Bigg Boss Kannada 8: ಅರವಿಂದ್​ ಪ್ರಪೋಸಲ್​​ಗೆ ಓಕೆ ಎಂದ ದಿವ್ಯಾ ಉರುಡುಗ!

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡಗ ಹಾಗೂ ಅರವಿಂದ್​ ಕೆಪಿ ಮದುವೆ ವಿಚಾರ ಚರ್ಚೆ ಮಾಡಿದ್ದರು. ಇದಾದ ಬೆನ್ನಲ್ಲೇ ಅರವಿಂದ್​ ಇಟ್ಟ ಪ್ರಪೋಸ್​ಗೆ ದಿವ್ಯಾ ಉರುಡುಗ ಓಕೆ ಎಂದಿದ್ದಾರೆ!

Bigg Boss Kannada 8: ಅರವಿಂದ್​ ಪ್ರಪೋಸಲ್​​ಗೆ ಓಕೆ ಎಂದ ದಿವ್ಯಾ ಉರುಡುಗ!
ಅರವಿಂದ್​-ದಿವ್ಯಾ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 16, 2021 | 12:52 PM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆಪಿ ಮದುವೆ ವಿಚಾರ ಚರ್ಚೆ ಮಾಡಿದ್ದರು. ಈ ವಿಚಾರವನ್ನು​ ವೀಕೆಂಡ್​ನಲ್ಲಿ ಸುದೀಪ್ ಕೂಡ ಮಾತನಾಡಿದ್ದರು. ಅಷ್ಟೇ ಅಲ್ಲ, ಅರವಿಂದ್​ಗೆ ಆಲ್​ ದಿ ಬೆಸ್ಟ್​ ಕೂಡ ಹೇಳಿದ್ದರು. ಇದಾದ ಬೆನ್ನಲ್ಲೇ ಅರವಿಂದ್​ ಇಟ್ಟ ಪ್ರಪೋಸ್​ಗೆ ದಿವ್ಯಾ ಉರುಡುಗ ಓಕೆ ಎಂದಿದ್ದಾರೆ! ಹಾಗಂತ ಇದು ಮದುವೆ ಪ್ರಪೋಸಲ್​ ಅಲ್ಲ. ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಮಾಡಲು ಪ್ರತಿ ಪುರುಷ ಸ್ಪರ್ಧಿ ಒಂದು ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಆಯ್ಕೆ ಮಾಡಿಕೊಳ್ಳುವಾಗ ಇಟ್ಟ ಬೇಡಿಕೆಯಲ್ಲಿ ಅರವಿಂದ್​ಗೆ ದಿವ್ಯಾ ಒಕೆ ಎಂದಿದ್ದಾರೆ.

ಮೊದಲು ಪ್ರಶಾಂತ್​ ಸಂಬರಗಿ ದಿವ್ಯಾ ಉರುಡುಗ ಬಳಿ ಜೋಡಿ ಆಗ್ತೀರಾ ಎಂದು ಕೇಳಿದರು. ಇದಕ್ಕೆ ದಿವ್ಯಾ ನೋ ಎಂದರು. ನಂತರ ಲ್ಯಾಗ್​ ಮಂಜು, ಬ್ರೋ ಗೌಡ ಕೂಡ ಪ್ರಯತ್ನ ಮಾಡಿದರು. ಇವರಿಗೂ ನೋ ಎನ್ನುವ ಉತ್ತರವೇ ಬಂತು. ಕೊನೆಗೆ ಅರವಿಂದ್​ ಜೋಡಿ ಆಗೋ ಬೇಡಿಕೆ ಇಟ್ಟಾಗ ಓಕೆ ಎಂದರು ದಿವ್ಯಾ. ಅವರು ಓಕೆ ಎಂದು ಹೇಳುತ್ತಿದ್ದಂತೆಯೇ ಮನೆಯ ಸದಸ್ಯರು ಕೂಗಿದರು. ಇದು ದಿವ್ಯಾಗೆ ಒಂದು ಕ್ಷಣ ಮುಜುಗರ ತಂದಿತ್ತು. ಆದರೂ ಅದನ್ನು ಹಿಡಿದಿಟ್ಟುಕೊಂಡರು. ನಂತರ ಗೀತಾ, ದಿವ್ಯಾ-ಅರವಿಂದ್ ಜೋಡಿ ಸಖತ್​ ಆಗಿದೆ. ಈ ಜೋಡಿ ನೋಡೋಕೆ ಕಣ್ಣು ಸಾಕಾಗಲ್ಲ ಎಂದರು. ಆಗ ದಿವ್ಯಾಗೆ ಮತ್ತಷ್ಟು ಮುಜುಗರವಾಯ್ತು.

ಈ ವಾರ ನಾಮಿನೇಟ್​ ಆದ ಸದಸ್ಯರು:

ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್​ನ ಮೊದಲೇ ವಾರದಲ್ಲಿ ಧನುಶ್ರೀ ,ಎರಡನೇ ವಾರದಲ್ಲಿ ನಿರ್ಮಲಾ ಎಲಿಮಿನೇಟ್​​ ಆಗಿ ಮನೆಯಿಂದ ಹೊರಹೋಗಿದ್ದಾರೆ. ಈಗ ಮೂರನೇ ವಾರದ ಎಲಿಮಿನೇಷನ್​​ ಪ್ರಕ್ರಿಯೆ ಆರಂಭವಾಗಿದೆ. ಈ ವಾರ 9 ಸದಸ್ಯರು ಬಿಗ್​ ಬಾಸ್​ ಮನೆಯಲ್ಲಿ ನಾಮಿನೇಟ್​ ಆಗಿದ್ದಾರೆ. ಅವರ ಹೆಸರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಶಮಂತ್​, ನಿಧಿ ಸುಬ್ಬಯ್ಯ, ಗೀತಾ, ರಘು, ಅರವಿಂದ್, ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್​ ಸಂಬರಗಿ ನಾಮಿನೇಟ್​ ಆದರು. ಶಂಕರ್​ ಅಶ್ವತ್ಥ್​ ನಾಮಿನೇಟ್​ ಆಗಿದ್ದರೂ ಮನೆಯ ಕ್ಯಾಪ್ಟನ್​ ಸೇವ್​ ಮಾಡಿದ್ದಾರೆ. ಶಮಂತ್​ ಹಾಗೂ ನಿಧಿಗೆ ಅತಿ ಹೆಚ್ಚು ಮತ ಬಿದ್ದಿತ್ತು. ಶಮಂತ್​ ಎರಡು ವಾರ ಸರಿಯಾಗಿ ಆಟವಾಡಿಲ್ಲ. ಕ್ಯಾಪ್ಟನ್ಸಿಯಿಂದ ಅವರು ಸೇವ್​ ಆಗಿದ್ದಾರೆ. 20ರ ಹುಡುಗನ ತರ ಆಡ್ತಾರೆ. ಉದ್ದೇಶ ಮರೆತಿದಾರೆ ಎಂದು ಮನೆ ಸದಸ್ಯರು ದೂರಿದರು. ನಿಧಿ ಮನಸ್ಸಿನಿಂದ ಆಡಿಲ್ಲ. ನಿಧಿ ಎಲ್ಲರನ್ನೂ ಇಗ್ನೋರ್​ ಮಾಡ್ತಾ ಇದಾರೆ ಎನ್ನುವ ದೂರನ್ನು ಹೇಳಿದರು.

ಇದನ್ನೂ ಓದಿ: ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್​ ಬಾಸ್​ ಎದುರು ಸ್ಪರ್ಧಿಗಳ ಹೊಸ ಬೇಡಿಕೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ