AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಂದು ಸಹ ಏರಿದ ಇಂಧನ ದರ; ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಲು 6 ಪೈಸೆಗಳಷ್ಟೇ ಬಾಕಿ

Petrol Diesel Rate Today: ಮೇ ತಿಂಗಳಿನ ಪ್ರಾರಂಭದಿಂದ ಇಲ್ಲಿಯವರೆಗೆ ತೈಲ ದರ ಏರಿಕೆಯಲ್ಲಿ ಲೀಟರ್ ಪೆಟ್ರೋಲ್​ ದರ 3.33 ಪೈಸೆ ಹಾಗೂ ಲೀಟರ್​ ಡೀಸೆಲ್​ ದರ 3.85 ಪೈಸೆ ಹೆಚ್ಚಳವಾಗಿದೆ. ದರ ಏರಿಕೆಯಿಂದ ಪೆಟ್ರೋಲ್​ ಮತ್ತು ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

Petrol Price Today: ಇಂದು ಸಹ ಏರಿದ ಇಂಧನ ದರ; ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಲು 6 ಪೈಸೆಗಳಷ್ಟೇ ಬಾಕಿ
ಸಾಂದರ್ಭಿಕ ಚಿತ್ರ
shruti hegde
|

Updated on:May 27, 2021 | 8:58 AM

Share

ದೆಹಲಿ: ಇಂದು ಗುರವಾರ (ಮೇ 27) ತೈಲ ದರಗಳು ಏರಿಕೆ ಆಗಿವೆ. ಸರ್ಕಾರಿ ತೈಲ ಕಂಪನಿಗಳು ಇಂದು ಇಂಧನ ದರ ಪರಿಷ್ಕರಿಸಿದ ಬಳಿಕ ಲೀಟರ್​ ಪೆಟ್ರೋಲ್​ ದರದಲ್ಲಿ 24 ಪೈಸೆ ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 29 ಪೈಸೆ ಏರಿಕೆ ಮಾಡಿವೆ. ಮೇ ತಿಂಗಳಿನ ಪ್ರಾರಂಭದಿಂದ ಇಲ್ಲಿಯವರೆಗೆ ಇಂಧನ ದರ 14 ಬಾರಿ ಏರಿಕೆ ಕಂಡಿದೆ. ಈ ಮೂಲಕ ತೈಲ ದರ ಲೀಟರ್ ಪೆಟ್ರೋಲ್​ನಲ್ಲಿ 3.33 ರೂ ಹಾಗೂ ಲೀಟರ್​ ಡೀಸೆಲ್​ ದರ 3.85 ರೂ ಹೆಚ್ಚಳವಾಗಿದೆ. ದರ ಏರಿಕೆಯಿಂದ ಪೆಟ್ರೋಲ್​ ಮತ್ತು ಡೀಸೆಲ್​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ರಾಜಸ್ಥಾನ, ಮಹಾರಾಷ್ಟ್ರ, ಭೋಪಾಲ್​ನಲ್ಲಿ ಲೀಟರ್​ ಪೆಟ್ರೋಲ್​ ದರ ಈಗಾಗಲೇ 100ರ ಗಡಿ ದಾಟಿದೆ. ಇನ್ನು ಕೆಲ ಪೈಸೆಗಳಷ್ಟು ಹೆಚ್ಚಳವಾದರೆ ಮುಂಬೈ ನಗರವೂ ಕೂಡ ಇವುಗಳ ಗುಂಪಿಗೆ ಸೇರಿಕೊಳ್ಳುತ್ತದೆ. ರಾಜಸ್ಥಾನದ ಶ್ರೀಗಂಗನಗರದಲ್ಲಿ ಲೀಟರ್​ ಪೆಟ್ರೋಲ್​ ರ 104.67 ರೂಪಾಯಿಗೆ ಹೆಚ್ಚಳವಾಗಿದೆ.

ಇಂದು ಇಂಧನ ದರ ಏರಿಕೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 93.68 ರೂಪಾಯಿಗೆ ಏರಿಕೆ ಆಗಿದೆ. ಹಾಗೂ ಲೀಟರ್​ ಡೀಸೆಲ್​ ದರದಲ್ಲಿ 84.61 ರೂಪಾಯಿಗೆ ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಇಂಧನ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಲೀಟರ್​ ಪೆಟ್ರೋಲ್​ನಲ್ಲಿ 99.94 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 91.87 ರೂಪಾಯಿಗೆ ಹೆಚ್ಚಳವಾಗಿದೆ.

ಚೆನ್ನೈನಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 95.28 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ 89.39 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ, ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 93.72 ರೂ. ಹಾಗೂ ಲೀಟರ್​ ಡೀಸೆಲ್​ ದರ 87.46 ರೂಪಅಯಿ ಆಗಿದೆ. ಭೋಪಾಲ್​ನಲ್ಲಿ ಪೆಟ್ರೋಲ್​ ಲೀಟರ್​ಗೆ 101.77 ರೂಪಾಯಿಗೆ ಏರಿಕೆ ಆಗಿದೆ. ಪ್ರತಿ ಲೀಟರ್​ ಡೀಸೆಲ್​ ದರ 93.07 ರೂಪಾಯಿ ದಾಖಲಾಗಿದೆ.

ಇನ್ನು, ಬೆಂಗಳೂರು ನಗರದಲ್ಲಿ ಲೀಟರ್​ ಪೆಟ್ರೋಲ್​ ದರ 96.80 ರೂ. ಹಾಗೂ ಲೀಟರ್​ ಡೀಸೆಲ್​ ದರ 89.70 ರೂಪಾಯಿಗೆ ಹೆಚ್ಚಳವಾಗಿದೆ. ಲಕ್ನೋದಲ್ಲಿ ಲೀಟರ್​ ಪೆಟ್ರೋಲ್​ ಬೆಲೆ 91.21 ರೂಪಾಯಿ ಹಾಗೂ ಲೀಟರ್​ ಡೀಸೆಲ್​ 85 ರೂಪಾಯಿ ಆಗಿದೆ. ಪಾಟ್ನಾದಲ್ಲಿ ಲೀಟರ್​ ಪೆಟ್ರೋಲ್​ ದರ95.85 ರೂ. ಹಾಗೂ ಲೀಟರ್​ ಡೀಸೆಲ್​ ದರ 89.87 ರೂಪಾಯಿಗೆ ಜಿಗಿದಿದೆ. ಇನ್ನು, ಜೈಪುರದಲ್ಲಿ ಪೆಟ್ರೋಲ್​ ಲೀಟರ್​ಗೆ 100.17 ರೂ. ಹಾಗೂ ಲೀಟರ್​ ಡೀಸೆಲ್​ ದರ 93.36 ರೂ. ಆಗಿದೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 8:55 am, Thu, 27 May 21

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!