru will be covid free by July 1st and will start separate covid care centre)