‘ದಿ ಫ್ಯಾಮಿಲಿ ಮ್ಯಾನ್​ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್​ ಬಾಜಪೇಯ್

‘ದಿ ಫ್ಯಾಮಿಲಿ ಮ್ಯಾನ್​ ಸೀಸನ್​-2’ ಜೂನ್​ 4ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗುತ್ತಿದೆ. ಈ ವೆಬ್​ ಸೀರಿಸ್​ನ ನಿರ್ದೇಶನ ಜವಾಬ್ದಾರಿಯನ್ನು ರಾಜ್​ ಮತ್ತು​ ಡಿ.ಕೆ. ನಿಭಾಯಿಸಿದ್ದಾರೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್​ ಬಾಜಪೇಯ್
ಮನೋಜ್​ ಬಾಜಪೇಯಿ
Follow us
ರಾಜೇಶ್ ದುಗ್ಗುಮನೆ
|

Updated on: May 26, 2021 | 9:37 PM

‘ದಿ ಫ್ಯಾಮಿಲಿ ಮ್ಯಾನ್​-2’ ವೆಬ್​ ಸೀರಿಸ್​ ಟ್ರೇಲರ್​ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ವಿವಾದ ಹೊತ್ತಿಸಿತ್ತು. ಈ ವೆಬ್​ ಸೀರಿಸ್​ನಲ್ಲಿ ತಮಿಳರನ್ನು ಉಗ್ರಗಾಮಿಗಳಂತೆ ತೋರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಈಗ ಈ ಬಗ್ಗೆ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿರುವ ಮನೋಜ್​ ಬಾಜಪೇಯಿ ಪ್ರತಿಕ್ರಿಯಿಸಿದ್ದಾರೆ.

2019ರಲ್ಲಿ ಬಿಡುಗಡೆ ಆಗಿದ್ದ ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸಿರೀಸ್​ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಮನೋಜ್​ ಬಾಜಪೇಯ್​, ಪ್ರಿಯಾಮಣಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ‘ದಿ ಫ್ಯಾಮಿಲಿ ಮ್ಯಾನ್​ 2’ಗಾಗಿ ಎಲ್ಲರೂ ಕಾದಿದ್ದರು. ಆದರೆ, ಸಿನಿಮಾ ಟ್ರೇಲರ್​ ತಮಿಳಿಯನ್ನರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಜನರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಹೀಗಾಗಿ, ಅಮೇಜಾನ್​ ಪ್ರೈಮ್​ ಟ್ರೇಲರ್ ಎಡಿಟ್​ ಮಾಡುವ ಕೆಲಸವನ್ನು ಕೂಡ ಮಾಡಿದೆ.

ಈ ಬಗ್ಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮನೋಜ್​ ಮಾತನಾಡಿದ್ದಾರೆ. ಸೀಸನ್​ ಎರಡರಲ್ಲಿ ಕೆಲಸ ಮಾಡಿದ ಬಹುತೇಕರು ಪ್ರಾಥಮಿಕವಾಗಿ ತಮಿಳಿಯನ್ನರು. ರಾಜ್​ ಮತ್ತು ಡಿಕೆ, ಸಮಂತಾ ಅಕ್ಕಿನೇನಿ, ಪ್ರಿಯಾಮಣಿ, ಸುಮನ್​… ತಮಿಳರ ಹಿತಾಸಕ್ತಿ ಕಾಪಾಡಲು ಇವರಿಗಿಂತ ಬೇರೆ ಬೇಕೆ? ತಮಿಳುನಾಡಿನ ಸಂಸ್ಕೃತಿ ಕಾಪಾಡಲು ಇವರಿಗಿಂತ ಉತ್ತಮ ವ್ಯಕ್ತಿ ಮತ್ತೊಬ್ಬರು ಬೇಕು ಎಂದು ನನಗೆ ಅನ್ನಿಸುವುದಿಲ್ಲ ಎಂದಿದ್ದಾರೆ ಮನೋಜ್​.

‘ದಿ ಫ್ಯಾಮಿಲಿ ಮ್ಯಾನ್​ ಸೀಸನ್​-2’ ಜೂನ್​ 4ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗುತ್ತಿದೆ. ಈ ವೆಬ್​ ಸೀರಿಸ್​ನ ನಿರ್ದೇಶನ ಜವಾಬ್ದಾರಿಯನ್ನು ರಾಜ್​ ಮತ್ತು​ ಡಿ.ಕೆ. ನಿಭಾಯಿಸಿದ್ದಾರೆ. ಮೊದಲ ಸೀಸನ್​ ದೊಡ್ಡಮಟ್ಟದಲ್ಲಿ ಹಿಟ್ ಆದ್ದರಿಂದ ಎರಡನೇ ಸೀಸನ್​ಮೇಲೆ ಹೆಚ್ಚು ನಿರೀಕ್ಷೆ ಇದೆ.

ಇದನ್ನೂ ಓದಿ: ಮತ್ತೆ ವಿವಾದ ಮಾಡಿಕೊಳ್ಳಲಿದೆಯೇ ಅಮೇಜಾನ್​ ಪ್ರೈಮ್​? ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ಗೆ ವಿಘ್ನ

ವೀಕ್ಷಕರು ಕಣ್ತುಂಬಿಕೊಳ್ಳುವ ಮೊದಲೇ ಬ್ಯಾನ್​ ಆಗಲಿದೆ ‘ದಿ ಫ್ಯಾಮಿಲಿ ಮ್ಯಾನ್​-2’?

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು