ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ

ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ
ಐಎಎಸ್ ರೋಹಿಣಿ ವಿರುದ್ಧ ಮುಂದುವರೆದ ಸಂಸದ ಪ್ರತಾಪ್ ಸಿಂಹ ವಾಕ್ ಸಮರ; ಐಎಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯ

ಕೊವಿಡ್ ಸೋಂಕು ನಿಯಂತ್ರಿಸಲು ಹಳ್ಳಿಗೆ ಹೋಗಿ ಎಂದು ಡಿಸಿ ರೋಹಿಣಿ ಸಿಂಧೂರಿಯವರಿಗೆ ಕಿವಿಮಾತು ಹೇಳಿದ್ದೆ. ಆದರೆ ಇದನ್ನು ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ಅವರು ತಮ್ಮ ಅಹಂಗೆ ಘಾಸಿಯಾದಂತೆ ತೆಗೆದುಕೊಂಡಿದ್ದಾರೆ: ಸಂಸದ ಪ್ರತಾಪ್ ಸಿಂಹ

guruganesh bhat

|

May 30, 2021 | 11:39 PM

ಮೈಸೂರು: ಸಂಸದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಸಿಎಂ ಯಡಿಯೂರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ ಸ್ಟೆಪ್‌ಡೌನ್‌ ಆಸ್ಪತ್ರೆ ಬಗ್ಗೆ ಹಲವು ಅನುಮಾನಗಳಿದ್ದು, ಈ‌ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿ‌ ಸಂಸದ ಪ್ರತಾಪ್‌ ಸಿಂಹ ಪತ್ರ ಬರೆದಿದ್ದಾರೆ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಸಂವೇದನಾ ರಹಿತ ಧೋರಣೆ ಕೊರೊನಾ ನಿಯಂತ್ರಣಕ್ಕೆ ಅಡ್ಡಿಯಾಗುತ್ತಿದೆ. ಸೋಂಕಿನಿಂದ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಜವಾಬ್ದಾರಿಯುತ ನಾಗರಿಕನಾಗಿ ಅಸಮಾಧಾನ ವ್ಯಕ್ತಪಡಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಬೆಳಗ್ಗೆಯಷ್ಟೇ ಸಂಸದ ಪ್ರತಾಪ್ ಸಿಂಹ ಕೊವಿಡ್ ನಿರ್ಹಣೆಗೆ  ಸರ್ಕಾರ ಒದಗಿಸಿದ ಅನುದಾನದ ಲೆಕ್ಕವನ್ನು ಬಿಡುಗಡೆಗೊಳಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬಳಿ ಆಗ್ರಹಿಸಿದ್ದರು. ಈ ಬೆನ್ನಲ್ಲೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಂಜೆಯ ವೇಳೆ ಖರ್ಚುವೆಚ್ಚದ ಅಂಕಿ ಅಂಶವನ್ನು ಬಹಿರಂಗಪಡಿಸಿದ್ದರು. ಈ ಬೆಳವಣಿಗೆಗಳ ನಂತರ ಸಂಸದ ಪ್ರತಾಪ್ ಸಿಂಹ ಪತ್ರದ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ. ಈ ಮೂಲಕ ಜನಪ್ರತಿನಿಧಿ ಮತ್ತು ಜಿಲ್ಲಾಡಳಿತದ ನಡುವಿನ ಹಗ್ಗಜಗ್ಗಾಟ ಇನ್ನೊಂದು ಹೆಜ್ಜೆ ಮುಂದುವರೆದಿದೆ.

ಕೊವಿಡ್ ಸೋಂಕು ನಿಯಂತ್ರಿಸಲು ಹಳ್ಳಿಗೆ ಹೋಗಿ ಎಂದು ಡಿಸಿ ರೋಹಿಣಿ ಸಿಂಧೂರಿಯವರಿಗೆ ಕಿವಿಮಾತು ಹೇಳಿದ್ದೆ. ಆದರೆ ಇದನ್ನು ಜಿಲ್ಲಾಧಿಕಾರಿ ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ಅವರು ತಮ್ಮ ಅಹಂಗೆ ಘಾಸಿಯಾದಂತೆ ತೆಗೆದುಕೊಂಡಿದ್ದಾರೆ. ಜನಪ್ರತಿನಿಧಿಗಳ ಬಗ್ಗೆಯೇ ಅನುಮಾನ ಹುಟ್ಟಿಸುವಂತೆ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳ ಪ್ರಚಾರಾಂದೋಲನ ನಿಜಕ್ಕೂ ನನಗೆ ಹೇಸಿಗೆ ಹುಟ್ಟಿಸಿದೆ ಎಂದು ಸಂಸದ ಪ್ರತಾಪ್‌ ಸಿಂಹ ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಏಕೆ ಅನುಮತಿ ಕೊಟ್ಟರು? ಈ ಬಗ್ಗೆ ತನಿಖೆ ನಡೆಸಿದರೆ ನಿಜ ಬಣ್ಣ ಬಯಲಾಗಲಿದೆ ಎಂದಿರುವ ಸಂಸದ ಪ್ರತಾಪ್‌ ಸಿಂಹ ಸಿಎಂ ಯಡಿಯೂರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಪತ್ರದ ಮೂಲಕ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಚುವೆಚ್ಚದ ವಿವರ ಬಿಡುಗಡೆಗೊಳಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಟೆಸ್ಟಿಂಗ್ ಕಡಿಮೆ ಮಾಡಿದ್ದೇ ಸೋಂಕು ಹರಡಲು ಕಾರಣವಾಯ್ತು: ಸಂಸದ ಪ್ರತಾಪ್ ಸಿಂಹ

(Mysore MP Pratap Simha write letter against DC Rohini Sindhuri to CM Yediyurappa and CS)

Follow us on

Related Stories

Most Read Stories

Click on your DTH Provider to Add TV9 Kannada