AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್​ ದತ್​ ಮಗಳು ತ್ರಿಶಲಾ ಬಾಯ್​ ಫ್ರೆಂಡ್​ ಸತ್ತಿದ್ದು ಹೇಗೆ? ಸ್ಟಾರ್ ಪುತ್ರಿಗೆ ಕಿರಿಕಿರಿ ತಂದ ಪ್ರಶ್ನೆ!

ತ್ರಿಶಲಾ ಪ್ರಿಯಕರನ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಎದುರಾಗಿದೆ. ಆದರೆ ಆ ಪ್ರಶ್ನೆಯಿಂದ ತ್ರಿಶಲಾಗೆ ಸಿಕ್ಕಾಪಟ್ಟೆ ಕಿರಿಕಿರಿ ಆದಂತೆ ಕಾಣುತ್ತದೆ. ನೇರವಾಗಿ ಉತ್ತರಿಸುವ ಬದಲು, ಪ್ರಶ್ನೆ ಕೇಳಿದವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಜಯ್​ ದತ್​ ಮಗಳು ತ್ರಿಶಲಾ ಬಾಯ್​ ಫ್ರೆಂಡ್​ ಸತ್ತಿದ್ದು ಹೇಗೆ? ಸ್ಟಾರ್ ಪುತ್ರಿಗೆ ಕಿರಿಕಿರಿ ತಂದ ಪ್ರಶ್ನೆ!
ತ್ರಿಶಲಾ ದತ್​ - ಸಂಜಯ್​ ದತ್​
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Mar 17, 2021 | 7:56 PM

Share

ಜನಪ್ರಿಯ ನಟ ಸಂಜಯ್​ ದತ್​ ಅವರ ಮಗಳು ತ್ರಿಶಲಾ ದತ್​ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅನೇಕರಿಗೆ ಆಸಕ್ತಿ ಇದೆ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆಯೇ ತ್ರಿಶಲಾ ತಮ್ಮ ಫಾಲೋವರ್ಸ್​ ಜೊತೆ ಆಗಾಗ ಪ್ರಶ್ನೋತ್ತರ ನಡೆಸುತ್ತ ಇರುತ್ತಾರೆ. ಆದರೆ ಇತ್ತೀಚೆಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ತ್ರಿಶಲಾ ಅಪ್​ಸೆಟ್​ ಆಗಿದ್ದಾರೆ. ಪ್ರಶ್ನೆ ಕೇಳಿದವನಿಗೆ ಅವರು ಪಾಠ ಮಾಡಿದ್ದಾರೆ.

ಸಂಜಯ್​ ದತ್​ರ ಮೊದಲ ಪತ್ನಿ ರಿಚಾ ಶರ್ಮಾಗೆ ಜನಿಸಿದರು ತ್ರಿಶಲಾ. ಹೆಚ್ಚಾಗಿ ವಿದೇಶದಲ್ಲಿಯೇ ಇರುವ ಅವರು ಯುವಕನೊಬ್ಬನ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಆದರೆ ಆತನ ಅಕಾಲಿಕ ಮರಣ ಸಂಭವಿಸಿತು. ಅದರಿಂದ ವಿಚಲಿತರಾಗಿದ್ದ ತ್ರಿಶಲಾಗೆ ಸುಧಾರಿಸಿಕೊಳ್ಳಲು ತುಂಬ ಸಮಯ ಹಿಡಿಯಿತು. ಒಂದಷ್ಟು ಸಮಯ ಅವರು ಸೋಶಿಯಲ್​ ಮೀಡಿಯಾದಿಂದಲೂ ದೂರ ಉಳಿದುಕೊಂಡಿದ್ದರು. ಈಗ ಮತ್ತೆ ಅವರ ಪ್ರಿಯಕರನ ಸಾವಿನ ಸುದ್ದಿ ಚರ್ಚೆಗೆ ಬಂದಿದೆ.

ಇತ್ತೀಚೆಗೆ ತ್ರಿಶಲಾ ಅವರು ಇನ್​ಸ್ಟಾಗ್ರಾಮ್​ನಲ್ಲಿ Ask me anything ಎಂದು ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದರು. ಆಗ ಸಹಜವಾಗಿಯೇ ಒಬ್ಬರು ತ್ರಿಶಲಾ ಪ್ರಿಯಕರನ ಸಾವಿಗೆ ಕಾರಣ ಏನು ಎಂದು ಕೇಳಿದರು. ಆದರೆ ಆ ಪ್ರಶ್ನೆಯಿಂದ ತ್ರಿಶಲಾಗೆ ಸಿಕ್ಕಾಪಟ್ಟೆ ಕಿರಿಕಿರಿ ಆದಂತೆ ಕಾಣುತ್ತದೆ. ನೇರವಾಗಿ ಉತ್ತರಿಸುವ ಬದಲು, ಪ್ರಶ್ನೆ ಕೇಳಿದವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ತುಂಬ ವ್ಯಂಗ್ಯದ ದಾಟಿಯಲ್ಲಿ ಅವರು ಉತ್ತರ ನೀಡಿದ್ದಾರೆ.

‘ನಿಮ್ಮ ಪ್ರಶ್ನೆಯನ್ನು ನಾವು ಪ್ರಶಂಸಿಸುತ್ತೇನೆ. ಮನುಷ್ಯರ ಕೌತುಕ ಬುದ್ಧಿಯ ಬಗ್ಗೆ ಪ್ರಾಮಾಣಿಕವಾಗಿ ಇರೋಣ. ನಿಮಗೆ ಇದು ಸಂಬಂಧಪಡುವ ವಿಷಯವೇ ಅಲ್ಲದಿದ್ದರೂ ಒಬ್ಬ ವ್ಯಕ್ತಿ ಹೇಗೆ ಸತ್ತರು ಎಂದು ತಿಳಿದುಕೊಳ್ಳಲು ಬಯಸುತ್ತೀರಿ ಅಲ್ಲವೇ? ಇಂಥ ಪ್ರಶ್ನೆಯನ್ನು ಕೇಳುವುದರಿಂದ ಏನು ಪ್ರಯೋಜನೆ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಬೇಕು. ಇದರಿಂದ ನೊಂದ ವ್ಯಕ್ತಿಗೆ ಸಮಾಧಾನವೂ ಆಗುವುದಿಲ್ಲ. ಸತ್ತ ವ್ಯಕ್ತಿ ಮರಳಿ ಬರುವುದೂ ಇಲ್ಲ’ ಎಂದು ತ್ರಿಶಲಾ ತಿವಿದಿದ್ದಾರೆ.

ಇದನ್ನೂ ಓದಿ: ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್

ಹಿಂದಿ ಭಾಷಿಕರಿಂದ ಅವಮಾನಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದ ಈ ನಟಿ ಇಂದು ಬಾಲಿವುಡ್​ನ ಸ್ಟಾರ್​ ಕಲಾವಿದೆ!