ಬಾಬಾ ರಾಮ್​ದೇವ್​ ವಿರುದ್ಧ ಐಎಂಎಯಿಂದ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ಈ ಬಗ್ಗೆ ಸಮರ್ಥನೆ ನೀಡಿದ್ದ ಪತಂಜಲಿ ಟ್ರಸ್ಟ್​, ಬಾಬಾ ರಾಮ್​ದೇವ್​ ಅವರಿಗೆ ಅಲೋಪಥಿ ಬಗ್ಗೆ ತುಂಬ ಗೌರವ ಇದೆ. ಅವರು ವಾಟ್ಸ್​ಆ್ಯಪ್​​ನಲ್ಲಿ ಬಂದಿದ್ದ ಒಂದು ಸಂದೇಶವನ್ನು ಓದುತ್ತಿದ್ದ ವಿಡಿಯೋ ಅದು ಎಂದು ಹೇಳಿತ್ತು.

ಬಾಬಾ ರಾಮ್​ದೇವ್​ ವಿರುದ್ಧ ಐಎಂಎಯಿಂದ 1000 ಕೋಟಿ ರೂ.ಮಾನನಷ್ಟ ಮೊಕದ್ದಮೆ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ
ಬಾಬಾ ರಾಮ್​ದೇವ್​
Follow us
Lakshmi Hegde
|

Updated on: May 26, 2021 | 9:55 PM

ಅಲೋಪಥಿ ವಿರುದ್ಧ ಹೇಳಿಕೆ ನೀಡಿದ್ದ ಯೋಗಗುರು ಬಾಬಾ ರಾಮ್​ ದೇವ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸಿದ್ದ ಭಾರತೀಯ ವೈದ್ಯಕೀಯ ಸಂಘ (IMA), ಅವರ ವಿರುದ್ಧ ಮಾನನಷ್ಟ 1000 ಕೋಟಿ ರೂಪಾಯಿಯ ಮೊಕದ್ದಮೆಯನ್ನೂ ಹೂಡಿದೆ. ಅಷ್ಟಕ್ಕೂ ಸುಮ್ಮನಾಗದೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದು, ಬಾಬಾ ರಾಮ್​ದೇವ್​ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ಅಲೋಪಥಿ ವೈದ್ಯಕೀಯ ಪದ್ಧತಿ ಮತ್ತು ವೈದ್ಯರ ವಿರುದ್ಧ ಬಾಬಾ ರಾಮ್​ದೇವ್​ ಕೆಟ್ಟದಾಗಿ ಮಾತನಾಡಿದ್ದಾರೆ. ಎರಡೂ ಡೋಸ್ ಲಸಿಕೆ ಪಡೆದಿದ್ದರೂ 10,000ಕ್ಕೂ ಹೆಚ್ಚು ಮೃತಪಟ್ಟಿದ್ದಾರೆ ಎಂದು ತಪ್ಪು ಮಾಹಿತಿಯನ್ನು ಜನರಿಗೆ ತಿಳಿಸಿದ್ದಾರೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು ಎಂದೂ ಆಗ್ರಹಿಸಿದೆ. ಬಾಬಾ ರಾಮ್​ ದೇವ್​ ಮಾತನಾಡಿರುವ, 140 ಸೆಕೆಂಡ್​ಗಳ ವಿಡಿಯೋವೊಂದು ಕಳೆದ ವಾರದಿಂದಲೂ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಅಲೋಪಥಿಕ್​ ವೈದ್ಯಕೀಯ ಪದ್ಧತಿಯ ವಿರುದ್ಧ ಮಾತನಾಡಿದ್ದಾರೆ. ಕೊವಿಡ್​ 19 ಸೋಂಕಿಗೆ ಬಳಸಲಾಗುತ್ತಿರುವ ಕೆಲವು ಔಷಧಿಗಳ ಬಗ್ಗೆಯೂ ಪ್ರಶ್ನೆ ಎತ್ತಿದ್ದರು. ಅದನ್ನು ನೋಡಿದ ಭಾರತೀಯ ವೈದ್ಯಕೀಯ ಸಂಘ ಇದನ್ನು ಆರೋಗ್ಯ ಸಚಿವರ ಗಮನಕ್ಕೆ ತಂದಿತ್ತು. ಹಾಗೇ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಕೂಡ ಇದನ್ನು ಖಂಡಿಸಿದ್ದರು. ನಿಮ್ಮ ಹೇಳಿಕೆಗಳನ್ನು ವಾಪಸ್ ಪಡೆಯಿರಿ, ಅಲೋಪಥಿಕ್​ ವಿರುದ್ಧ ಮಾತನಾಡಿ ಇಡೀ ದೇಶದ ಭಾವನೆಗೆ ಧಕ್ಕೆ ತಂದಿದ್ದೀರಿ ಎಂದೂ ಹೇಳಿದ್ದರು.

ಆದರೆ ಈ ಬಗ್ಗೆ ಸಮರ್ಥನೆ ನೀಡಿದ್ದ ಪತಂಜಲಿ ಟ್ರಸ್ಟ್​, ಬಾಬಾ ರಾಮ್​ದೇವ್​ ಅವರಿಗೆ ಅಲೋಪಥಿ ಬಗ್ಗೆ ತುಂಬ ಗೌರವ ಇದೆ. ಅವರು ವಾಟ್ಸ್​ಆ್ಯಪ್​​ನಲ್ಲಿ ಬಂದಿದ್ದ ಒಂದು ಸಂದೇಶವನ್ನು ಓದುತ್ತಿದ್ದ ವಿಡಿಯೋ ಅದು ಎಂದು ಹೇಳಿತ್ತು. ಆದರೆ ಐಎಂಎ ಸದ್ಯಕ್ಕೆ ವಿಷಯವನ್ನು ಬಿಡುತ್ತಿಲ್ಲ. ಐಎಂಎ ಉತ್ತರಖಾಂಡ್​ ಕಾರ್ಯದರ್ಶಿ ಅಜಯ್​ ಕುಮಾರ್​ ಅವರು ಸುಮಾರು 6 ಪೇಜ್​​ಗಳುಳ್ಳ ನೋಟಿಸ್​ನ್ನು ವಕೀಲ ನೀರಜ್​ ಪಾಂಡೆ ಮೂಲಕ ಕಳಿಸಿದ್ದಾರೆ.

ಇದನ್ನು ಓದಿ: ದಿ ಫ್ಯಾಮಿಲಿ ಮ್ಯಾನ್​ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್​ ಬಾಜಪೇಯ್

ಅಪ್ರಾಪ್ತನಿಗೆ ಸನ್ಯಾಸ ನೀಡಿದಾಗ ಸರ್ಕಾರ ಮೂಕಪ್ರೇಕ್ಷನಾಗಿರಲು ಸಾಧ್ಯವಿಲ್ಲ: ಉಡುಪಿಯ ಶಿರೂರು ಮಠಕ್ಕೆ ಬಾಲಸನ್ಯಾಸಿ ನೇಮಕಕ್ಕೆ ಹೈಕೋರ್ಟ್​ ಆಕ್ಷೇಪ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ