Tv9 Digital Live: ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯಲೇಬೇಕು, ಆದರೆ ಸರ್ಕಾರ ಬೇಗ ನಿರ್ಧಾರ ಪ್ರಕಟಿಸಲಿ ಎನ್ನುತ್ತಾರೆ ತಜ್ಞರು

ಪಿಯುಸಿ ಹಾಗಿರಲಿ, ಮೆಟ್ರಿಕ್ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೇ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪರೀಕ್ಷೆಗಳು ಪ್ರಾಯಶಃ ಜುಲೈ ಎರಡನೇ ವಾರದಲ್ಲಿ ನಡೆಯಬಹುದು. ಕೊವಿಡ್​ನ ಎರಡನೇ ಅಲೆಯ ಮಧ್ಯೆ ಈ ಪರೀಕ್ಷೆ ನಡೆಸಬೇಕೆ? ಬೇಡವೇ? ನಡೆಸುವುದೇ ಆದಲ್ಲಿ, ಎಮ್​ಸಿಕ್ಯೂ ಮಾದರಿಯಲ್ಲಿ ನಡೆಸಿದರೆ ಹೇಗೆ? ಎಂಬ ಬಗ್ಗೆ ಸೋಮವಾರ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚೆ ನಡೆಯಿತು.

Tv9 Digital Live: ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯಲೇಬೇಕು, ಆದರೆ ಸರ್ಕಾರ ಬೇಗ ನಿರ್ಧಾರ ಪ್ರಕಟಿಸಲಿ ಎನ್ನುತ್ತಾರೆ ತಜ್ಞರು
ಪ್ರೊಫೆಸರ್ ಬಬಿತಾ ಸಲ್ಡಾನ ಮತ್ತು ಡಾ ಸುಪ್ರೀತ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:May 24, 2021 | 9:48 PM

ಕೋವಿಡ್ ಪಿಡುಗು ನಿಶ್ಚಿತವಾಗಿಯೂ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳು ಇಷ್ಟೊತ್ತಿಗಾಗಲೇ ಮುಗಿದು ಮಕ್ಕಳು ತಮ್ಮ ಮುಂದಿನ ಯೋಜನೆಗಳು ಬಗ್ಗೆ ಪೋಷಕರೊಂದಿಗೆ ಚರ್ಚಿಸುತ್ತಾ ಕುಳಿತಿರುತ್ತಿದ್ದರು. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡಿರುವ ಮಕ್ಕಳು ಸಿಇಟಿ ಪರೀಕ್ಷೆ ಬರೆದು ಯಾವ ವೃತ್ತಿಪರ ಕೋರ್ಸಿಗೆ ಸೇರಬೇಕು ಎನ್ನುವ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿರುತ್ತಿದ್ದರು. ಆದರೆ ಪಿಯುಸಿ ಹಾಗಿರಲಿ, ಮೆಟ್ರಿಕ್ ಪರೀಕ್ಷೆಗಳನ್ನು ನಡೆಸುವ ಬಗ್ಗೆಯೇ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪಿಯುಸಿ ಮತ್ತು ಸಿಬಿಎಸ್​ಸಿ 12 ನೇ ತರಗತಿಯ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿವೆ. ಪರೀಕ್ಷೆಗಳು ಪ್ರಾಯಶಃ ಜುಲೈ ಎರಡನೇ ವಾರದಲ್ಲಿ ನಡೆಯಬಹುದು. ಕೊವಿಡ್​ನ ಎರಡನೇ ಅಲೆಯ ಮಧ್ಯೆ ಈ ಪರೀಕ್ಷೆ ನಡೆಸಬೇಕೆ? ಬೇಡವೇ? ನಡೆಸುವುದೇ ಆದಲ್ಲಿ, ಎಮ್​ಸಿಕ್ಯೂ ಮಾದರಿಯಲ್ಲಿ ನಡೆಸಿದರೆ ಹೇಗೆ? ಈ ಕುರಿತು ಸೋಮವಾರದ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಆ್ಯಂಕರ್​ ಆನಂದ್​ ಬುರಲಿ ಅವರು ತಜ್ಞರು, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಿದ್ದಾರೆ. ಚರ್ಚೆಯ ಆಯ್ದ ಭಾಗ ಇಲ್ಲಿದೆ.

ಮಕ್ಕಳು ಪರೀಕ್ಷೆ ಬರೆಯಲು ಸಿದ್ಧರಾಗಿದ್ದರೂ ಅವರನ್ನು ಕೊವಿಡ್ ಕುರಿತ ಭೀತಿ ಆವರಿಸಿದೆ. ಕೆಲವರು ಸಂಪೂರ್ಣ ತಯಾರಿ ಮಾಡಿಕೊಂಡು ಸರ್ಕಾರ ದಿನಾಂಕ ಪ್ರಕಟಿಸುವುದನ್ನು ಕಾಯುತ್ತಿದ್ದರೆ, ಮತ್ತೇ ಕೆಲವರು ಈ ವರ್ಷ ಪರೀಕ್ಷೆ ನಡೆಯಲಾರವು ಎಂಬ ಉಡಾಫೆ ಮನೋಭಾವದೊಂದಿಗೆ ಓದುವುದನ್ನು ನಿಲ್ಲಿಸಿದ್ದಾರೆ. ಅದರೆ ಪರೀಕ್ಷೆಗಳು ಯಾವ ಕಾರಣಕ್ಕೂ ರದ್ದಾಗಲಾರವು ಅಂತ ಹೇಳಿದ ಆನಂದ ಬುರ್ಲಿ ಅವರು, ಶಿಕ್ಷಣ ತಜ್ಞ ಮತ್ತು ಪ್ರಾಂಶುಪಾಲ ಸಂಘದ ಅಧ್ಯಕ್ಷರಾಗಿರುವ ಸುಪ್ರೀತ್​ ಅವರಿಗೆ ಪ್ರಸಕ್ತ ಸ್ಥಿತಿ, ಮಕ್ಕಳ ಸಿದ್ಧತೆ, ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಪ್ರಕಟಿಸಲು ವಿಳಂಬ ಮಾಡುತ್ತಿರುವ ಸರ್ಕಾರ, ಪ್ರೊಫಶನಲ್ ಕೋರ್ಸುಗಳಿಗೆ ಸೇರಬೇಕೆಂದಿರುವ ವಿದ್ಯಾರ್ಥಿಗಳ ಮನಸ್ಥಿತಿ ಮುಂತಾದವುದಳ ಬಗ್ಗೆ ಕೇಳಿದರು.

ಹತ್ತು ಮತ್ತು 12 ನೇ ತರಗತಿಗಳಿಗೆ ಪರೀಕ್ಷೆಗಳನ್ನು ನಡೆಸಲು ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿರುವುದು ಸ್ವಾಗತಾರ್ಹ, ಯಾಕೆಂದರೆ ಪರೀಕ್ಷೆಗಳನ್ನು ನಡೆಸದೆ ಸಾಮೂಹಿಕವಾಗಿ ಮಕ್ಕಳನ್ನು ಪಾಸು ಮಾಡಿದರೆ ಭವಿಷ್ಯದಲ್ಲಿ ಅವರಿಗೆ ತುಂಬಾ ತೊಂದರೆ ಅಗುತ್ತದೆ ಎಂದು ಸುಪ್ರೀತ್ ಹೇಳಿದರು. ಮಕ್ಕಳು ಅದರಲ್ಲೂ ವಿಶೇಷವಾಗಿ ವೃತ್ತಿಪರ ಕೋರ್ಸುಗಳಿಗೆ ಸೇರಲು ಇಚ್ಛಿಸಿರುವವರು ಪರೀಕ್ಷೆಗಳನ್ನು ಬರೆಯಲೇಬೇಕು. ಮಾಸ್​ ಪಾಸ್​ ಪದ್ಧತಿಯಿಂದ ಪ್ರತಿಭಾವಂತರು ಅವಕಾಶವಂಚಿತರಾಗುತ್ತಾರೆ, ಅದು ಹಾಗಾಗಕೂಡದು. ಜುಲೈನಲ್ಲಿ ಕೇಂದ್ರವು ಸಿಬಿಎಸ್​ಸಿ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿದೆ, ಅದರ ಜೊತೆಗೆ ಕರ್ನಾಟಕ ಸರ್ಕಾರವೂ ಅದೇ ಸಮಯದಲ್ಲಿ ಪಿಯುಸಿ ಪರೀಕ್ಷೆಗಳನ್ನು ನಡೆಸಿದರೆ ಚೆನ್ನಾಗಿರುತ್ತದೆ ಎಂದು ಸುಪ್ರೀತ್ ಹೇಳಿದರು.

ಪರೀಕ್ಷೆಗಳನ್ನು ಹೇಗೆ ನಡೆಸಬಹುದೆಂದು ಸರ್ಕಾರಕ್ಕೆ ಪ್ರಾಂಶುಪಾಲರ ಸಂಘದಿಂದ ರೂಪುರೇಷೆಗಳನ್ನು ನೀಡಲಾಗಿದೆ ಎಂದ ಸುಪ್ರೀತ್ ಪರೀಕ್ಷೆಗಳನ್ನು ನಡೆಸಲು ದಿನಾಂಕಗಳನ್ನು ಪ್ರಕಟಿಸುವ ಮೊದಲು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವುದು ಅತ್ಯವಶ್ಯಕವಾಗಿದೆ ಅಂತ ಹೇಳಿದರು. ಸಮುದಾಯ ಭವನಗಳನ್ನು ಬಾಡಿಗೆ ಪಡೆದು ಅವುಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ. ಪ್ರತಿ ಪರೀಕ್ಷೆಯ ನಡುವೆ ಎರಡು ದಿನಗಳ ಅಂತರವಿಟ್ಟರೆ ಪರೀಕ್ಷಾ ಕೆಂದ್ರಗಳನ್ನು ಸ್ಯಾನಿಟೈಸ್ ಮಾಡುವುದು ಸುಲಭವಾಗುತ್ತದೆ. ಪರೀಕ್ಷೆರಗಳನ್ನು ನಡೆಸುವುದು ಕೇವಲ ಶಿಕ್ಷಣ ಇಲಾಖೆ ಒಂದರಿಂದಲೇ ಸಾಧ್ಯವಾಗುವುದಿಲ್ಲ, ಸಂಬಂಧಪಟ್ಟ ಎಲ್ಲ ಇಲಾಖೆಗಳು ಕೈಜೋಡಿಸಬೇಕು ಎಂದು ಸುಪ್ರೀತ್ ಹೇಳಿದರು.

ಆದರೆ, ಪರೀಕ್ಷಗಳನ್ನ ಕೊವಿಡ್​ನ ರೌದ್ರಾವತಾರ ತೀರಿದ ನಂತರವೇ ನಡೆಸಬೇಕು ಅಂತ ಅವರು ಹೇಳಿದರು.

ಬದಲಾದ ಪರಸ್ಥಿತಿಯ ಹಿನ್ನೆಲೆಯಲ್ಲಿ ಪರೀಕ್ಷಾ ವಿಧಾನವನ್ನೂ ಬದಲಾಯಿಸಿಬೇಕೇ ಎಂದು ಕೇಳಿದ ಪ್ರಶ್ನೆಗೆ ಸುಪ್ರೀತ್ ಅವರು, ಪರೀಕ್ಷಾ ಸಮಯವನ್ನು ಒಂದೂವರೆ ಗಂಟೆಗೆ ಸೀಮಿತಗೊಳಿಸಿ ಹೆಚ್ಚು ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಸಿದ್ಧಫಡಿಸುವುದು ಪ್ರಯೋಜನಕಾರಿ ಎಂದು ಹೇಳಿದರು. ಛತ್ತೀಸ್​ಗಢ್​ ರಾಜ್ಯವು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಿರುವ ಹಾಗೆ ಕರ್ನಾಟಕದಲ್ಲಿ ಪ್ರಾಯಶಃ ಮಾಡಲಾಗದು. ಬೆಂಗಳೂರಿನಲ್ಲಿ ಅನೇಕ ಸಾಫ್ಟ್​ವೇರ್​ ಕಂಪನಿಗಳಿವೆ ಅವಗದಳ ನೆರವು ಪಡೆದು ಆನಲೈನ್ ಡಿಜಿಟಲ್ ವ್ಯವಸ್ಥೆ ಮಾಡಬಹುದು ಎಂದು ಅವರು ಹೇಳಿದರು. ಸರ್ಕಾರ ಅತಿ ಜರೂರಾಗಿ ಮಾಡಬೇಕಿರುವ ಕೆಲಸವೆಂದರೆ ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವುದು ಅಂತ ಸುಪ್ರೀತ ಹೇಳಿದರು.

ಚರ್ಚೆಯಲ್ಲಿ ಭಾಗವಹಿಸಿದ್ದ ಮೌಂಟ್ ಕಾಲೇಜ್ ಕಾಲೇಜಿನ ಪ್ರಿನ್ಸಿಪಾಲರಾಗಿರುವ ಪ್ರೊಫೆಸರ್ ಬಬಿತಾ ಸಲ್ಡಾನ್ಹಾ ಅವರು, ಪರೀಕ್ಷೆಗಳನ್ನು ನಡೆಸಲೇಬೇಕು ಎಂದು ಹೇಳಿದರು. ಮಕ್ಕಳು ಮಾನಸಿಕ ಒತ್ತಡದಲ್ಲಿದ್ದಾರೆ. ಪರೀಕ್ಷೆಗಳಿಗೆ ಕೆಲವು ಚೆನ್ನಾಗಿ ತಯಾರಿ ಮಾಡಿಕೊಂಡಿದ್ದಾರೆ, ಕೆಲವರು ಇಲ್ಲ. ಕಳೆದ ವರ್ಷ ಕೋವಿಡ್​ ಬಗ್ಗೆ ಜಾಸ್ತಿ ಅತಂಕವಿರಲಿಲ್ಲ. ಸದ್ಯದ ಪರಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇವಲ ಕೋರ್​ ವಿಷಯಗಳಿಗೆ ಒಂದೂವರೆ ತಾಸಿನ ಪರೀಕ್ಷೆ ನಡೆಸಿದರೂ ಸಾಕು ಎಂದು ಬಬಿತಾ ಹೇಳಿದರು.

ಅವರ ನಂತರ ಆನಂದ ಅವರು ಮಾತಾಡಿಸಿದ್ದು ಪೋಷಕರನ್ನು. ಪಿಯುಸಿ ಓದುತ್ತಿರುವ ಮಗನ ತಾಯಿಯೊಬ್ಬರು ಆನ್​ಲೈನ್ ಪಾಠಗಳ ಬಗ್ಗೆ ಬೇಸರ ವ್ಯಕ್ತಪಡಿಸಿ, ಸರ್ಕಾರ ಪರೀಕ್ಷೆ ನಡೆಸುವ ದಿನಾಂಕವನ್ನು ಬೇಗ ಪ್ರಕಟಿಸಬೇಕು, ಮಕ್ಕಳು ಮಾನಸಿಕ ಸಿದ್ಧತೆ ಮಾಡಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಹೇಳಿದರು. ಮಕ್ಕಳಲ್ಲಿ ಪರೀಕ್ಷೆಗಳ ಬಗ್ಗೆ ಬಹಳ ಗೊಂದಲವಿದೆ ಎಂದ ಅವರ ಅವರಿಗೆ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಏತನ್ಮಧ್ಯೆ ಮಾತಾಡಿದ ಸುಪ್ರೀತ್ ಅವರು, ಸಿಬಿಎಸ್​ಇಗೆ ಜುಲೈನಲ್ಲಿ ಎರಡು ಹಂತದ ಪರೀಕ್ಷೆಗಳು ನಡೆಯಬಹುದು ಅಂತ ಹೇಳಿ ಸೈನ್ಸ್ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್​ ಪರೀಕ್ಷೆಗಳನ್ನು ಇಷ್ಟರಲ್ಲಾಗಲೇ ನಡೆಸಿದ್ದರೆ, ಅವರಲ್ಲಿ ಒಂದಷ್ಟು ಒತ್ತಡ ಕಡಿಮೆಯಾಗಿರುತಿತ್ತು ಎಂದರು. ಕೇವಲ ಕೋರ್ ಸಬ್ಲೆಕ್ಟ್​ಗಳಿಗೆ ಪರೀಕ್ಷೆ ನಡೆಸಿ ಭಾಷೆಗಳ ಪರೀಕ್ಷೆಗಳನ್ನು ನಡೆಸದೇ ಹೋದರೆ ಯಾವುದೇ ಹಾನಿಯಿಲ್ಲ ಎಂದು ಅವರು ಹೇಳಿದರು.

ಪರೀಕ್ಷೆಗಳನ್ನು ನಡೆಸುವುದು ಬಹಳ ಮುಖ್ಯ ಆದರೆ ಈ ವಿಷಯವನನ್ನು ಪೋಷಕರಿಗೆ ಹೇಗೆ ಕನ್ವಿನ್ಸ್ ಮಾಡೋದು ಎಂದು ಆನಂದ ಬುರ್ಲಿ ಕೇಳಿದ ಪ್ರಶ್ನೆಗೆ ಸುಪ್ರೀತ್ ಅವರು, ಇದು ಬಹಳ ಸೂಕ್ಷ್ಮವಾದ ವಿಷಯ, ಇದು ಪೋಷಕರಿಗೆ, ಮಕ್ಕಳಿಗೆ, ಇಲಾಖೆಗೆ- ಎಲ್ಲರಿಗೂ ಅಗ್ನಿಪರೀಕ್ಷೆಯ ಸಮಯ. ಆದರೆ ಪೋಷಕರು ಭಾವುಕರಾಗಬಾರದು. ಪರೀಕ್ಷೆಗಳು ನಡೆಯಲೇ ಬೇಕು, ಸಾಮಾಹಿಕವಾಗಿ ಪಾಸ್ ಮಾಡಿದರೆ ಕೇವಲ ಶ್ರೀಮಂತರ ಮಕ್ಕಳಿಗಷ್ಟೇ ವೃತ್ತಿಪರ ವ್ಯಾಸಂಗಕ್ಕೆ ಸೀಟುಗಳು ಸಿಗುತ್ತವೆ. ಹಾಗಾಗಿ, ಎಲ್ಲ ಇಲಾಖೆಗಳು, ಸಮಾಜದ ಎಲ್ಲ ವರ್ಗದವರು ಪರೀಕ್ಷೆ ನಡೆಯಲು ಸಹಾಯ ಮಾಡಬೇಕು ಎಂದು ಹೇಳಿದರು.

ಯಶ್ವಂತ್ ಹೆಸರಿನ ವಿದ್ಯಾರ್ಥಿ, ಸಿದ್ಧತೆ ನಡೀತಾ ಇದೆ, ಅದರೆ ಪರೀಕ್ಷೆ ಯಾವಾಗ ನಡೆಯಲಿವೆ ಎನ್ನುವ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ನಮಗೆಲ್ಲ ಲಸಿಕೆ ಹಾಕಿಸಬೇಕು ಮತ್ತು ಮನೆಗಳಿಗೆ ಹತ್ತಿರವಿರುವ ಪರೀಕ್ಷಾ ಕೇಂದ್ರದಲ್ಲೇ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಸರ್ಕಾರ ಪರೀಕ್ಷೆಗಳನ್ನು ನಡೆಸಲಿ ಆದರೆ, ಯಾವಾಗ ಅನ್ನುವ ಕುರಿತು ಬೇಗ ನಿರ್ಧಾರ ಪ್ರಕಟಿಸಲಿ ಎಂದು ಆನಂದ ಬುರ್ಲಿ ಹೇಳಿದರು.

ಇದನ್ನೂ ಓದಿ: CBSE 12th Board Exams 2021: ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ರದ್ದಿಲ್ಲ; ಜೂನ್ 1ರಂದು ಅಂತಿಮ ತೀರ್ಮಾನ ಪ್ರಕಟಗೊಳ್ಳುವ ಸಂಭವ

Published On - 9:13 pm, Mon, 24 May 21

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​