ದಿವ್ಯಾ ಉರುಡುಗ ಮದುವೆ ಆಗುವ ಹುಡುಗ ಹೇಗಿರಬೇಕು​? ಬಿಗ್​ ಬಾಸ್​ನಲ್ಲಿ ಸತ್ಯ ಬಾಯ್ಬಿಟ್ಟ ಮಲೆನಾಡ ಹುಡುಗಿ!

ಊರವರನ್ನೆಲ್ಲ ಇಷ್ಟಪಟ್ಟುಕೊಂಡು ಬಂದು ನಂತರ ನನ್ನನ್ನೂ ಇಷ್ಟಪಟ್ಟರೆ ಅದರಲ್ಲಿ ಏನು ಅರ್ಥ ಇದೆ? ನಾನು ಇನ್ನೊಬ್ಬರಿಗೆ ಆಪ್ಷನ್​ ಆಗಿ ಇರಬಾರದು ಎಂದು ದಿವ್ಯಾ ಹೇಳಿದ್ದಾರೆ. ಶಮಂತ್​, ಗೀತಾ ಜೊತೆ ಅವರು ಚರ್ಚೆ ಮಾಡಿದ್ದಾರೆ.

ದಿವ್ಯಾ ಉರುಡುಗ ಮದುವೆ ಆಗುವ ಹುಡುಗ ಹೇಗಿರಬೇಕು​? ಬಿಗ್​ ಬಾಸ್​ನಲ್ಲಿ ಸತ್ಯ ಬಾಯ್ಬಿಟ್ಟ ಮಲೆನಾಡ ಹುಡುಗಿ!
ದಿವ್ಯಾ ಉರುಡುಗ
Madan Kumar

| Edited By: Rajesh Duggumane

Mar 17, 2021 | 6:43 PM

ಬಿಗ್​ ಬಾಸ್​ ಮನೆಯೊಳಗಿನ ಡ್ರಾಮಾ ಒಂದೆರಡಲ್ಲ. ಪ್ರತಿ ಎಪಿಸೋಡ್​ನಲ್ಲಿಯೂ ಇಂಟರೆಸ್ಟಿಂಗ್​ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಪ್ರೀತಿ-ಪ್ರೇಮದ ವಿಚಾರ ಬಂದರೆ ಎಲ್ಲರ ಕಿವಿ ಚುರುಕಾಗುತ್ತದೆ. ಮೊದಲು ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ನಡುವಿನ ಲವ್ವಿ ಡವ್ವಿ ಹೆಚ್ಚು ಗಮನ ಸೆಳೆಯಿತು. ಈಗ ದಿವ್ಯಾ ಉರುಡುಗ ಕೂಡ ಪ್ರೇಮ್​ ಕಹಾನಿಯ ವಿಚಾರದಲ್ಲಿ ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ. ಅವರ ಹೃದಯ ಗೆಲ್ಲಲು ಗಂಡ್ಮಕ್ಕಳು ಪ್ರಯತ್ನ ಮಾಡ್ತಾ ಇದ್ದಾರೆ.

ಒಂದೆರಡು ದಿನ ದಿವ್ಯಾ ಉರುಡುಗ ಜೊತೆ ಮಂಜು ಪಾವಗಡ ಫ್ಲರ್ಟ್​ ಮಾಡಿದರು. ಅಲ್ಲದೇ ಶಮಂತ್​ ಬ್ರೋ ಗೌಡ ಕೂಡ ದಿವ್ಯಾ ಬಗ್ಗೆ ಆಸಕ್ತಿ ಹೊಂದಿರುವುದು ಒಮ್ಮೆಮ್ಮೆ ಪರೋಕ್ಷವಾಗಿ, ಕೆಲವೊಮ್ಮೆ ನೇರವಾಗಿ ಗೊತ್ತಾಗುತ್ತಿದೆ. ಆದರೆ ಇದರ ನಡುವೆ ದಿವ್ಯಾ ಗಮನ ಯಾಕೋ ಸ್ವಲ್ಪ ಅರವಿಂದ್​ ಕಡೆಗೆ ಹರಿಯುತ್ತಿದೆ. ಇತ್ತೀಚಿನ ಟಾಸ್ಕ್​ಗಳಲ್ಲಿ ಅದು ಎದ್ದು ಕಾಣುತ್ತಿತ್ತು. ಅದೇ ವಿಚಾರವನ್ನು ಇಟ್ಟುಕೊಂಡು ಮನೆಯ ಇತರೆ ಸದಸ್ಯರು ದಿವ್ಯಾ ಮತ್ತು ಅರವಿಂದ್​ಗೆ ಕಾಲೆಳೆಯುತ್ತಿದ್ದಾರೆ.

ಆದರೆ ನಿಜವಾಗಿಯೂ ದಿವ್ಯಾ ಮನಸ್ಸಿನಲ್ಲಿ ಏನಿದು ಎಂಬುದನ್ನು ತಿಳಿದುಕೊಳ್ಳಲು ಇತ್ತೀಚೆಗೆ ಶಮಂತ್ ಪ್ರಯತ್ನಿಸಿದರು. ಟಾಸ್ಕ್​ ಇಲ್ಲದೇ ಇರುವಾಗ ಮದುವೆ ಪ್ಲ್ಯಾನ್​ ಬಗ್ಗೆ ದಿವ್ಯಾ ಬಾಯಿ ಬಿಟ್ಟಿದ್ದಾರೆ. ‘ಸುಮ್ಮನೆ ನಾನು ಹಾಗೆ ಹೇಳ್ತೀನಿ ಅಷ್ಟೇ. ಆದರೆ ಮದುವೆ ಬಗ್ಗೆ ನಾನಿನ್ನೂ ಆಲೋಚನೆ ಮಾಡಿಲ್ಲ. ಅಪ್ಪ-ಅಮ್ಮ ಹುಂ ಅಂದರೆ ಮುಗಿಯಿತು. ಆದರೆ ನಾನು ಇಷ್ಟಪಟ್ಟರೆ ಮಾತ್ರ ಅವರು ಒಪ್ಪಿಕೊಳ್ಳುತ್ತಾರೆ’ ಎಂದು ದಿವ್ಯಾ ಹೇಳಿದರು. ಹಾಗಾದರೆ ನಿನಗೆ ಇಷ್ಟ ಆಗಬೇಕಾದರೆ ಆ ಹುಡುಗ ಹೇಗಿರಬೇಕು ಎಂದು ಗೀತಾ ಮರು ಪ್ರಶ್ನೆ ಮಾಡಿದರು.

‘ಇಷ್ಟ ಆಗಬೇಕು ಅಂದರೆ ಆಗಬೇಕು ಅಷ್ಟೇ. ಅದು ಹೇಗೆ ಎಂದು ಹೇಳೋಕೆ ಬರಲ್ಲ. ನನ್ನನ್ನು ಇಷ್ಟಪಡುವವರು ನನ್ನನ್ನು ಮಾತ್ರ ಇಷ್ಟಪಡಬೇಕು. ಊರವರನ್ನೆಲ್ಲ ಇಷ್ಟಪಟ್ಟುಕೊಂಡು ಬಂದು ನಂತರ ನನ್ನನ್ನೂ ಇಷ್ಟಪಟ್ಟರೆ ಅದರಲ್ಲಿ ಏನು ಅರ್ಥ ಇದೆ? ನಾನು ಇನ್ನೊಬ್ಬರಿಗೆ ಆಪ್ಷನ್​ ಆಗಿ ಇರಬಾರದು’ ಎಂದರು. ಆ ಹುಡುಗನಿಗೆ ಏನಾದರೂ ಫ್ಲ್ಯಾಶ್​ ಬ್ಯಾಕ್​ ಇದ್ದರೆ ಓಕೆನಾ ಎಂದು ಶಮಂತ್​ ಡೌಟ್​ ಕೇಳಿದರು. ‘ಫ್ಲ್ಯಾಶ್​ ಬ್ಯಾಕ್​ ಇದ್ದರೆ ಓಕೆ. ನಾನು ಹಳೆಯದನ್ನು ಕೇಳುವುದೇ ಇಲ್ಲ’ ಎಂದಿದ್ದಾರೆ ದಿವ್ಯಾ ಉರುಡುಗ.

ಸದ್ಯ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅವರು ಅರವಿಂದ್​ಗೆ ಜೋಡಿ ಆಗಿದ್ದಾರೆ. ಅವರಿಬ್ಬರ ನಡುವೆ ಪ್ರೇಮ್​ ಕಹಾನಿ ಇದೆಯೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಇಬ್ಬರೂ ಪ್ರಾಕ್ಟಿಕಲ್​ ಆಗಿ ಆಟ ಆಡುತ್ತಿದ್ದಾರೆ. ಯಾವುದೇ ಎಮೋಷನ್ಸ್​ಗೆ ಒಳಗಾಗಬಾರದು. ಟಾಸ್ಕ್​ನಲ್ಲಿ ಗೆಲ್ಲುವ ಅವಕಾಶವನ್ನು ಮಿಸ್​ ಮಾಡಿಕೊಳ್ಳುಬಾರದು ಎಂಬ ತೀರ್ಮಾನಕ್ಕೆ ದಿವ್ಯಾ ಮತ್ತು ಅರವಿಂದ್​ ಬಂದಿದ್ದಾರೆ. ಇರುಬ 15 ಜನರಲ್ಲಿ ಮೂರನೇ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮನೆ ಮಾಡಿದೆ.

ಇದನ್ನೂ ಓದಿ: ರಹಸ್ಯವಾಗಿ ಮೊಬೈಲ್​ ಬಳಸ್ತಿದ್ದಾರಾ ಬಿಗ್​ ಬಾಸ್​ ಸ್ಪರ್ಧಿಗಳು? ಜನರ ಅನುಮಾನಕ್ಕೆ ಇಲ್ಲಿದೆ ಉತ್ತರ!

ಕೊರೊನಾ ಪಾಸಿಟಿವ್​ ಆಗಿದ್ದರೂ ಊರೆಲ್ಲ ಸುತ್ತಾಡಿದ ಬಿಗ್​ ಬಾಸ್​ ಸ್ಪರ್ಧಿ! ಕೇಸ್​ ಜಡಿದು ಬುದ್ಧಿ ಕಲಿಸಿದ ಅಧಿಕಾರಿಗಳು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada