ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

ಶಂಕರ್​ ಅಶ್ವತ್ಥ್​ ಈ ಸೀಸನ್​​ನ ಅತಿ ಹಿರಿಯ ಸ್ಪರ್ಧಿ. ಇದೇ ಕಾರಣಕ್ಕೆ ಮನೆ ಮಂದಿಗೆಲ್ಲ ಅವರ ಮೇಲೆ ವಿಶೇಷ ಗೌರವವಿದೆ. ಈ ವಿಚಾರದ ಬಗ್ಗೆ ಶಂಕರ್​ ಅಶ್ವತ್ಥ್​ ಭಿನ್ನವಾಗಿ ಮಾತನಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..
ಶಂಕರ್​ ಆಶ್ವತ್ಥ್​
Follow us
ರಾಜೇಶ್ ದುಗ್ಗುಮನೆ
|

Updated on:Mar 17, 2021 | 8:31 PM

ಬಿಗ್​ ಬಾಸ್​ ಮನೆಯಲ್ಲಿ ಈಗ 15 ಮಂದಿ ಇದ್ದಾರೆ. ಒಬ್ಬೊಬ್ಬರದ್ದೂ ಒಂದೊಂದು ಮುಖ. ಇಷ್ಟು ದಿನ ತಮ್ಮ ನಿಜವಾದ ಮುಖವನ್ನು ಮುಚ್ಚಿಡಲು ಪ್ರಯತ್ನಿಸಿದ್ದವರ ಅಸಲಿ ಬಣ್ಣ ಹೊರಬರುತ್ತಿದೆ. ರೀತಿ ಬಿಗ್​ ಬಾಸ್​ ಮನೆಯಲ್ಲಿರುವ ಶಂಕರ್​ ಅಶ್ವತ್ಥ್​ ಅವರ ನಿಜವಾದ ಬಣ್ಣ ಈಗ ಬಯಲಾಗಿದೆ. ಶಂಕರ್​ ಅಶ್ವತ್ಥ್​ ಈ ಸೀಸನ್​​ನ ಅತಿ ಹಿರಿಯ ಸ್ಪರ್ಧಿ. ಇದೇ ಕಾರಣಕ್ಕೆ ಮನೆ ಮಂದಿಗೆಲ್ಲ ಅವರ ಮೇಲೆ ವಿಶೇಷ ಗೌರವವಿದೆ. ಎರಡು ಬಾರಿ ಅವರು ಎಲಿಮಿನೇಷನ್​ಗೆ ನಾಮಿನೇಟ್​ ಆದಾಗ ಅವರನ್ನು ಕ್ಯಾಪ್ಟನ್​ ಸೇವ್​ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು. ಮನೆ ಮಂದಿ ನೀಡುತ್ತಿರುವ ವಿಶೇಷ ಗೌರವದಿಂದ ಅವರು ಮುಕ್ತಿ ಹೊಂದಬೇಕು ಎಂದು ಬಯಸಿದಂತೆ ಕಾಣುತ್ತಿದೆ.

ಟಾಸ್ಕ್​ವೊಂದರಲ್ಲಿ ಗೆದ್ದ ಅರವಿಂದ್​-ದಿವ್ಯಾ ಉರುಡುಗ ಜೋಡಿಗೆ ವಿಶೇಷವಾದ ಚಾರ್ಜರ್​ ಸಿಕ್ಕಿತು. ಅದನ್ನು ಅವರೇ ಇಟ್ಟುಕೊಳ್ಳಬಹುದು ಅಥವಾ ಅದನ್ನು ತ್ಯಾಗ ಮಾಡಿ ಮನೆಯ ಎಲ್ಲರಿಗೂ ಬೆಡ್​ ರೂಮ್​ ಕೊಡಿಸಬಹುದು. ಈ ಎರಡು ಅವಕಾಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ದಿವ್ಯಾ ಮತ್ತು ಅರವಿಂದ್​ 10 ನಿಮಿಷ ಸಮಯಾವಕಾಶ ಕೇಳಿದರು. ಖಂಡಿತವಾಗಿಯೂ ಅವರು ಆ ಚಾರ್ಜರ್​ ತ್ಯಾಗ ಮಾಡಿ, ಮನೆಯ ಸದಸ್ಯರಿಗೆ ಬೆಡ್​ ರೂಮ್​ ಕೊಡಿಸುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರ ಊಹೆ ತಪ್ಪಾಯಿತು. ದಿವ್ಯಾ ಮತ್ತು ಅರವಿಂದ್​ ಚಾರ್ಜರ್​ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ನಿರ್ಧರಿಸಿದರು. ಈ ವಿಚಾರದಲ್ಲಿ ಮನೆ ಮಂದಿ ಬೇಸರಗೊಂಡಿದ್ದಾರೆ. ಆದರೆ ಶಂಕರ್​ ಅಶ್ವತ್ಥ್​ ಮಾತ್ರ ಭಿನ್ನವಾಗಿ ಉತ್ತರಿಸಿದ್ದಾರೆ.

ನನಗೆ ವಯಸ್ಸಾಗಿದೆ, ನನಗೆ ತೊಂದರೆ ಆಗಿದೆ ಎಂದು ಭಾವಿಸಬೇಡಿ. ಎಲ್ಲರಿಗೂ ಹೇಗೆ ಹೇಳ್ತಾರೋ ಹಾಗೆ ಮಾಡ್ತೇನೆ. ನನ್ನ ಬಗ್ಗೆ ಚಿಂತಿಸಬೇಡಿ. ಬಿಗ್​ ಬಾಸ್​ ಕೊಟ್ಟಿದ್ದನ್ನು ಇಟ್ಟುಕೊಳ್ಳುವ ಎಲ್ಲಾ ಹಕ್ಕು ನಿಮಗಿದೆ ಎಂದು ದಿವ್ಯಾ ಹಾಗೂ ಅರವಿಂದ್​ ಬಳಿ ಹೇಳಿದ್ದಾರೆ ಶಂಕರ್​ ಅಶ್ವತ್ಥ್​. ಈ ವಿಚಾರ ಕೇಳಿ ದಿವ್ಯಾ-ಅರವಿಂದ್ ನಿಜಕ್ಕೂ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada: ಮನೆಯೊಳಗಿನ ಕಷ್ಟ ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ ನಿಧಿ ಸುಬ್ಬಯ್ಯ, ಶುಭಾ ಪೂಂಜಾ!

Published On - 8:29 pm, Wed, 17 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ