Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್​ ದತ್​ಗೆ ಯುಎಇ ಸರ್ಕಾರದಿಂದ ಸಿಕ್ತು ಗೋಲ್ಡನ್​ ವೀಸಾ; ಇದರಿಂದ ಸಿಗೋ ಸವಲತ್ತುಗಳೇನು ಗೊತ್ತಾ?

ಗೋಲ್ಡನ್​ ವೀಸಾ ಪಡೆದುಕೊಂಡಿರುವ ಫೋಟೋ ಹಂಚಿಕೊಂಡಿರುವ ಸಂಜಯ್​ ದತ್​, ಆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಲ್ಲಿನ ನಾಯಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.

ಸಂಜಯ್​ ದತ್​ಗೆ ಯುಎಇ ಸರ್ಕಾರದಿಂದ ಸಿಕ್ತು ಗೋಲ್ಡನ್​ ವೀಸಾ; ಇದರಿಂದ ಸಿಗೋ ಸವಲತ್ತುಗಳೇನು ಗೊತ್ತಾ?
ಸಂಜಯ್ ದತ್​ ಗೋಲ್ಡನ್​ ವೀಸಾ ಪಡೆದರು
Follow us
ರಾಜೇಶ್ ದುಗ್ಗುಮನೆ
|

Updated on: May 26, 2021 | 8:11 PM

ಬಾಲಿವುಡ್​ ನಟ ಸಂಜಯ್​ ದತ್​ ಅವರಿಗೆ ಯನೈಟೆಡ್​​ ಅರಬ್​ ಎಮಿರೇಟ್ಸ್​ (ಯುಎಇ) ಸರ್ಕಾರ ಗೋಲ್ಡನ್​ ವೀಸಾ ನೀಡಿದೆ. ಈ ಫಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅವರಿಗೆ ಗೋಲ್ಡನ್​ ವೀಸಾ ಸಿಕ್ಕಿರುವುದಕ್ಕೆ ಸಾಕಷ್ಟು ಜನರು ಶುಭಾಶಯ ಕೋರಿದ್ದಾರೆ.

ಗೋಲ್ಡನ್​ ವೀಸಾ ಪಡೆದುಕೊಂಡಿರುವ ಫೋಟೋ ಹಂಚಿಕೊಂಡಿರುವ ಸಂಜಯ್​ ದತ್​, ಆ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಲ್ಲಿನ ನಾಯಕರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಹೇಳಿದ್ದಾರೆ.

ಯುಎಇ ಪ್ರಧಾನ ಮಂತ್ರಿ ಹಾಗೂ ಉಪಾಧ್ಯಕ್ಷ ಶೇಖ್​ ಮೊಹ್ಮದ್​ ಬಿನ್​ ರಷೀದ್​ ಅಲ್​ ಮಕ್ತೌಮ್​ 10 ವರ್ಷಗಳ ಗೋಲ್ಡನ್​ ವೀಸಾ ನೀಡಲು ಕಳೆದ ಅಕ್ಟೋಬರ್​ ತಿಂಗಳಲ್ಲಿ ಅನುಮತಿ ನೀಡಿದ್ದರು. ಈ ಮೂಲಕ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

 ಏನಿದು ಗೋಲ್ಡನ್​ ವೀಸಾ?

ಬೇರೆ ರಾಷ್ಟ್ರದ ಆಯ್ದ ವ್ಯಕ್ತಿಗಳಿಗೆ ಯುಎಇ ಗೋಲ್ಡನ್​ ವೀಸಾ​ ನೀಡುತ್ತದೆ. ಇದನ್ನು ಪಡೆದವರು ಯುಎಇಯಲ್ಲಿ ಯಾವುದೇ ವಿಶೇಷ ಒಪ್ಪಿಗೆ ಇಲ್ಲದೆ, ಬದುಕ ಬಹುದು, ಕೆಲಸ ಮಾಡಬಹುದು, ಉದ್ಯಮ ನಡೆಸಬಹುದು. ಯುಎಇಯಲ್ಲಿನ ಕಂಪೆನಿ ಮೇಲೆ ಶೇ. 100ರಷ್ಟು ಒಡೆತನ ಹೊಂದುವ ಅವಕಾಶ ಸಿಗಲಿದೆ. ಈ ಅವಕಾಶ ಈ ಮೊದಲು ಇರಲಿಲ್ಲ.

 ‘ಕೆಜಿಎಫ್​ 2’ನಲ್ಲಿ ಸಂಜಯ್​ ದತ್​

ಸಂಜಯ್​ ದತ್​ ‘ಕೆಜಿಎಫ್​ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮುಖ್ಯ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ 13ರಂದು ಸಿನಿಮಾ ತೆರೆಗೆ ಬರುತ್ತಿದೆ. ಆದರೆ, ಕೊವಿಡ್​ ಕಾರಣದಿಂದ ಸಿನಿಮಾ ಮುಂದೂಡಲ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರವೇ ಸ್ಪಷ್ಟ ಚಿತ್ರಣ ಸಿಗಲಿದೆ. ಯಶ್​ ಮುಖ್ಯಭೂಮಿಕೆಯಲ್ಲಿದ್ದು, ಪ್ರಶಾಂತ್​ ನೀಲ್​ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ: ಸಂಜಯ್​ ದತ್​ ಮಗಳು ತ್ರಿಶಲಾ ಬಾಯ್​ ಫ್ರೆಂಡ್​ ಸತ್ತಿದ್ದು ಹೇಗೆ? ಸ್ಟಾರ್ ಪುತ್ರಿಗೆ ಕಿರಿಕಿರಿ ತಂದ ಪ್ರಶ್ನೆ!

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !