Sign In

By signing in or creating an account, you agree with Associated Broadcasting Company's Terms & Conditions and Privacy Policy.

CBSE, ICSE PUC Exam ದ್ವಿತೀಯ ಪಿಯು ಎಕ್ಸಾಂ ಕ್ಯಾನ್ಸಲ್ ಆಗುತ್ತಾ? ಸುಪ್ರೀಂಕೋರ್ಟ್ನಲ್ಲಿಂದು ಪರೀಕ್ಷೆ ಭವಿಷ್ಯ ತೀರ್ಮಾನ

ದ್ವೀತಿಯ ಪಿಯುಸಿ ಸ್ಟೂಡೆಂಟ್ಸ್ಗೆ ಟೆನ್ಷನ್ ಅಂದ್ರೆ ಟೆನ್ಷನ್.. ಎಕ್ಸಾಂ ನಡೆಯುತ್ತಾ ಅಥವಾ ಎಕ್ಸಾಂ ಕ್ಯಾನ್ಸಲ್ ಆಗೇ ಬಿಡುತ್ತಾ? ಎಕ್ಸಾಂಗೆ ಪ್ರಿಪೇರ್ ಆಗ್ಬೇಕಾ? ಇಲ್ಲ ಕೂಲ್ ಆಗಿ ಮನೆಯಲ್ಲಿರೋದಾ ಅಂತ ವಿದ್ಯಾರ್ಥಿಗಳು ತಲೆಗೆ ಹುಳ ಬಿಟ್ಕೊಂಡಿದ್ದಾರೆ. ಆದ್ರೆ, ಪರೀಕ್ಷೆ ಇರುತ್ತಾ.. ಇಲ್ವಾ ಅನ್ನೋದು ಇವತ್ತೇ ಡಿಸೈಡ್ ಆಗಲಿದೆ!

CBSE, ICSE PUC Exam ದ್ವಿತೀಯ ಪಿಯು ಎಕ್ಸಾಂ ಕ್ಯಾನ್ಸಲ್ ಆಗುತ್ತಾ? ಸುಪ್ರೀಂಕೋರ್ಟ್ನಲ್ಲಿಂದು ಪರೀಕ್ಷೆ ಭವಿಷ್ಯ ತೀರ್ಮಾನ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:May 31, 2021 | 9:12 AM

ಟೆನ್ಷನ್.. ಟೆನ್ಷನ್.. ಟೆನ್ಷನ್.. ಇಷ್ಟು ದಿನ ಕೂಲ್ ಆಗಿ ಮನೆಯಲ್ಲಿದ್ದ ಪಿಯುಸಿ ಸ್ಟೂಡೆಂಟ್ಸ್ಗೆ ತಲೆ ಕೆಟ್ಟು ಹೋಗಿದೆ. ಎಕ್ಸಾಂಗೆ ಪ್ರಿಪೇರ್ ಆಗೋದ್ ಹಾಗ್ ಇರ್ಲಿ.. ಎಕ್ಸಾಂ ನಡೆಯುತ್ತಾ ಅಥವಾ ಕ್ಯಾನ್ಸಲ್ ಆಗುತ್ತಾ ಅನ್ನೋದೇ ತಲೆನೋವಾಗಿದೆ. ಆದ್ರೆ, ಇವತ್ತು ಎಕ್ಸಾಂ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಲಿದೆ.

ಎರಡನೇ‌ ಅಲೆ‌ಯ ಹೊಡೆತಕ್ಕೆ ಸೋಂಕಿನ ಸ್ಫೋಟದ ನಡುವೆ ಶಿಕ್ಷಣ ಕ್ಷೇತ್ರ ನಲುಗಿ ಹೋಗಿದೆ. ಈ ನಡುವೆ ಸೆಕೆಂಡ್ ಪಿಯುಸಿ ಎಕ್ಸಾಂ ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ಡಿಸೈಡ್ ಆಗಿತ್ತು. ಆದ್ರೆ ಕೇಂದ್ರ ಶಿಕ್ಷಣ ಇಲಾಖೆಯ ಕ್ರಮದ ವಿರುದ್ಧ ವಕೀಲರಾದ ಮಮತಾ ಶರ್ಮಾ ಎಂಬುವವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು. ಹೀಗಾಗಿ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಇವತ್ತು ವಿಚಾರಣೆ ನಡೆಸಲಿದೆ. 12ನೇ ತರಗತಿಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪರೀಕ್ಷೆ ನಡೆಯಬೇಕೋ‌‌? ಬೇಡವೋ ಎಂಬುದನ್ನು ನಿರ್ಧರಿಸಲಿದೆ. ಇನ್ನು, ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ಪೀಠ ಕಳೆದ ಶುಕ್ರವಾರ ಅರ್ಜಿ ಸಂಬಂಧ ವಿಚಾರಣೆ ನಡೆಸಿ, ಪ್ರಕರಣ ಮುಂದೂಡಿತ್ತು. ಈ ವೇಳೆ ಸಿಬಿಎಸ್‌ಇ ಸಲಹೆಗಾರರ ಮುಂಗಡ ಪ್ರತಿಯನ್ನು ಒದಗಿಸುವಂತೆ ನ್ಯಾಯಪೀಠ ಸೂಚಿಸಿತ್ತು. ಹೀಗಾಗಿ ಸುಪ್ರೀಂಕೋರ್ಟ ಇಂದು ವಿಚಾರಣೆ ನಡೆಸಲಿದ್ದು, ಮಧ್ಯಾಹ್ನದ ಹೊತ್ತಿಗೆ ಅಂತಿಮ ಆದೇಶ ಹೊರಬೀಳೋ ಸಾಧ್ಯತೆಯಿದೆ.

ಕಳೆದ ವಾರ ಪಿಯುಸಿ ಪರೀಕ್ಷೆ ನಡೆಸುವ ಸಂಬಂಧ ಕೇಂದ್ರ ಉನ್ನತಮಟ್ಟದ ಸಭೆ ಸೇರಿತ್ತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ಸಭೆಯಲ್ಲಿ ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರು ಭಾಗಿಯಾಗಿದ್ರು. ಎಲ್ಲಾ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ತೆಗದುಕೊಳ್ಳಲಾಗಿತ್ತು. ಆದ್ರೆ, ಇವತ್ತು ಸುಪ್ರೀಂಕೋರ್ಟ್ ಎಕ್ಸಾಂ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ರೆ ನಾಳೆ ಸಿಬಿಎಸ್ಇ ಪರೀಕ್ಷೆ ವೇಳಾಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯ ರಿಲೀಸ್ ಮಾಡುವ ಸಾಧ್ಯತೆ ಇದೆ.

ಒಟ್ನಲ್ಲಿ, ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಭವಿಷ್ಯ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಇಂದು ಪಿಯುಸಿ ಪರೀಕ್ಷೆ ಬಗ್ಗೆ ಅಂತಿಮ‌ ನಿರ್ಧಾರ ಹೊರಬೀಳಲಿದೆ.

ಇದನ್ನೂ ಓದಿ: Tv9 Digital Live: ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯಲೇಬೇಕು, ಆದರೆ ಸರ್ಕಾರ ಬೇಗ ನಿರ್ಧಾರ ಪ್ರಕಟಿಸಲಿ ಎನ್ನುತ್ತಾರೆ ತಜ್ಞರು

Published On - 7:26 am, Mon, 31 May 21

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ