ಕೈಯಲ್ಲಿ ಮಗು ಹಿಡಿದು ಕೆಲಸಕ್ಕೆ ಹಾಜರಾದ ಮಹಿಳಾ ಟ್ರಾಫಿಕ್ ಪೊಲೀಸ್, ವಿಡಿಯೋ ವೈರಲ್
ಚಂಡೀಗಢ ಸೆಕ್ಟರ್ 15/23 ರ ರಸ್ತೆಯಲ್ಲಿ ಮಹಿಳಾ ಟ್ರಾಫಿಕ್ ಪೊಲೀಸ್ ಪ್ರಿಯಾಂಕಾ ತಮ್ಮ ಪುಟ್ಟ ಕಂದಮ್ಮನನ್ನು ಭುಜಕ್ಕೆ ಮಲಗಿಸಿಕೊಂಡೇ ಸಂಚಾರ ನಿಯಂತ್ರಣ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ.
ಚಂಡೀಗಢ: ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಎಳೆ ಮಗುವನ್ನು ಸುಧಾರಿಸುತ್ತಲೇ ಉರಿ ಬಿಸಿಲಿನಲ್ಲಿಯೂ ಕರ್ತವ್ಯ ನಿರ್ವಾಹಣೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಮಹಿಳಾ ಟ್ರಾಫಿಕ್ ಪೊಲೀಸ್ ಪ್ರಿಯಾಂಕಾ ಅವರು ತಮ್ಮ ಮಗುವಿನ ಜೊತೆ ಟ್ರಾಫಿಕ್ ನಿರ್ವಹಣೆ ಮಾಡುತ್ತಿರುವ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದು ಲೈಕ್‌ಗಳು, ರಿಟ್ವೀಟ್‌ಗಳು ಮತ್ತು ಕಾಮೆಂಟ್‌ಗಳೂಂದಿಗೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಸುಮಾರು ಬೆಳಿಗ್ಗೆ 11 ಗಂಟೆಗೆ ಚಿತ್ರಿಕರಿಸಲಾಗಿದೆ.
ಚಂಡೀಗಢ ಸೆಕ್ಟರ್ 15/23 ರ ರಸ್ತೆಯಲ್ಲಿ ಮಹಿಳಾ ಟ್ರಾಫಿಕ್ ಪೊಲೀಸ್ ಪ್ರಿಯಾಂಕಾ ತಮ್ಮ ಪುಟ್ಟ ಕಂದಮ್ಮನನ್ನು ಭುಜಕ್ಕೆ ಮಲಗಿಸಿಕೊಂಡೇ ಸಂಚಾರ ನಿಯಂತ್ರಣ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಟ್ರಾಫಿಕ್ ಪೊಲೀಸ್ ಪ್ರಿಯಾಂಕಾ ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಬಿಸಿಲಿನಲ್ಲಿ ಕಾರ್ಯನಿರ್ವಹಿಸಲು ಪರದಾಡಿದ್ದಾರೆ.
#Chandigarh : Traffic Constable Priyanka is doing her duty, with baby in her arms. ??@D_Roopa_IPS @PriyankaJShukla @sonalgoelias @ipsvijrk @ipskabra @ankidurg @ParveenKaswan @SwatiLakra_IPS @IMinakshiJoshi pic.twitter.com/8JUqf8eniV
— Vijay Kedia (@TheVijayKedia) March 6, 2021
ಸೋಶಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಹಿರಿಯ ಅಧಿಕಾರಿಯೊಬ್ಬರು, ಪ್ರಿಯಾಂಕಾರಿಗೆ ಬೆಳಿಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದರು. ಆದ್ರೆ ಅವರು ಕೆಲಸಕ್ಕೆ ಬಂದಿರಲಿಲ್ಲ. ಅದಕ್ಕಾಗಿ ಪ್ರಿಯಾಂಕಾ ಅವರಿಗೆ ಕರೆ ಮಾಡಿ ಕರ್ತವ್ಯಕ್ಕೆ ಬರುವಂತೆ ಒತ್ತಾಯಿಸಲಾಗಿತ್ತು. ಇದಕ್ಕಾಗಿ ಅವರು ತಮ್ಮ ಹಿರಿಯ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದರು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ತನ್ನ ಪುಟ್ಟ ಕಂದಮ್ಮನ ಜೊತೆ ಕೆಲಸಕ್ಕೆ ಹಾಜರಾಗಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಈ ವಿಡಿಯೋ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದು ಮಹಿಳೆಯ ಸ್ಫೂರ್ತಿದಾಯಕ ನಡೆ ಎಂದು ಕೆಲವರು ಶ್ಲಾಫಿಸಿದ್ದಾರೆ. ಹಾಗೂ ಆಕೆ ಬಿಸಿಲಿನಲ್ಲಿ ಮಗು ಹಿಡಿದು ಕರ್ತವ್ಯ ನಿರ್ವಹಿಸುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಮತ್ತೆ ಕೆಲವರು ಇದು ಅನುಕಂಪ ಸೂಚಿಸಲು ಮಾಡಿರುವ ಗಿಮಿಕ್, ಎಳೆ ಮಗುವನ್ನು ಹಿಡಿದು ಸಂಚಾರ ನಿಯಂತ್ರಿಸುತ್ತಿರುವುದು ಸರಿ ಇಲ್ಲ. ಇದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಧೂಳು, ಮಣ್ಣು, ಬಿಸಿಲಿನಿಂದ ಮಗುವಿಗೆ ಹಾನಿಯಾಗುತ್ತೆ ಎಂದು ಬೈದಿದ್ದಾರೆ. ಮತ್ತೆ ಕೆಲವರು ಮಗುವನ್ನು ಮನೆಯಲ್ಲಿಯೇ ಬಿಡಬಹುದಿತ್ತು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನಾನೆಂಬ ಪರಿಮಳದ ಹಾದಿಯಲಿ: ಮಗುವನ್ನು ಬೆಳೆಸುವುದು ವಿಶ್ವಪ್ರೇಮದ ಸಂಕೇತ