ನಗ್ನ ಮತ್ತು ಖಾಸಗಿ ಫೋಟೋ ಲೀಕ್ನಿಂದಾಗಿ ವಿವಾದ ಮಾಡಿಕೊಂಡ ಬಾಲಿವುಡ್ನ ಐದು ಖ್ಯಾತ ಸೆಲೆಬ್ರಿಟಿಗಳು
ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡು ಬೇಸರ ಹೊರ ಹಾಕಿದ್ದರು. ಈ ರೀತಿ ಲೀಕ್ಗೆ ಒಳಗಾಗಿ ವಿವಾದ ಸೃಷ್ಟಿಸಿದ ಐದು ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸೆಲೆಬ್ರಿಟಿಗಳ ಖಾಸಗಿ ಕ್ಷಣದ ಫೋಟೋ ಹಾಗೂ ವಿಡಿಯೋಗಳು ಲೀಕ್ ಆಗಿ ಅವರು ಪೇಚಿಗೀಡಾದ ಉದಾಹರಣೆ ಸಾಕಷ್ಟಿದೆ. ಈ ರೀತಿಯ ವಿಡಿಯೋ ಅಥವಾ ಫೋಟೋ ಲೀಕ್ ಆದಾಗ ಅವರು ಸಾಕಷ್ಟು ಟ್ರೋಲ್ಗೆ ಒಳಗಾಗುತ್ತಾರೆ. ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿಕೊಂಡು ಬೇಸರ ಹೊರ ಹಾಕಿದ್ದರು. ಈ ರೀತಿ ಲೀಕ್ಗೆ ಒಳಗಾಗಿ ವಿವಾದ ಸೃಷ್ಟಿಸಿದ ಐದು ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಾಧಿಕಾ ಆಪ್ಟೆ
ನಟಿ ರಾಧಿಕಾ ಆಪ್ಟೆ ವಿವಾದದ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ. ‘ಮ್ಯಾಡ್ಲಿ’ ಆ್ಯಂಥಾಲಜಿ ಸಿನಿಮಾದೊಳಗಿನ ‘ಕ್ಲೀನ್ ಶೇವನ್’ ಎಂಬ ಕಥೆಯಲ್ಲಿ ರಾಧಿಕಾ ನಟಿಸುತ್ತಿದ್ದರು. ಆಗ ಅವರ ಕೆಲವು ನಗ್ನ ದೃಶ್ಯಗಳು ಲೀಕ್ ಆಗಿದ್ದವು. ಆ ದೃಶ್ಯದಲ್ಲಿ ಇದ್ದಿದ್ದು ರಾಧಿಕಾ ಆಪ್ಟೆ ಎಂದು ಹೇಳಲಾಗಿತ್ತು. ಈ ಘಟನೆ ನಡೆದ ನಾಲ್ಕು ದಿನಗಳವರೆಗೆ ಅವರು ಮನೆಯಿಂದ ಹೊರ ಬಂದಿರಲಿಲ್ಲ. ಈ ಘಟನೆ ಅವರನ್ನು ತೀವ್ರ ಮುಜುಗರಕ್ಕೆ ಈಡು ಮಾಡಿತ್ತಂತೆ.
ರಣಬೀರ್-ಕತ್ರಿನಾ ಹಾಲಿಡೇ ಫೋಟೋ
ರಣಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ಕೆಲ ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಇಬ್ಬರೂ ಸಾಕಷ್ಟು ಅನ್ಯೋನ್ಯವಾಗಿದ್ದ ಸಮಯದಲ್ಲಿ ಇಬ್ಬರೂ ವಿದೇಶಕ್ಕೆ ತೆರಳಿದ್ದರು. ಈ ವೇಳೆ ಅವರು ತೆಗೆದುಕೊಂಡು ತೀರಾ ಖಾಸಗಿ ಎನಿಸಿದ ಫೋಟೋಗಳು ವೈರಲ್ ಆಗಿದ್ದವು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಶಾಹಿದ್-ಕರೀನಾ ಎಂಎಂಎಸ್
ಶಾಹಿದ್ ಕಪೂರ್ ಹಾಗೂ ಕರೀನಾ ಡೇಟಿಂಗ್ ನಡೆಸುತ್ತಿದ್ದರು ಎನ್ನುವ ವಿಚಾರ ಬಾಲಿವುಡ್ನಲ್ಲಿ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಕಿಸ್ ಮಾಡುತ್ತಿರುವ ಎಂಎಂಎಸ್ ಒಂದು ಸಾಕಷ್ಟು ವೈರಲ್ ಆಗಿತ್ತು. ಇದು ಸೆನ್ಸೇಷನ್ ಹುಟ್ಟು ಹಾಕಿತ್ತು ಅಲ್ಲದೆ, ಇದನ್ನು ಲೀಕ್ ಮಾಡಿದ್ದು ಯಾರು ಎನ್ನುವ ಚರ್ಚೆ ಕೂಡ ದೊಡ್ಡ ಮಟ್ಟದಲ್ಲಿ ನಡೆದಿತ್ತು.
ಸಾರಾ ಖಾನ್ ಬಾತ್ ಟಬ್ ಫೋಟೋ
ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾರಾ ಖಾನ್ ಬಾತ್ಟಬ್ನಲ್ಲಿ ಬೆತ್ತಲಾಗಿ ಕುಳಿತಿರುವ ಫೋಟೋ ಲೀಕ್ ಆಗಿತ್ತು. ಅವರ ಸಹೋದರಿ ಆರ್ಯಾ ಖಾನ್ ಇದನ್ನು ಅಚಾನಕ್ಕಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ತಕ್ಷಣಕ್ಕೆ ಇದನ್ನು ಡಿಲೀಟ್ ಮಾಡಿದರೂ ಕೂಡ ಅದಾಗಲೇ ತಡವಾಗಿತ್ತು. ಈ ಚಿತ್ರ ಸಾಕಷ್ಟು ವೈರಲ್ ಆಗಿತ್ತು.
ಹನ್ಸಿಕಾ ಮೋಟ್ವಾನಿ ಖಾಸಗಿ ಚಿತ್ರಗಳು
ಹನ್ಸಿಕಾ ಮೋಟ್ವಾನಿ ಖಾಸಗಿ ಚಿತ್ರಗಳು ಆನ್ಲೈನ್ನಲ್ಲಿ ಸೋರಿಕೆ ಆಗಿದ್ದವು. ಈ ಬಗ್ಗೆ ಅವರು ತೀವ್ರ ಅಸಮಾಧಾನ ಹೊರ ಹಾಕಿದ್ದರು. ನಾನು ಸಿನಿಮಾದಲ್ಲಿ ಬಿಕಿನಿ ಹಾಕಿಕೊಂಡು ಕಾಣಿಸಿಕೊಂಡಿದ್ದಿರಬಹುದು. ಆದರೆ, ಖಾಸಗಿ ಬದುಕಿನ ಚಿತ್ರಗಳು ಈ ರೀತಿಯಲ್ಲಿ ಲೀಕ್ ಆಗುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: Radhika Apte: ನಗ್ನ ವಿಡಿಯೋ ಲೀಕ್; 4 ದಿನ ಮನೆಯಿಂದ ಹೊರಬಂದಿರಲಿಲ್ಲ ನಟಿ ರಾಧಿಕಾ ಆಪ್ಟೆ
Published On - 6:51 pm, Wed, 26 May 21