ಹೆಂಡತಿಯನ್ನು ನೆನಪಿಸಿಕೊಂಡು ಗಳಗಳನೆ ಅತ್ತ ಪ್ರಶಾಂತ್​ ಸಂಬರಗಿ..

ಮನೆಯಲ್ಲಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​ ಸೇರಿ ಅನೇಕರು ಅತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಪ್ರಶಾಂತ್​ ಅತ್ತಂತಾಗಿದೆ. 

ಹೆಂಡತಿಯನ್ನು ನೆನಪಿಸಿಕೊಂಡು ಗಳಗಳನೆ ಅತ್ತ ಪ್ರಶಾಂತ್​ ಸಂಬರಗಿ..
ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 18, 2021 | 7:10 AM

ಬಿಗ್​ ಬಾಸ್​ ಮನೆ ಸೇರಿರುವ ಸ್ಟ್ರಾಂಗ್​ ಅಭ್ಯರ್ಥಿ ಯಾರು ಎಂದು ಕೇಳಿದರೆ ಬಹುತೇಕರು ಪ್ರಶಾಂತ್​ ಸಂಬರಗಿ ಅವರ ಹೆಸರನ್ನು ಹೇಳುತ್ತಾರೆ. ಇದನ್ನು ಅವರು ಟಾಸ್ಕ್​ ಮೂಲಕವೂ ಸಾಬೀತು ಮಾಡಿದ್ದಾರೆ. ಯಾವುದೇ ವಿಚಾರಕ್ಕೂ ಪ್ರಶಾಂತ್​ ಅವರು ಎಮೋಷನಲ್​ ಆಗಿಲ್ಲ. ಈ ಕಾರಣಕ್ಕೇ ಅವರು ಅನೇಕ ಟಾಸ್ಕ್​ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆದರೆ, ಈಗ ಮಾತ್ರ ಅವರು ಹೆಂಡತಿಯನ್ನು ನೆನೆದು ಗಳಗಳನೆ ಅತ್ತಿದ್ದಾರೆ. ಬಿಗ್​ ಬಾಸ್​ ಮನೆ ಸೇರಿದ ಸ್ಪರ್ಧಿಗಳು ಮೂರನೇ ವಾರವನ್ನು ಕಳೆಯುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಯಾರಿಗೂ ಹೊರ ಜಗತ್ತಿನ ಸಂಪರ್ಕ ಇಲ್ಲ. ಮನೆಯವರ ಜತೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಇದೇ ವಿಚಾರಕ್ಕೆ ರಘು ತುಂಬಾನೇ ನೊಂದುಕೊ0ಡಿದ್ದರು. ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೂ ಬಂದಿದ್ದರು.

ಆದರೆ ಪ್ರಶಾಂತ್​ ಮಾತ್ರ ಒಂದೇ ಒಂದು ದಿನ ಮನೆಯವರನ್ನು ನೆನಪು ಮಾಡಿಕೊಂಡು ಅತ್ತಿಲ್ಲ. ಆದರೆ, ಬುಧವಾರ ಬಿಗ್​ ಬಾಸ್​ ಎದುರು ಪ್ರಶಾಂತ್​ ಅತ್ತಿದ್ದಾರೆ. ವಿಶೇಷ ರೂಂಗೆ ಬರುವಂತೆ ಪ್ರಶಾಂತ್​ಗೆ ಬಿಗ್​ ಬಾಸ್​ ಆಹ್ವಾನ ನೀಡಿದ್ದರು. ಈ ವೇಳೆ ನಿಮ್ಮ ಆರೋಗ್ಯ ಹೇಗಿದೆ ಎಂದು ಬಿಗ್​ ಬಾಸ್​ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್​ ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ಏನಾದ್ರೂ ಹೇಳೋದಿದೆಯಾ ಎಂದು ಬಿಗ್​ ಬಾಸ್​ ಕೇಳಿದರು.

ಇದಕ್ಕೆ ಅಳುತ್ತಲೇ ಉತ್ತರಿಸಿದ ಪ್ರಶಾಂತ್​, ನನ್ನ ಪತ್ನಿ ಆಯುರ್ವೇದಿಕ್​ ವೈದ್ಯೆ. ಅವರಿಗೆ ನನ್ನ ಧ್ವನಿ ಹೋಗಿರುವುದು ನೋಡಿ ಔಷಧ ಕಳುಹಿಸಿಕೊಟ್ಟಿದ್ದಾರೆ. ಅವರು ಮನೆಯಲ್ಲೇ ಕೂತು ನನ್ನ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಇಷ್ಟು ದಿನ ಅವರ ನೆನಪು ಆಗುತ್ತಾ ಇರಲಿಲ್ಲ. ಈಗ ಔಷಧ ಕಳುಹಿಸಿಕೊಟ್ಟಿದ್ದರಿಂದ ಅವಳ ನೆನಪಾಗುತ್ತಿದೆ ಎಂದರು. ನಂತರ ಕಣ್ಣು ಒರಿಸಿಕೊಂಡು ಸುಧಾರಿಸಿಕೊಂಡರು.

ಮನೆಯಲ್ಲಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್​ ಸೇರಿ ಅನೇಕರು ಅತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಪ್ರಶಾಂತ್​ ಅತ್ತಂತಾಗಿದೆ. ಅಲ್ಲದೆ, ಅನೇಕರಿಗೆ ಈ ವಿಚಾರ ಅಚ್ಚರಿ ಕೂಡ ಮೂಡಿಸಿದೆ.

ಇದನ್ನೂ ಓದಿ: ದಿವ್ಯಾ ಉರುಡುಗ ಮದುವೆ ಆಗುವ ಹುಡುಗ ಹೇಗಿರಬೇಕು​? ಬಿಗ್​ ಬಾಸ್​ನಲ್ಲಿ ಸತ್ಯ ಬಾಯ್ಬಿಟ್ಟ ಮಲೆನಾಡ ಹುಡುಗಿ!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್