AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲಗೋಕೆ ಬಂದಿದ್ದೀರಾ ಅಥವಾ ಟಾಸ್ಕ್​ ಆಡೋಕಾ? ಶುಭಾಗೆ ಅರವಿಂದ್​ ಟಾಂಗ್​​

ನಮಗೆ ಬೆಡ್​ ರೂಂ ಮರಳಿ ಸಿಗುತ್ತದೆ ಎಂದು ಭಾವಿಸಿದ್ದೆವು. ಆದರೆ, ನನ್ನ ಊಹೆ ತಪ್ಪಾಗಿದೆ. ಈಗ ನಮಗೆ ಬೆಡ್​ರೂಂನ ಬೆಲೆ ಗೊತ್ತಾಗುತ್ತಿದೆ ಎಂದು ರಘು ಗೌಡ ಹೇಳಿದ್ದಾರೆ.

ಮಲಗೋಕೆ ಬಂದಿದ್ದೀರಾ ಅಥವಾ ಟಾಸ್ಕ್​ ಆಡೋಕಾ? ಶುಭಾಗೆ ಅರವಿಂದ್​ ಟಾಂಗ್​​
ಶುಭಾ-ಅರವಿಂದ್​
ರಾಜೇಶ್ ದುಗ್ಗುಮನೆ
| Edited By: |

Updated on:Mar 17, 2021 | 10:32 PM

Share

ಶಮಂತ್​ ಅಲಿಯಾಸ್​ ಬ್ರೋ ಗೌಡ ಅವರ ಸ್ವಾರ್ಥಕ್ಕೆ ಇಡೀ ಮನೆಯವರು ಬಲಿ ಪಶು ಆಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಬ್ರೋ ಗೌಡ ಮಾಡಿದ ಒಂದೇ ತಪ್ಪಿಗೆ ಇಡೀ ಮನೆಯಲ್ಲಿ ರಾಮಾಯಣವೇ ನಡೆದು ಹೋಗಿದೆ. ಸದ್ಯ, ಬಿಗ್​ ಬಾಸ್​ ಮನೆ ಮಂದಿಯವರಿಗೆ ಬೆಡ್​ ರೂಂ ಬೆಲೆ ಗೊತ್ತಾಗುತ್ತಿದೆ. ಇದಕ್ಕಾಗಿ ಬೆಡ್​ಗಾಗಿ ಕಿತ್ತಾಟ ಹೊಡೆದಾಟ ನಡೆದಿದೆ. ಕಳೆದ ವಾರ ಮೈಕ್​ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಈ ಮೂಲಕ ಶಮಂತ್​ ಅವರು ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದರು. ಅದಕ್ಕೆ ಶಿಕ್ಷೆಯಾಗಿ ಬಿಗ್​ ಬಾಸ್​ ಮೂರನೇ ವಾರದ ಎಲಿಮಿನೇಷನ್​ಗೆ ಶಮಂತ್​ ನೇರವಾಗಿ ನಾಮಿನೇಟ್​ ಆಗಬೇಕು ಅಥವಾ ಮನೆಯವರೆಲ್ಲರೂ ಬೆಡ್​ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎನ್ನುವ ಕಂಡೀಷನ್​ ಹಾಕಿದ್ದರು ಸುದೀಪ್​. ಮನೆಯವರೆಲ್ಲರೂ ಶಮಂತ್​ಗಾಗಿ ಬೆಡ್​ರೂಂ ಬಿಟ್ಟುಕೊಟ್ಟಿದ್ದರು. ಈಗ ಮನೆಯವರೆಲ್ಲರಿಗೂ ಬೆಡ್​ ರೂಂನ ಬೆಲೆ ಗೊತ್ತಾಗುತ್ತಿದೆ. ಅದನ್ನು ಪಡೆದುಕೊಳ್ಳಲು ಎಲ್ಲರೂ ಕಿತ್ತಾಡುತ್ತಿದ್ದಾರೆ.

ಟಾಸ್ಕ್​ವೊಂದರಲ್ಲಿ ಗೆದ್ದ ಅರವಿಂದ್​-ದಿವ್ಯಾ ಉರುಡುಗ ಜೋಡಿಗೆ ವಿಶೇಷವಾದ ಚಾರ್ಜರ್​ ಸಿಕ್ಕಿತು. ಅದನ್ನು ಅವರೇ ಇಟ್ಟುಕೊಳ್ಳಬಹುದು ಅಥವಾ ಅದನ್ನು ತ್ಯಾಗ ಮಾಡಿ ಮನೆಯ ಎಲ್ಲರಿಗೂ ಬೆಡ್​ ರೂಮ್​ ಕೊಡಿಸಬಹುದು. ಈ ಎರಡು ಅವಕಾಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ದಿವ್ಯಾ ಮತ್ತು ಅರವಿಂದ್​ 10 ನಿಮಿಷ ಸಮಯಾವಕಾಶ ಕೇಳಿದರು. ಖಂಡಿತವಾಗಿಯೂ ಅವರು ಆ ಚಾರ್ಜರ್​ ತ್ಯಾಗ ಮಾಡಿ, ಮನೆಯ ಸದಸ್ಯರಿಗೆ ಬೆಡ್​ ರೂಮ್​ ಕೊಡಿಸುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರ ಊಹೆ ತಪ್ಪಾಯಿತು. ಇದು ಒಂದು ಗೇಮ್​. ಇಲ್ಲಿ ಭಾವನೆಗಳಿಗೆ ಬಲಿ ಆಗಬಾರದು ಎಂಬ ಕಾರಣಕ್ಕೆ ದಿವ್ಯಾ ಮತ್ತು ಅರವಿಂದ್​ ಚಾರ್ಜರ್​ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದ್ದರು.

ಈ ಬಗ್ಗೆ ಮಾತನಾಡಿರುವ ರಘು ಗೌಡ, ನಮಗೆ ಬೆಡ್​ ರೂಂ ಮರಳಿ ಸಿಗುತ್ತದೆ ಎಂದು ಭಾವಿಸಿದ್ದೆವು. ಆದರೆ, ನನ್ನ ಊಹೆ ತಪ್ಪಾಗಿದೆ. ಈಗ ನಮಗೆ ಬೆಡ್​ರೂಂನ ಬೆಲೆ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಪ್ರಶಾಂತ್​ ಸಂಬರಗಿ ಕೂಡ ಹೌದು ಎಂದಿದ್ದಾರೆ. ಇನ್ನು, ದಿವ್ಯಾ ಉರುಡುಗ ಎಲ್ಲರ ಬಳಿ ಹೋಗಿ ಸಾರಿ ಕೇಳುತ್ತಿದ್ದರೂ ಯಾರೂ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಈ ವಿಚಾರದ ಬಗ್ಗೆ ಮಾತನಾಡಿರುವ ಅರವಿಂದ್, ಇದು ಟಾಸ್ಕ್​. ಟಾಸ್ಕ್​ ರೂಪದಲ್ಲೇ ಸ್ವೀಕರಿಸಬೇಕು. ಅದನ್ನು ಬಿಟ್ಟು ದೊಡ್ಡ ದೊಡ್ಡ ಮಾತುಗಳನ್ನು ಆಡುವುದಲ್ಲ. ಅಷ್ಟಕ್ಕೂ ಇವರು ಟಾಸ್ಕ್ ಮಾಡೋಕೆ ಬಂದಿದ್ದಾರಾ ಅಥವಾ ಗೇಮ್​ ಆಡೋದಕ್ಕಾ ಎಂದು ಕೇಳುವ ಮೂಲಕ ಶುಭಾ ಪೂಂಜಾಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

Published On - 10:19 pm, Wed, 17 March 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್