AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mehul Choksi: ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಡೊಮಿನಿಕಾದಲ್ಲಿ ಅರೆಸ್ಟ್​; ಕ್ಯೂಬಾಕ್ಕೆ ಹೊರಡಲು ನಡೆದಿತ್ತು ಸಿದ್ಧತೆ

ಮೆಹುಲ್ ಚೋಸ್ಕಿಯನ್ನು ಕಸ್ಟಡಿಗೆ ಪಡೆಯುವ ಸಂಬಂಧ ಆಂಟಿಗೋವಾ ಪೊಲೀಸರು ಡೊಮಿನಿಕಾ ಪೊಲೀಸರನ್ನು ಸಂಪರ್ಕಿಸಿದ್ದಾರೆ.

Mehul Choksi: ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಡೊಮಿನಿಕಾದಲ್ಲಿ ಅರೆಸ್ಟ್​; ಕ್ಯೂಬಾಕ್ಕೆ ಹೊರಡಲು ನಡೆದಿತ್ತು ಸಿದ್ಧತೆ
ಮೆಹುಲ್ ಚೋಸ್ಕಿ
Lakshmi Hegde
|

Updated on:May 26, 2021 | 11:17 PM

Share

ಆಂಟಿಗುವಾ​: ದೇಶ ಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಮೊನ್ನೆ ಆಂಟಿಗೋವಾದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿತ್ತು. ಈತನೀಗ ಕೆರೆಬಿಯನ್​ ಸೀಯಲ್ಲಿರುವ ಸಣ್ಣ ಐಸ್​ಲ್ಯಾಂಡ್​ ದೇಶ ಡೊಮಿನಿಕಾದಲ್ಲಿ ಬಂಧಿತನಾಗಿದ್ದಾನೆ ಎಂದು ವರದಿಯಾಗಿದೆ. ಡೊಮಿನಿಕಾದ ಪೊಲೀಸರೇ ಆತನನ್ನ ಬಂಧಿಸಿದ್ದಾರೆ. ಮೆಹುಲ್ ಚೋಸ್ಕಿಯನ್ನು ಕಸ್ಟಡಿಗೆ ಪಡೆಯುವ ಸಂಬಂಧ ಆಂಟಿಗೋವಾ ಪೊಲೀಸರು ಡೊಮಿನಿಕಾ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆಂಟಿಗೋವಾದಿಂದ ಪರಾರಿಯಾಗಿದ್ದ ಮೆಹುಲ್​ ಚೋಸ್ಕಿಗೆ ಇಂಟರ್​ಪೋಲ್​​ನಿಂದ ಯೆಲ್ಲೋ ನೋಟಿಸ್​ ಜಾರಿ ಮಾಡಲಾಗಿತ್ತು. ಡೊಮಿನಿಕಾಗೆ ಪರಾರಿಯಾಗಿದ್ದ ಮೆಹುಲ್​ ಚೋಸ್ಕಿ ಅಲ್ಲಿಂದ ಕ್ಯೂಬಾಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

61 ವರ್ಷ ಪ್ರಾಯದ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧೀ ನೀರವ್​ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​​ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ. ಇಬ್ಬರು ವಿರುದ್ಧವೂ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದ್ದು, ಇಬ್ಬರೂ ಭಾರತಕ್ಕೆ ವಾಪಸಾಗಬೇಕಾಗಿದ್ದಾರೆ.

ವಿಯಾನ್ (WION) ಟಿವಿ ಮಾಧ್ಯಮದ ಜೊತೆ ಮೆಹುಲ್ ಚೋಸ್ಕಿ ಆಂಟಿಗೋವಾದಿಂದ ಪರಾರಿಯಾಗಿರುವ ವರದಿಗಳ ಬಗ್ಗೆ ಮಾತನಾಡಿರುವ ಆಂಟಿಗುವಾ ಪ್ರಧಾನಿ, ಸ್ವತಃ ಉದ್ಯಮಿ ಮತ್ತು ಬ್ಯಾಂಕರ್​ ಆಗಿದ್ದ ಗಷ್ಟನ್ ಬ್ರೌನ್ ಅವರು ​‘24 ಗಂಟೆಯಾದರೂ ಮೆಹುಲ್ ಚೋಸ್ಕಿ ಪತ್ತೆಯಾಗಿಲ್ಲ. ಹಾಗಾಗಿ ಆತನ ವಿರುದ್ಧ ಕಣ್ಮರೆಯಾಗಿರುವ ಬಗ್ಗೆ ಸ್ಥಳೀಯವಾಗಿ ಬಿತ್ರರಿಸಲಾಗಿದೆ. ಅದನ್ನ ಈಗ ಇಂಟರ್​ಪೋಲ್​ ಜೊತೆಗೂ ಹಂಚಿಕೊಳ್ಳಲಾಗಿದೆ. ಮೆಹುಲ್ ಚೋಸ್ಕಿ ವಿರುದ್ಧ ಸ್ಥಳೀಯ ಕೋರ್ಟ್​ಗಳಲ್ಲಿ 2 ವಿಷಯಗಳು ದಾಖಲಾಗಿವೆ: ಒಂದು ಆತನ ಪೌರತ್ವವನ್ನು ಹಿಂತೆಗೆದುಕೊಳ್ಳುವುದು, ಮತ್ತೊಂದು ಆತನನ್ನು ಭಾರತಕ್ಕೆ ಹಸ್ತಾಂತರಿಸುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ: ಕೋವಿಡ್-19 ಮೂರನೇ ಅಲೆ, ಬ್ಲ್ಯಾಕ್ ಫಂಗಸ್​ನಿಂದ ಮಕ್ಕಳ ರಕ್ಷಣೆ ಹೇಗೆನ್ನುವುದನ್ನು ತಜ್ಞರು ಇಲ್ಲಿ ವಿವರಿಸಿದ್ದಾರೆ

Published On - 11:15 pm, Wed, 26 May 21

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!