ಅರವಿಂದ್ ದೇಹದಲ್ಲಿರುವ 16 ಸ್ಕ್ರೂ, ರಾಡ್, ಪ್ಲೇಟ್ ತೂಕವೆಷ್ಟು? ದಿವ್ಯಾ ಬಳಿ ಬಿಚ್ಚಿಟ್ಟ ಅಚ್ಚರಿ ವಿಚಾರ
ದೇಹದಲ್ಲಿ ಎಲ್ಲೆಲ್ಲಿ ಮಚ್ಚೆ ಇದೆ ಎಂಬುದನ್ನು ದಿವ್ಯಾ ಬಳಿ ಹೇಳಿಕೊಳ್ಳುತ್ತಿದ್ದರು ಅರವಿಂದ್. ಆಗ ದೇಹಕ್ಕೆ ಹಾಕಿರುವ ಸ್ಕ್ರೂಗಳ ಬಗ್ಗೆ ಹೇಳಿಕೊಂಡಿದ್ದಾರೆ.
ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿಯಾಗಿ ಟಾಸ್ಕ್ನಲ್ಲಿ ಆಡುತ್ತಿದ್ದಾರೆ. ಅವರ ಜೋಡಿ ಅದ್ಭುತವಾಗಿ ಆಡುತ್ತಿರುವುದರಿಂದ ಟಾಸ್ಕ್ನಲ್ಲಿ ಗೆಲ್ಲುತ್ತಿದ್ದಾರೆ. ಇಬ್ಬರೂ ಕೂತು ಮಾತನಾಡುವಾಗ ವೈಯಕ್ತಿಕ ವಿಚಾರವನ್ನು ಅರವಿಂದ್ ಹಂಚಿಕೊಂಡಿದ್ದಾರೆ. ಅದೂ ದೇಹದಲ್ಲಿರುವ ಸ್ಕ್ರೂ ಬಗ್ಗೆ. ಅದರ ತೂಕ, ಅದನ್ನು ಎಲ್ಲಿ ಹಾಕಿದ್ದಾರೆ ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ವೃತ್ತಿಪರ ಬೈಕರ್ ಆಗಿ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ರ್ಯಾಲಿಗಳಲ್ಲಿ ಪ್ರಶಸ್ತಿ ಗೆದ್ದಿರುವ ಟಿವಿಎಸ್ ರೇಸಿಂಗ್ ತಂಡದ ರೈಡರ್ ಅರವಿಂದ್. ಬೈಕ್ ರೇಸಿಂಗ್ ವೇಳೆ ಬಹಳಷ್ಟು ಬಾರಿ ಅವರಿಗೆ ಅಪಘಾತ ಕೂಡ ಆಗಿತ್ತು. ಹೀಗಾಗಿ, ಅವರ ದೇಹದಲ್ಲಿ ಸಾಕಷ್ಟು ಸ್ಕ್ರೂಗಳಿವೆ. ಎಷ್ಟು ಸ್ಕ್ರೂಗಳಿವೆ ಎಂಬುದನ್ನು ದಿವ್ಯಾ ಬಳಿ ಅರವಿಂದ್ ಹೇಳಿಕೊಂಡಿದ್ದಾರೆ.
ದೇಹದಲ್ಲಿ ಎಲ್ಲೆಲ್ಲಿ ಮಚ್ಚೆ ಇದೆ ಎಂಬುದನ್ನು ದಿವ್ಯಾ ಬಳಿ ಹೇಳಿಕೊಳ್ಳುತ್ತಿದ್ದರು ಅರವಿಂದ್. ಆಗ ದೇಹಕ್ಕೆ ಹಾಕಿರುವ ಸ್ಕ್ರೂಗಳ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ದೇಹದಲ್ಲಿ 16 ಸ್ಕ್ರೂಗಳಿವೆ, ಒಂದು ರಾಡ್ ಒಂದು ಪ್ಲೇಟ್ ಇದೆ ಅಂದ್ರೆ ನಂಬ್ತೀರಾ ಎಂದು ಕೇಳಿದ್ದರು. ಈ ವಿಚಾರ ಕೇಳಿ ದಿವ್ಯಾ ಅಕ್ಷರಶಃ ಬೆಚ್ಚಿ ಬಿದ್ದಿದ್ದರು.
ಹಾಗಾದರೆ, ಈ ಸ್ಕ್ರೂ, ರಾಡ್ ಮತ್ತು ಪ್ಲೇಟ್ನ ತೂಕ ಎಷ್ಟಿರಬಹುದು? ಒಂದು ಕೆಜಿ ತೂಕವೇ ದಾಟಬಹುದೇ? ಎಂದು ಪ್ರಶ್ನೆ ಮಾಡಿದ್ದಾರೆ ದಿವ್ಯಾ. ಇದಕ್ಕೆ ಉತ್ತರಿಸಿದ ಅರವಿಂದ್, ಇಲ್ಲಾ ಇಲ್ಲಾ ಅವೆಲ್ಲವೂ ಸಾಧಾರಣ ಸ್ಕ್ರೂ-ರಾಡ್ನಂತಲ್ಲ. ಇವೆಲ್ಲ ತುಂಬಾನೇ ಹಗುರವಿರುತ್ತದೆ. ಇನ್ನೂ ಅರ್ಥವಾಗೆ ಹೇಳಬೇಕು ಎಂದಾದರೆ, ಇವು ಗ್ರಾಂನಲ್ಲಿ ಇರುತ್ತವೆ ಎಂದರು.
ಇದನ್ನೂ ಓದಿ: ದಿವ್ಯಾ ಉರುಡುಗ ಮದುವೆ ಆಗುವ ಹುಡುಗ ಹೇಗಿರಬೇಕು? ಬಿಗ್ ಬಾಸ್ನಲ್ಲಿ ಸತ್ಯ ಬಾಯ್ಬಿಟ್ಟ ಮಲೆನಾಡ ಹುಡುಗಿ!
Bigg Boss Kannada 8: ಅರವಿಂದ್ ಪ್ರಪೋಸಲ್ಗೆ ಓಕೆ ಎಂದ ದಿವ್ಯಾ ಉರುಡುಗ!